ರೈತರ ಭೂಮಿ ಕಬಳಿಸಿ ಕಾರ್ಪೊರೇಟ್ ಕುಳಗಳಿಗೆ ಮಣೆ ಹಾಕುತ್ತಿರುವ ಕ್ರಮ ಖಂಡನೀಯ – AIDWA

ಬೆಂಗಳೂರು: ರೈತರಿಗೆ ಸೂಕ್ತ ಪರಿಹಾರ ನೀಡದೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪ್ರಭುತ್ವ ಪ್ರಯೋಜಿತ ಜಿಲ್ಲಾಡಳಿತ ಮತ್ತು ಪೊಲೀಸರ ಮೂಲಕ ನಡೆಯುತ್ತಿರುವ ದಬ್ಬಾಳಿಕೆಯನ್ನು ಸಂಘಟನೆ ಉಗ್ರವಾಗಿ ಖಂಡಿಸಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರದಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.  ಕಬಳಿಸಿ

ಕುಡಿತಿನಿ ಪ್ರದೇಶದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಹಾಗೂ ಕನ್ನಡಪರ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಕಳೆದ 1180 ದಿನಗಳಿಂದ ಭೂ ಸಂತ್ರಸ್ತ ರೈತರು ಹೋರಾಟ ನಡೆಸುತ್ತಿದ್ದಾರೆ. ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸುಮಾರು 13,000 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡದೆ ಇರುವುದನ್ನು ವಿರೋಧಿಸಿ ಈ ಹೋರಾಟ ನಡೆಯುತ್ತಿದೆ. ಕಬಳಿಸಿ

ಮೂಲತಃ ಆರ್ಸಲ್ ಮಿತ್ತಲ್ ಕಂಪನಿಗಾಗಿ ವಶಪಡಿಸಿಕೊಂಡ ಭೂಮಿಯಲ್ಲಿ ಈಗ ಜಿಂದಾಲ್ ಕಂಪನಿಯ ಜೆಎಫ್‌ಇ ಎಲೆಕ್ಟ್ರಿಕ್ ಯೋಜನೆಗಾಗಿ 204 ಎಕರೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಬಳಿಸಿ

ಇದನ್ನೂ ಓದಿ: ಗುಂಡಿಯಲ್ಲಿ ಬೈಕ್‌ ಸವಾರ ಬಿದ್ದು ಮೃತ: ಜಲ್‌ ಬೋರ್ಡ್‌ನ ಗುತ್ತಿಗೆದಾರನ ಬಂಧನ

ಈ ಸಂಬಂಧ ಹೋರಾಟಗಾರರು ಮತ್ತು ಮಾನ್ಯ ಮುಖ್ಯಮಂತ್ರಿಗಳ ನಡುವೆ ಏಪ್ರಿಲ್ 4 ರಂದು ಮಾತುಕತೆ ಸಭೆ ನಡೆಯಲು ನಿಗದಿಯಾಗಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈಗ ಏಕಾಏಕಿ ಜಿಂದಾಲ್ ಕಂಪನಿಯವರು ಮಣ್ಣು ಪರೀಕ್ಷೆ ನೆಪದಲ್ಲಿ ಭೂಮಿಗೆ ಪ್ರವೇಶಿಸಲು ಬಂದಿರುವ ಘಟನೆ ನಡೆದಿದೆ.

ಸಂತ್ರಸ್ತ ರೈತರು ಶಾಂತಿಯನ್ನು ಕದಡದೆ, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಿಗದಿಯಾಗಿದೆ ಎಂಬ ವಿಷಯವನ್ನು ತಿಳಿಸಿದ್ದರೂ ಕೂಡ ಸ್ಥಳೀಯ ಪೊಲೀಸರು ಬಲಪ್ರಯೋಗ ಮಾಡಿ ಭೂಮಿಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ 27 ಮಹಿಳೆಯರು ಸೇರಿದಂತೆ ನೂರಾರು ಜನರ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಗ್ರವಾಗಿ ಖಂಡಿಸಿದೆ.

ಅನ್ನ ಬೆಳೆಯುವ ರೈತರ ಬದುಕಿನ್ನ್ ಹಾಳುಮಾಡಿ ಧನದಾಹಿ ಕಂಪನಿಗಳ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮಣೆ ಹಾಕುವ ಕ್ರಮವನ್ನು ಯಾವ ಕಾರಣಕ್ಕೂ ಒಪ್ಪಲಾಗದು ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಮುಖ್ಯಮಂತ್ರಿಗಳನ್ನು ಸಂಘಟನೆ ಒತ್ತಾಯಿಸಿದೆ.

ಇದನ್ನೂ ನೋಡಿ: ಮನರೇಗಾ ಗ್ರಾಮೀಣ ಮಹಿಳೆಯರ ಜೀವನಾಡಿ; ಯೋಜನೆ ದುರ್ಬಲಗೊಳಿಸಬೇಡಿ – ದೇವಿ Janashakthi Media

Donate Janashakthi Media

Leave a Reply

Your email address will not be published. Required fields are marked *