ಪರಿಸರ ನಾಶಕ್ಕೆ ಕಾರಣ ಪರಿಸರ ಶಿಕ್ಷಣದ ಕೊರತೆ ಕಾರಣ – ಡಾ. ಎಚ್. ಜಿ. ಮಂಜುನಾಥ್

ಹಾಸನ: ಪರಿಸರ ನಾಶಕ್ಕೆ ಮುಖ್ಯ ಕಾರಣ ಪರಿಸರ ಶಿಕ್ಷಣದ ಕೊರತೆ, ಆಲಸ್ಯ, ಜಲ ಅನಕ್ಷರತೆ, ಸ್ವಾರ್ಥ, ದುರಾಸೆ ಹಾಗೂ ಕೊಳ್ಳುಬಾಕತನದ ಸಂಸ್ಕೃತಿ ಎಂದು ನಿಟ್ಟೂರು ಗ್ರಾಮದ ವೈದ್ಯಾಧಿಕಾರಿ ಹಾಗೂ ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷರಾದ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು. ನಾಶ

ಅವರು ಇತ್ತಿಚೆಗೆ ಸರ್ಕಾರಿ ಪ್ರೌಢಶಾಲೆ, ಹೌಸಿಂಗ್ ಬೋರ್ಡ್, ಹಾಸನದಲ್ಲಿ ಹಾಸನ ತಾಲ್ಲೂಕು ಬಿಜಿವಿಎಸ್ ಮತ್ತು ಶಾಲೆಯ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಶಿಕ್ಷಣ ಮತ್ತು ಕಸದ ನಿರ್ವಹಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಶ

ಮಕ್ಕಳೇ ಪರಿಸರ ಸಂರಕ್ಷಣೆಯ ನಿಜವಾದ ಶಕ್ತಿ ಎಂದು ಹೇಳಿದ ಅವರು, ಬಾಲ ಪರಿಸರ ಹೋರಾಟಗಾರ್ತಿ ಗ್ರೇಟಾ ತನ್ಬರ್ಗ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. “ಒಬ್ಬ ವ್ಯಕ್ತಿಗೆ ಸರಾಸರಿ 400 ಮರಗಳು ಬೇಕಾಗಿದ್ದರೆ, ಭಾರತದಲ್ಲಿ ಕೇವಲ 28 ಮರಗಳಷ್ಟೇ ಲಭ್ಯವಿವೆ. ಮರಗಳು ಇಂಗಾಲವನ್ನು ಶೋಷಿಸಿ ಆಮ್ಲಜನಕವನ್ನು ನೀಡುತ್ತವೆ, ವಾತಾವರಣವನ್ನು ತಂಪಾಗಿಸುತ್ತವೆ ಹಾಗೂ ಆಹಾರವನ್ನು ಒದಗಿಸುತ್ತವೆ. ಒಂದು ಪೂರ್ಣ ಬೆಳೆದ ಮರವು ಸುಮಾರು 27 ರಿಂದ 30 ಲಕ್ಷ ರೂ. ಮೌಲ್ಯದ ಆಮ್ಲಜನಕ ನೀಡುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸದಸ್ಯ ತನ್ನ ಗೌರವ ಧನ ಹಣದಿಂದ ಬಸ್ ತಂಗುದಾಣ ನಿರ್ಮಾಣ

ಕಸದ ನಿರ್ವಹಣೆ ಕುರಿತು ಮಾತನಾಡಿದ ಅವರು, “ಕಸವೆಂದರೆ ಸಂಪೂರ್ಣ ವ್ಯರ್ಥವಲ್ಲ. ಸರಿಯಾದ ವಿಂಗಡಣೆ ಮಾಡಿದರೆ ಅದು ಮತ್ತೊಬ್ಬರಿಗೆ ಉಪಯುಕ್ತವಾಗಬಹುದು. ಕೇವಲ ಜೂನ್ 5ರ ಪರಿಸರ ದಿನದಂದು ಗಿಡ ನೆಡುವುದರಿಂದ ಮಾತ್ರ ಸಾಲದು; ನೆಟ್ಟ ಗಿಡಗಳನ್ನು ಕಾಪಾಡಿಕೊಳ್ಳುವುದು ಅಗತ್ಯ” ಎಂದರು.

ನಗರದ ಸುಶಿಕ್ಷಿತರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು, ಸುಡುವುದು ಹಾಗೂ ವಿಂಗಡಣೆ ಮಾಡದಿರುವುದು ಬೇಸರದ ಸಂಗತಿ ಎಂದು ಹೇಳಿದರು. “ಜನರಿಗೆ ಸಾಮಾನ್ಯ ಶಿಕ್ಷಣವಿದೆ, ಆದರೆ ಪರಿಸರ ಶಿಕ್ಷಣದ ಅರಿವು ಕಡಿಮೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ‌ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಿಜಿವಿಎಸ್‌ ಸದಸ್ಯೆ ಮೋನಿಕಾ ಪ್ಲಾಸ್ಟಿಕ್ ಬಂಧನ ಮತ್ತು ಪರಿಸರ ಸ್ಪಂದನ ಕುರಿತು ಮಾತನಾಡಿ, ಪ್ಲಾಸ್ಟಿಕ್ ವಿಂಗಡಣೆ ಹಾಗೂ ಪುನರ್‌ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಅಗಸ್ತ್ಯ ಸಂಸ್ಥೆಯ ರಾಮಜಿ ಅವರು ಪ್ಲಾಸ್ಟಿಕ್ ಕುರಿತು ಅರಿವು ಮೂಡಿಸುವ ಅಭ್ಯಾಸ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಎನ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಶಿಕ್ಷಕಿ ಹಾಗೂ ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರವೀಂದ್ರ ಅವರು ಸ್ವಾಗತಿಸಿ, ಮೀನಾಕ್ಷಿ ಆರ್. ವಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ವಸಂತ ಎಲ್.ಎಚ್., ಮೀನಾಕ್ಷಿ ಡಿ.ಎನ್., ಚನ್ನನ ಬೋರಮ್ಮ, ಚಂದ್ರಕಲಾ, ಪಾಲಕ್ಷ ಎಚ್.ಆರ್., ರಶ್ಮಿ ಎಂ.ಆರ್. ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದನ್ನೂ ನೋಡಿ: ಕೆಂಪು ಪುಸ್ತಕ ದಿನ | ದುಡಿಯುವ ಜನತೆಯ ಕೈಪಿಡಿಹಾಡಿದವರು Janashakthi Media

Donate Janashakthi Media

Leave a Reply

Your email address will not be published. Required fields are marked *