ನವದೆಹಲಿ: ದೇಶದ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ನೂರು ಗಡಿ ದಾಟಿರುವ ಪೆಟ್ರೋಲ್ ಬೆಲೆ ಏರಿಕೆಯು ಒಂದು ದಿನ ಏನಾದರೂ ಬೆಲೆ ಏರಿಕೆಯಾಗದಿದ್ದಲಿ ಅದುವೇ ದೊಡ್ಡ ಸುದ್ದಿ ಎನಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ತೈಲ ಬೆಲೆಗಳು ಪ್ರತಿದಿನವು ಏರಿಕೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅವರು ‘ಕೇಂದ್ರ ಸರಕಾರವು ತೈಲ ಬೆಲೆಯನ್ನು ಹೆಚ್ಚಿಸದ ದಿನವೇ ವಿಶೇಷ ದಿನವೆನಿಸುತ್ತದೆ. ಪ್ರತಿ ದಿನವು ತೈಲ ಬೆಲೆಯನ್ನು ಏರಿಸಲೇಬೇಕೆಂಬ ಕೇಂದ್ರದ ನರೇಂದ್ರ ಮೋದಿ ಸರಕಾರದ ನಿಯಮವನ್ನು ಇದು ಸಾಬೀತುಪಡಿಸುತ್ತದೆ’ ಎಂದು ಕೇಂದ್ರ ಸರಕಾರದ ವಿರುದ್ಧ ಟೀಕಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ 20 ಜಿಲ್ಲೆಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್
ಕರ್ನಾಟಕವು ಒಳಗೊಂಡು ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆಯು ₹100ಕ್ಕಿಂತ ಹೆಚ್ಚಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬೆಲೆ ಹೆಚ್ಚಿಸಿದ್ದು, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ರೂ. ನೂರರ ಗಡಿ ದಾಡಿದೆ.
ಮೇ 4 ರಿಂದ ಇಲ್ಲಿಯವರೆಗೆ ಒಟ್ಟು 27 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಇಂದು (ಜೂನ್ 18ರಂದು) ಮತ್ತೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 26 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 30ಪೈಸೆಯಷ್ಟು ಏರಿಕೆಯಾಗಿದೆ.
ತೈಲ ಬೆಲೆಗಳ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷವು ಈಗಾಗಲೇ ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.