ಅರ್ಬಾಜ್‌ ಕೊಲೆ ಪ್ರಕರಣ : 8 ಜನರ ಬಂಧನ

ಬೆಳಗಾವಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಖಾನಾಪುರದ ಕಾರ್ ಡೀಲರ್ ಅರ್ಬಾಜ್ ಅಫ್ತಾಬ್ ಮುಲ್ಲಾ ಅವರ ತಲೆ ಕಡಿದು ಆತನ ದೇಹವನ್ನು ರೈಲ್ವೇ ಹಳಿಯ ಮೇಲೆ ಎಸೆಯಲಾಗಿತ್ತು ಸೆಪ್ಟೆಂಬರ್ 28 ರಂದು ರೈಲ್ವೇ ಸಿಬ್ಬಂದಿ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ತಾಯಿ ನೀಜಮ್ಮ ಶೇಖ್ ಅವರು ಸ್ಥಳಕ್ಕೆ ಬಂದು ಮೃತದೇಹವನ್ನು ಗುರ್ತಿಸಿದ್ದರು.

ಇದನ್ನು ಓದಿ : ಹಿಂದು ಯುವತಿಯನ್ನು ಪ್ರೀತಿಸಿದ್ದಕ್ಕೆ ಮುಸ್ಲಿಂ ಯುವಕನ‌ ಕೊಲೆ : ಹಿಂದೂಪರ ಸಂಘಟನೆಗಳ ಕೈವಾಡ?

ಮೃತನ ತಾಯಿ ನೀಜಮ್ಮ ಶೇಖ್ ಅವರು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಕೆಲ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಮಗೆ ಹಾಗೂ ತಮ್ಮ ಮಗನಿಗೆ ಬೆದರಿಕೆಗಳನ್ನು ಹಾಕಿದ್ದರು. ಯುವತಿ ತಂದೆ ಪುಂಡಲಿಕ ಮಹಾರಾಜ ಅವರು ಈ ಸಂಘಟನೆಗೆ ಸೇರಿದವರಾಗಿದ್ದು, ಮಗನನ್ನು ಕೊಲ್ಲುವ ಬೆದರಿಕೆ ಹಾಕಿದ್ದರು. ಬಳಿಕ ಹಣದ ಮೂಲಕ ಸಂಧಾನ ಮಾಡಿಕೊಳ್ಳಲು ಮುಂದಾಗಿದ್ದರು. ಮೊದಲಿಗೆ ಅರ್ಬಾಜ್ ರೂ.7,000 ನೀಡಿದ್ದ. ಆದರೆ, ಇದಕ್ಕೆ ಒಪ್ಪದ ಅವರು, ರೂ.90,000ಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಹಣ ಕೊಡುವಂತೆ ಅರ್ಬಾಜ್’ಗೆ ನಾನು ಹೇಳಿದ್ದೆ.

ಇದೇ ವೇಳೆ ಮಹಾರಾಜ ಅವರೂ ನನ್ನ ಬಳಿ ಬಂದು ಬೆದರಿಕೆ ಹಾಕಿದ್ದರು. ನನ್ನ ಮೇಲೆ ಈಗಾಗಲೇ 40 ಕೇಸುಗಳು ಬಾಕಿ ಇವೆ. ಮತ್ತೊಂದು ಪ್ರಕರಣ ದಾಖಲಾದರೆ ನನಗೇನೂ ಭಯವಿಲ್ಲ ಎಂದು ಮಹಾರಾಜ ಬೆದರಿಕೆ ಹಾಕಿದ್ದರು ಎಂದು ಅರ್ಬಾಜ್‌ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *