ಬರೇಲಿ| ಋತುಚಕ್ರ ಆದ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ನಿಲ್ಲಿಸಿದ ಪ್ರಾಂಶುಪಾಲ

ರೇಲಿ: ಋತುಚಕ್ರ ಆದ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಬಾಲಕಿಯರ ಶಾಲೆ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಋತುಚಕ್ರವಾಯಿತು.

ಇದನ್ನೂ ಓದಿ: ಮಹಾರಾಷ್ಟ್ರ| ಜಿಬಿಎಸ್ ಎಂಬ ವಿಚಿತ್ರ ರೋಗ ಹೆಚ್ಚಳ; ಮೊದಲ ಸಾವು ದಾಖಲು

ವಿದ್ಯಾರ್ಥಿನಿ ಶಾಲೆಯ ಪ್ರಾಂಶುಪಾಲರಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕೇಳಿದಳು, ಆದರೆ ಪ್ರಾಂಶುಪಾಲರು ಆಕೆಯನ್ನು ತರಗತಿಯ ಹೊರಗೆ ಒಂದು ಗಂಟೆ ನಿಲ್ಲುವಂತೆ ಮಾಡಿದರು.

ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಜಿಲ್ಲಾ ನ್ಯಾಯಾಲಯ, ಜಿಲ್ಲಾ ಶಾಲಾ ನಿರೀಕ್ಷಕರು, ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ವಿಷಯ ರಾಜ್ಯದಲ್ಲಿ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿರುವುದರಿಂದ, ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇದನ್ನೂ ನೋಡಿ: ಸುಣ್ಣಕಲ್ಲಬಿದರಿ : ಹಾಸ್ಟೆಲ್ ಅವ್ಯವಸ್ಥೆ- ವಿದ್ಯಾರ್ಥಿಗಳ ಪರದಾಟ Janashakthi Media

Donate Janashakthi Media

Leave a Reply

Your email address will not be published. Required fields are marked *