ಸ್ಕೀಡ್ ಆಗಿ ಬಿದ್ದ ಬೈಕ್; ಸವಾರನನ್ನು ಉಳಿಸಲು ಹೋಗಿ ಕಂದಕಕ್ಕೆ ಬಿದ್ದ ಬಸ್

ಡಗೇರಾ: ಇಂದು ಶನಿವಾರ, ತಾಲ್ಲೂಕಿನ ಸಂಗಮ್ ಗ್ರಾಮದಿಂದ ಜಿಲ್ಲಾ ಕೇಂದ್ರ ಯಾದಗಿರಿಗೆ ಹೊರಟಿದ್ದ ಸಾರಿಗೆ ಬಸ್ ವಡಗೇರಾ ಪಟ್ಟಣದಿಂದ ಅನತಿ ದೂರದಲ್ಲಿ ಇರುವ ಹಾದಿ ಬಸವಣ್ಣನ ಹತ್ತಿರ ಕಂದಕಕ್ಕೆ ಬಿದ್ದಿದೆ. ಬೈಕ್

ಪ್ರಯಾಣಿಕರನ್ನು ಕರೆದುಕೊಂಡು ಹೊರಟ ಸಾರಿಗೆ ಬಸ್, ಹಾದಿ‌ ಬಸವಣ್ಣ ದೇವಸ್ಥಾನದ ಹತ್ತಿರ ಬಂದಾಗ ಆಕಸ್ಮಿಕವಾಗಿ ಯಾದಗಿರಿ ಕಡೆಯಿಂದ ವಡಗೇರಾಕ್ಕೆ ಹೊರಟಿದ್ದ ಬೈಕ್ ಸವಾರ ಸ್ಕೀಡ್ ಆಗಿ ಆಯಾ ತಪ್ಪಿ ರಸ್ತೆಯ ನಡುವೆ ಬಿದ್ದ. ವಾಹನ ಸವಾರನನ್ನು ಉಳಿಸಲು ಬಸ್ ಚಾಲಕ ಬಸ್ಸನ್ನು ಬಲಕ್ಕೆ ತಿರುಗಿಸಿದಾಗ ಚಾಲಕನ‌ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ.

ಇದನ್ನೂ ಓದಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಆರಂಭಿಕ ಮುನ್ನಡೆ

ಬಸ್ ನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರು. ಇದರಲ್ಲಿ ಕೆಲವೊಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರನ್ನು ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಬಸ್ಸಿನಿಂದ ಹೊರ ತಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ‌ ಕಳುಹಿಸುವುದರ ಜತೆಗೆ‌ ಕೆಲ ಗಾಯಾಳುಗಳನ್ನು ತಮ್ಮ ಸ್ವಂತ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *