ಸೊರಬದಲ್ಲಿ ಕೈಕೊಟ್ಟ ಮಂತ್ರ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸೊರಬದಲ್ಲಿ ಮತಯಂತ್ರ ಕೈಕೊಟ್ಟಿದ್ದು ಕಂಡುಬಂದಿತು.

ಸೊರಬ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು ಒಂದು ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಮತದಾರರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂದಿತು.

ಇದನ್ನೂ ಓದಿ: ರಾಜ್ಯದ ಮಹಿಳೆಯರನ್ನುದ್ದೇಶಿಸಿ ಸಿಎಂ ಸಿದ್ದರಾಮಯ್ಯ ಪತ್ರ: ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂದ‌ ಸಿಎಂ

ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಎ.ಕೆ. ಕಾಲೋನಿ ಸೇರಿದಂತೆ ಒಟ್ಟು 938 ಮತದಾರರಿದ್ದಾರೆ. ಮಹಿಳಾ ಮತದಾರರು 495 ಇದ್ದು, ಸಖಿ ಮತಗಟ್ಟೆಯನ್ನಾಗಿಸಲಾಗಿದೆ. ಬೆಳಗ್ಗೆಯಿಂದ ಮಂದ ಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ 8.30 ರ ಸುಮಾರಿಗೆ ಮತಯಂತ್ರದಲ್ಲಿ ದೋಷ ಕಂಡು ಬಂದಿತು. ಇದರಿಂದ ಕೆಲ ಕಾಲ ಮತದಾರರಲ್ಲಿ ಗೊಂದಲ ಮೂಡಿತು. ಇದಾಗಲೇ 30 ಜನ ಮತದಾನ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಹೊಸ ಮತಯಂತ್ರವನ್ನು ಅಳವಡಿಸಿದರು. ನಂತರ ಸುಮಾರು 40 ನಿಮಿಷಗಳ ತರುವಾಯ ಮತದಾನ ಪ್ರಕ್ರಿಯೆ ಆರಂಭಗೊಂಡಿತು ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ: ಕಲಬುರ್ಗಿ ಲೋಕಸಭಾ ಕ್ಷೇತ್ರ : ಖರ್ಗೆ ವರ್ಚಸ್ಸಿನ ಮುಂದೆ ಮಂಕಾದ ಮೋದಿ ಗ್ಯಾರಂಟಿ Janashakthi Media

Donate Janashakthi Media

Leave a Reply

Your email address will not be published. Required fields are marked *