ಗದಗ: ಇಂದು ವಕ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಜಮೀನಿನ ಪಹನೀಯಲ್ಲೂ ಕೂಡ ಇದೀಗ ವಕ್ಸ್ ಆಸ್ತಿ ಎಂದು ನಮೂದಾಗಿದೆ. ಜಮೀನು
ಮಠದ ಶ್ರೀಗಳಾದ ಹಾಲಕರೆಯ ಮುಪ್ಪಿನ ಬಸವಲಿಂಗ ಶ್ರೀ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ನದಾನೇಶ್ವರ ಮಠಕ್ಕೆ 500 ವರ್ಷಗಳ ಇತಿಹಾಸವಿದೆ.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಈ ಮಠಕ್ಕೆ 500 ವರ್ಷಗಳ ಇತಿಹಾಸವಿದೆ ಪಹಣೆಯಲ್ಲಿ ನಮೂದಾಗಿದ್ದನ್ನು ನೋಡಿ ನಾನಾಗೆ ಹಾಗೂ ಭಕ್ತರಿಗೆ ಶಾಕ್ ಆಗಿದೆ. 2019-20 ರ ಬಿಜೆಪಿ ಅವಧಿಯಲ್ಲಿ ಈ ಒಂದು ಮಠದ ಹೆಸರನ್ನು ವಕ್ಸ್ ಗೆ ಸೇರ್ಪಡೆಯಾಗಿದೆ ಎಂದು ಅನ್ನದಾನೇಶ್ವರ ಮಠದ ಶ್ರೀ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: “ಕಾಯಿರಿ, ಯೋಚಿಸಿ, ನಂತರ ಪ್ರತಿಕ್ರಿಯಿಸಿ” ಡಿಜಿಟಲ್ ವಂಚನೆಗಳ ಬಗ್ಗೆ ಮೋದಿಯವರ ‘ಮೂರು ಮಂತ್ರಗಳು’!!
ಮಠದ 11.19 ಎಕ್ಕರೆ ಆಸ್ತಿಯನ್ನು ವಕ್ಸ್ ಆಸ್ತಿ ಎಂದು ನಮೂದಾಗಿದೆ. ಸರ್ವೆ ನಂಬರ್ 410/2B 15.6 ಜಮೀನು ಮಠಕ್ಕೆ ದಾನವಾಗಿ ಬಂದಿದೆ.15 ಎಕರೆ 6 ಗುಂಟೆ ಜಾಗದಲ್ಲಿ 11 ಎಕರೆ 19 ಗುಂಟೆ ವಕ್ಸ್ ಆಸ್ತಿ ಎಂದು ನಮೂದು ಮಾಡಲಾಗಿದೆ.
ರೆಹಮಾನ್ ಶಾವಿ ದರ್ಗಾ ಆಸ್ತಿ ಅಂದು ಅದರಲ್ಲಿ ನಮೂದಿಸಲಾಗಿದೆ. ನೋಟಿಸ್ ನೀಡದೆ ಏಕಾಏಕಿ ಹೆಸರಲ್ಲಿ ಪಹಣಿ ತಿದ್ದುಪಡಿ ಮಾಡಲಾಗಿದೆ ಎಂದು ಸ್ವಾಮೀಜಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್ ಕೆ ದೇಸಾಯಿ Janashakthi Media