ಹಸಿರುಭೂಮಿ ಪ್ರತಿಷ್ಠಾನ ನಿರ್ಮಿಸಿದ ಗಿಡಗಳು ಸ್ಥಳೀಯರಿಂದಲೇ ಜೆಸಿಬಿಗೆ ಆಹುತಿ ಉಳಿಸುವಂತೆ ಕೆಲ ಸ್ಥಳೀಯರ ಆಕ್ರೋಶ

ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಜೈ ಜೈಮಾರುತಿ ನಗರದಲ್ಲಿ ಇಲ್ಲಿನ ಸ್ಥಳೀಯ ಜನರ ಜೊತೆ ನಿಂತು ಹಸಿರುಭೂಮಿ ಪ್ರತಿಷ್ಠಾನ ನಿರ್ಮಾಣ ಮಾಡಿದ್ದ ಮಿಯಾವಾಕಿ ಕಾಡಿನ ಗಿಡಗಳನ್ನು ಇಲ್ಲಿನ ಸ್ಥಳೀಯರೇ ಜೆಸಿಬಿಯಲ್ಲಿ ಧ್ವಂಸ ಮಾಡಿದ್ದು, ಏಕೆ ಧ್ವಂಸ ಮಾಡುತ್ತಿದ್ದೀರಿ ಎಂದು ಕೇಳಿದರೆ ಶಾಸಕರೆ ಧ್ವಂಸಮಾಡಲು ಹೇಳಿದ್ದಾರೆ, ಯಾವನು ತಡಿತಾನೆ ತಡಿರಿ ತಾಕತ್ತಿದ್ದರೆ ಎಂದು ಧಮಕಿ ಕೂಡ ಹಾಕಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ಸುಂದರ ಮಿಯಾವಾಕಿ ಕಾಡನ್ನು ರಕ್ಷಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಪ್ರತಿಷ್ಠಾನ

ಜೈ ಜೈಮಾರುತಿ ನಗರದ ನಿವಾಸಿ ನಾಗೇಶ್ ಮಾಧ್ಯಮದೊಂದಿಗೆ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನದಿಂದ ಮತ್ತು ಜಯನಗರದ ಸ್ಥಳೀಯ ನಿವಾಸಿಗಳಿಂದ ಕಳೆದ ವರ್ಷ ಮಳೆಗಾಲದಲ್ಲಿ ಮಿಯಾವಾಕಿ ಕಾಡಿನ ಪುಟ್ಟಡವಿ ಸಿಸ್ಟಂನಲ್ಲಿ 100 ರಿಂದ 120 ಗಿಡಗಳನ್ನು ಹಾಕಲಾಗಿತ್ತು. ಗಿಡ ಹಾಕುವ ಮೊದಲು ಇಲ್ಲಿನ ಸ್ಥಳೀಯ ನಿವಾಸಿಗಳ ಜೊತೆ ಸಭೆ ಕೂಡ ಮಾಡಲಾಗಿ ಎಲ್ಲಾರನ್ನು ಗಣನೆಗೆ ತೆಗೆದುಕೊಂಡು ಗಿಡ ನೆಟ್ಟು ಪೋಷಿಸಲಾಗಿತ್ತು. ಪ್ರತಿಷ್ಠಾನ

ಗಿಡ ನೆಡುವಾಗ ಎಲ್ಲಾರು ಒಟ್ಟಿಗೆ ಇದ್ದು ಖುಷಿಯಾಗಿದ್ದ ಸಮಯದಲ್ಲಿ ಏಕಾಏಕಿ ಜೆಸಿಬಿಯಲ್ಲಿ ಹಾಕಲಾಗಿದ್ದ 110 ಗಿಡಗಳನ್ನು ನೆಲಸಮ ಮಾಡಿದ್ದಾರೆ. ಇದನ್ನು ನೋಡಿದರೇ ಬೇಸರವಾಗುತ್ತದೆ. ಸ್ಥಳೀಯ ನಿವಾಸಿಗಳಿಂದಲೇ ಈ ಕೃತ್ಯ ಮಾಡಿರುವುದನ್ನು ನೋಡಿದರೇ ಸ್ಥಳೀಯರಿಗೆ ಪರಿಸರದ ಬಗ್ಗೆ ಆಸಕ್ತ ಇದಿಯೊ ಇಲ್ಲವೊ ಎನ್ನುವ ಅನುಮಾನವಿದೆ ಎಂದರು.

ಇದನ್ನೂ ಓದಿ: ಮಂಗಳೂರು| ಕಂಬಳ ನಡೆಸುವವರಿಂದ ಕೃಷಿಭೂಮಿ ಉಳಿಸಲು ಸಾಧ್ಯವೇ? – ಮುನೀರ್ ಕಾಟಿಪಳ್ಳ ಪ್ರಶ್ನೆ

ಸ್ಥಳಿಯರ ಉದ್ದೇಶ ಎನೆಂದರೇ ಗಿಡಗಳಿದ್ದರೇ ಹಾವು ಸೇರುತ್ತದೆ ಎಂದಿದ್ದು, ಆದರೇ ಗಿಡ ಹಾಕುವ ಮೊದಲೇ ತಿಳಿಸಿದ್ದರೇ ಗೊತ್ತಾಗುತಿತ್ತು. ಗಿಡ ಹಾಕಿದವರೇ ಇಂದು ನೆಲಸಮ ಮಾಡಿದ್ದಾರೆ ಎಂದು ದೂರಿದರು. ಪರಿಸರದ ಬಗ್ಗೆ ಆಸಕ್ತಿ ಇಲ್ಲದವರೇ ಇಂತಹ ಕೆಲಸ ಮಾಡಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಂದು ಗಿಡ ಬೆಳೆಸುವುದಕ್ಕೆ ಎಷ್ಟು ಕಷ್ಟವಿದೆ ಎಂಬುದು ತಿಳಿದಿದೆ.

ಇಲ್ಲಿನ ಸ್ಥಲೀಯ ಶಾಸಕರು ಈ ಗಿಡ ನೆಲಸಮ ಮಾಡಲು ಹೇಳಿದ್ದಾರೆ ಎಂದು ನೆಲಸಮ ಮಾಡಿದವರು ನಮಗೆ ತಿಳಿಸಿದ್ದಾರೆ ಎಂದು ನಾವು ನಂಬುವುದಕ್ಕೆ ಆಗುವುದಿಲ್ಲ. ಶಾಸಕರು ಗಿಡ ಮರ ಕಡಿಯಲಿ ಎಂದು ಹೇಳಿದ್ದರೇ ನಾನು ನಂಬುವುದಿಲ್ಲ ಎಂದು ಹೇಳಿದರು.

ಜೈ ಮಾರುತಿ ನಗರದ ನಿವಾಸಿಗಳಾದ ಮೋಹನ್ ಕುಮಾರ್ ಮಾತನಾಡಿ, ಮೊದಲು ಪಾರ್ಕ್ ಮಾಡಬೇಕೆಂದು ಮಾತನಾಡಲಾಗಿದ್ದು, ಆದರೇ ಸರಿಯಾದ ರೀತಿಯಲ್ಲಿ ಮಾಡಲಿಲ್ಲ. ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಯಿತು. ಕಳೆದ ಎರಡು ದಿನಗಳ ಹಿಂದೆ ಯಾರೋ ಬೆಂಕಿ ಹಾಕಿ ಮನೆಗೆ ತೊಂದರೆ ಆಯಿತು.

ಈ ನಿಟ್ಟಿನಲ್ಲಿ ನಾವುಗಳು ತೀರ್ಮಾನ ಮಾಡಿ ನೀಟಾಗಿ ಶಿಸ್ತಾಗಿ ಮಾಡೋಣ ಎಂದು ಹೆಜ್ಜೆ ಇಟ್ಟಿದ್ದೇವೆ. ಇಲ್ಲಿ ಪಾರ್ಕ್ ಮಾಡಬೇಕು ಎಂದುಕೊಂಡಿದ್ದೇವೆ. ಶಾಸಕರು ಈ ಗಿಡ ತೆಗೆಯಿರಿ ಎಂದು ಹೇಳಿಲ್ಲ. ನಾವು ಕೇಳಿಲ್ಲ ಎಂದರು. ನಾವೇ ತೀರ್ಮಾನ ಮಾಡಿಕೊಂಡು ಗಿಡಗಳನ್ನು ಡೆಮಾಲಿಸ್ ಮಾಡಿರುವುದಾಗಿ ಹೇಳಿದರು.
ಜೈ ಮಾರುತಿ ನಗರದ ನಿವಾಸಿಗಳಾದ ನೇತ್ರಾವತಿ, ಮಧುಸೂದನ್, ತಾರಕೇಶ್ವರಿ ಇತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020ರ ರದ್ದತಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ…. Janashakthi Media

Donate Janashakthi Media

Leave a Reply

Your email address will not be published. Required fields are marked *