2 ಸಾವಿರ ಮುಖ ಬೆಲೆಯ 8 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ; ಇಬ್ಬರ ಬಂಧನ

ಥಾಣೆ: ಪೊಲೀಸರು ನಕಲಿ ನೋಟು ಹೊಂದಿದ್ದ ಇಬ್ಬರನ್ನು ಬಂಧಿಸಿದ್ದು, ಅವರಿಂದ ರೂ. 2 ಸಾವಿರ ಮುಖ ಬೆಲೆಯ 8 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಅಪರಾಧ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಪಾಲ್ಘರ್‌ ನಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ವಿರಾರ್ ನಿವಾಸಿ ರಾಮ್‌ ಹರಿಶರ್ಮಾ (52) ಮತ್ತು ಪಾಲ್ಘರ್‌ ನಲ್ಲಿ ವಾಸಿಸುವ ರಾಜೇಂದ್ರ ರಾವುತ್ (58) ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರೂ ಮಾರುಕಟ್ಟೆಯಲ್ಲಿ ಈ ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಗಳಿಬ್ಬರು ಎಸ್‌ಯುವಿ ಆಗಮಿಸಲಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಅವರಿಗಾಗಿ ಕಾಯುತ್ತಿದ್ದ ಪೊಲೀಸ್ ತಂಡ ಅವರನ್ನು ತಡೆದು, ವಶಕ್ಕೆ ಪಡೆದು, ಕಾರನ್ನು ತಪಾಸಣೆ ನಡೆಸಿದಾಗ ನಕಲಿ ನೋಟು ಪತ್ತೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನೋಟುಗಳ ಮೂಲ ಮತ್ತು ಅವುಗಳನ್ನು ಎಲ್ಲಿ ತಯಾರಿಸಲಾಗಿದೆ ಎಂಬುದರ ಕುರಿತು ವಿವರಗಳನ್ನು ಬಹಿರಂಗಗೊಳಿಸಲು ಬಂಧಿತರನ್ನು ಗಂಭೀರ ವಿಚಾರಣೆಗೆ ಒಳಪಡಿಸಿದೇವು. ಆಗ, ಪಾಲ್ಘರ್ ಪ್ರದೇಶದಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಬಳಸಿ ನೋಟುಗಳನ್ನು ತಯಾರಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅವರಲ್ಲಿ ಒಬ್ಬ ಉತ್ಪಾದನಾ ಘಟಕವನ್ನು ಹೊಂದಿದ್ದ. ಆದರೆ, ಲಾಕ್‌ಡೌನ್ ನಂತರ ನಷ್ಟಕ್ಕೆ ಹೋಯಿತು. ಆದ್ದರಿಂದ, ಅವರು ಎರಡು ಅಂಗಡಿಗಳಲ್ಲಿ ರಹಸ್ಯವಾಗಿ ನೋಟುಗಳನ್ನು ಮುದ್ರಿಸಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ದಂಧೆಯಲ್ಲಿ ಮತ್ತೊಬ್ಬ ವ್ಯಕ್ತಿಯೂ ಭಾಗಿಯಾಗಿದ್ದಾರೆ. ಆದರೆ, ಆತ ನಾಪತ್ತೆಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸ್‌ ತಂಡ ಕಾರ್ಯಚಾರಣೆ ಇಳಿದಿದ್ದಾರೆ.

ಆರೋಪಿಗಳ ವಿರುದ್ಧ ಕಾಸರವಾಡವಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 489 (ಎ) (ನಕಲಿ, ಯಾವುದೇ ಕರೆನ್ಸಿ ಅಥವಾ ನೋಟು), 489 (ಬಿ) (ನಕಲಿ ನೋಟುಗಳ ಸಾಗಾಣಿಕೆಗೆ ಶಿಕ್ಷೆ) ಮತ್ತು 489 (ಸಿ) (ಖೋಟಾ ಅಥವಾ ನಕಲಿ ಕರೆನ್ಸಿ ಹೊಂದುವುದು) ಮತ್ತು ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಮಾಡಿದ ಕ್ರಿಮಿನಲ್) ಪ್ರಕರಣವನ್ನು ದಾಖಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *