ನವದೆಹಲಿ: ಸುಮಾರು 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1.44 ಲಕ್ಷ ಮನೆಗಳ ಹಂಚಿಕೆಯನ್ನು ಒಕ್ಕೂಟ ಸರ್ಕಾರ ಹಿಂತೆಗೆದುಕೊಂಡಿದೆ. ಮನೆಗಳ ಹಂಚಿಕೆಯನ್ನು ಮಂಜೂರು ಮಾಡುವ ಗಡುವನ್ನು ತಪ್ಪಿಸಿ ಹೆಚ್ಚುವರಿ ಸಂಪನ್ಮೂಲಗಳನ್ನು ಬಯಸಿದ ಉತ್ತರ ಪ್ರದೇಶಕ್ಕೆ ಈ ಮನೆಗಳ ಹಂಚಿಕೆ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮಾರ್ಚ್ 2024 ರೊಳಗೆ ಲೋಕಸಭೆ ಚುನಾವಣೆಗೆ ಮುನ್ನ ಪಿಎಂಎವೈ-ಜಿ ಯೋಜನೆಯಡಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಒಕ್ಕೂಟ ಸರ್ಕಾರ ಹೊಂದಿದೆ.
ವರದಿಯ ಪ್ರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಿಣ್ (ಪಿಎಂಎವೈ-ಜಿ) ಯೋಜನೆಯ ಉಸ್ತುವಾರಿ ಹೊಂದಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮನೆಗಳ ಹಂಚಿಕೆಯನ್ನು ವಾಪಾಸು ಪಡೆದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ಕೊಂದ ಮಗ
ಒಟ್ಟು 2.04 ಕೋಟಿ ಮನೆಗಳನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿ (SECC) ದತ್ತಾಂಶದ ಆಧಾರದ ಮೇಲೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ 91 ಲಕ್ಷ ಮನೆಗಳನ್ನು, 2011 ರ ಎಸ್ಇಸಿಸಿ ಅಡಿಯಲ್ಲಿ ಕೈಬಿಡಲಾಗಿದೆ ಎಂದು ಹೇಳಲಾದ ಫಲಾನುಭವಿಗಳನ್ನು ಗುರುತಿಸಲು ಸರಕಾರವು ಜನವರಿ, 2018 ರಿಂದ ಮಾರ್ಚ್, 2019 ರಲ್ಲಿ ನಡೆಸಿದ ಆವಾಸ್ ಪ್ಲಸ್ ಎಂಬ ಸಮೀಕ್ಷೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.
ಆದಾಗ್ಯೂ, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಜೂನ್ 30 ರ ಗಡುವಿನ ಮೊದಲು ಒಟ್ಟು 1,44,220 ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ವಿಫಲವಾಗಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಗುಜರಾತ್, ತ್ರಿಪುರ, ಒಡಿಶಾ, ಸಿಕ್ಕಿಂ, ಮೇಘಾಲಯ, ಮಹಾರಾಷ್ಟ್ರ, ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಲಡಾಖ್, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಜಾರ್ಖಂಡ್ , ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಆಂಧ್ರಪ್ರದೇಶ ಮನೆಗಳಿಂದ ವಂಚಿತವಾಗಿದೆ.
ಮತ್ತೊಂದೆಡೆ, ಆರಂಭದಲ್ಲಿ 34.72 ಲಕ್ಷ ಮನೆಗಳನ್ನು ಮಂಜೂರು ಮಾಡಿ ಕೊಂಡಿದ್ದ ಉತ್ತರ ಪ್ರದೇಶವು ಹೆಚ್ಚುವರಿ ಮನೆಗಳಿಗೆ ಸರ್ಕಾರದ ಅನುಮೋದನೆಯನ್ನು ಕೋರಿತ್ತು. ಗ್ರಾಮೀಣಾಭಿವೃದ್ಧಿ ಖಾತೆಯನ್ನು ಹೊಂದಿರುವ ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ಸರ್ಕಾರ ಸ್ವೀಕೃತ ಮಾಡಿದೆ ಎಂದು ಮೌರ್ಯ ಹೇಳಿದ್ದಾರೆ. “ಎಲ್ಲಾ ಅರ್ಹ ಫಲಾನುಭವಿಗಳಿಗೆ ವಸತಿ ಖಚಿತಪಡಿಸಿಕೊಳ್ಳಲು ಉತ್ತರ ಪ್ರದೇಶಕ್ಕೆ ಇನ್ನೂ 95,000 ಮನೆಗಳ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಕಣ್ಣಿಟ್ಟಿಲ್ಲ: ವಿಪಕ್ಷಗಳ ಮಹಾಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ
ಸೌಜನ್ಯ ಪ್ರಕರಣ : ಮರು ತನಿಖೆಗಾಗಿ ಮೊಳಗಿದ ಧ್ವನಿ Janashakthi Media