ಕಲಬುರಗಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಳಖೇಡ ಕೋಟೆಯ ಗೋಡೆ ಮತ್ತೆ ಗುರುವಾರ ಉರುಳಿ ಬಿದ್ದಿದೆ. ಸೇಡಂ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮತ್ತು ಬುಧವಾರ ರಾತ್ರಿ ಜೋರು ಮಳೆಯಾಗಿದೆ. ನಿರಂತರ
ಸತತ ಮಳೆಗೆ ಐತಿಹಾಸಿಕ ಮಳಖೇಡ ಕೋಟೆಯ ಗೋಡೆ ತೇವಗೊಂಡಿದೆ. ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ದಿಢೀರ್ ಕೋಟೆಯ ಗೋಡೆ ನೆಲಕ್ಕುರಳಿದೆ. ಸುತ್ತಲಿದ್ದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ಮಹಾಲಕ್ಷ್ಮೀ ಕೊಲೆ ಪ್ರಕರಣ: ಆರೋಪಿ ಶವವಾಗಿ ಪತ್ತೆ
ಕಳೆದ ತಿಂಗಳ ಆಗಸ್ಟ್ 31ರಂದು ಸಹ ಸತತ ಮಳೆಗೆ ಕೋಟೆಯ ಗೋಡೆ ಉರುಳಿ ಬಿದ್ದಿತ್ತು. ಆಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಉಪವಿಭಾಗ ಅಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ ಭೇಟಿ ನೀಡಿದ್ದರು. ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದರು.
ಕಳೆದೆರಡು ದಿನಗಳಿಂದ ಸುರಿದ ಮಳೆಗೆ ತಿಂಗಳಲ್ಲಿ ಎರಡನೇ ಬಾರಿ ಕೋಟೆಯ ಗೋಡೆ ಉರುಳಿ ಬಿದ್ದಿದೆ.
ಇದನ್ನೂ ನೋಡಿ: ಮುಡಾ ಹಗರಣ: ಕೋರ್ಟ್ ತೀರ್ಪಿನ ಕುರಿತು ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ