ಅಮೇರಿಕಾದ ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 21 ಮಂದಿ ಹತ್ಯೆ

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್ ರಾಜ್ಯದ ಯುವಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಮಂಗಳವಾರ(ಮೇ 24) ವ್ಯಕ್ತಿಯೊಬ್ಬ ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ 19 ಮಕ್ಕಳೂ ಸೇರಿದಂತೆ 21 ಮಂದಿಯನ್ನು ಹತ್ಯೆಯಾಗಿದ್ದಾರೆ. ಕಳೆದ 10 ದಿನಗಳ ಹಿಂದೆ ಬಫೆಲೊ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿಯ ನಂತರ ಮತ್ತೊಂದು ದಾಳಿ ನಡೆದಿದೆ.

18ರ ಹರೆಯದಲ್ಲಿರುವ ಯುವಕ ಸಾಲ್ವಡೋರ್ ರಾಮೊಸ್​ ಆರೋಪಿ ಎಂದು ಪೊಲೀಸರು ಹೇಳಿದ್ದು, ಈತನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸಾಲ್ವಡಾರ್ ರಾಮೋಸ್ ತನ್ನ ಅಜ್ಜಿಯನ್ನು ಕೊಂದು ಶಾಲೆಗೆ ಬಂದಿದ್ದಾನೆ. ಆತನ ಕೋಪಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಪ್ರತೀಕಾರವಾಗಿ ಆತನಿಗೆ ಗುಂಡು ಹಾರಿಸಲಾಯಿತು. ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಪ್ರಕಾರ, ಬಂದೂಕುಧಾರಿ ಸಾಲ್ವಡಾರ್ ರಾಮೋಸ್ ದೇಹದ ರಕ್ಷಾಕವಚವನ್ನು ಧರಿಸಿದ್ದ. ಆತನ ಬಳಿ ಕೈಬಂದೂಕು ಮತ್ತು ರೈಫಲ್ ಇತ್ತು ಎಂದಿದ್ದಾರೆ.

ಸಾಲ್ವಡಾರ್‌ ರಾಮೋಸ್ ಉತ್ತರ ಡಕೋಟಾದಲ್ಲಿ ಜನಿಸಿದರು, ಆದರೆ ಉವಾಲ್ಡೆಯಲ್ಲಿ ವಾಸಿಸುತ್ತಿದ್ದರು ಎಂದು ಗ್ರೆಗ್‌ ಅಬಾಟ್ ಹೇಳಿದರು. ಈತ ಇಲ್ಲಿನ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ಸಾವನ್ನಪ್ಪಿದ ಮಕ್ಕಳು 7-11 ವರ್ಷದೊಳಗಿನವರು ಎಂದು ಸಿಎನ್‌ಎನ್ ಪತ್ರಕರ್ತ ಎಡ್ ಲವಂಡೆರಾ ತಿಳಿಸಿದ್ದಾರೆ.

ದಾಳಿಕೋರ ನಿರಂತರವಾಗಿ ಗುಂಡುಗಳನ್ನು ಹಾರಿಸುತ್ತಿದ್ದನು, ಆದ್ದರಿಂದ ಅವನನ್ನು ಅನಿವಾರ್ಯವಾಗಿ ಕೊಲ್ಲಬೇಕಾಯಿತು. ಒಬ್ಬ ಬಾರ್ಡರ್ ಪೆಟ್ರೋಲ್ ಏಜೆಂಟ್ ಅವನನ್ನು ಹೊಡೆದನು. ದಾಳಿಕೋರನನ್ನು ತಡೆಯಲು ಟೆಕ್ಸಾಸ್ ಕಾನೂನು ಜಾರಿ ಅಧಿಕಾರಿಗಳು ಪ್ರತೀಕಾರ ತೀರಿಸಬೇಕಾಯಿತು.

ಅಮೆರಿಕದ ಕಾಲಮಾನ ಮಧ್ಯಾಹ್ನ ಶಾಲೆಯ ಮೇಲೆ ದಾಳಿ ನಡೆದಿದೆ. ದಾಳಿಕೋರ ತನ್ನ ಕಾರನ್ನು ದಾರಿಯಲ್ಲಿಯೇ ನಿಲ್ಲಿಸಿ ಉವಾಲ್​ಡೆ ಎಂಬಲ್ಲಿ ಇರುವ ರಾಬ್ ಎಲಿಮೆಂಟರಿ ಶಾಲೆಗೆ ಬಂದೂಕಿನೊಂದಿಗೆ ಆಗಮಿಸಿದ. ಶಾಲೆಯಲ್ಲಿ 500 ಮಕ್ಕಳಿದ್ದರು. ಈ ಪೈಕಿ ಬಹುತೇಕ ಮಕ್ಕಳು ಸ್ಪ್ಯಾನಿಷ್ ಮಾತೃಭಾಷೆ ಇರುವ ಬಡ ಕುಟುಂಬಗಳಿಂದ ಬಂದವರು.

ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ‘ಇಂತಹ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ, ಅಮೆರಿಕದಲ್ಲಿ ಪದೇಪದೇ ಆಗುತ್ತಿರುವುದು ವಿಷಾದದ ಸಂಗತಿ ಎಂದಿದ್ದಾರೆ. ಮೃತರ ಗೌರವಾರ್ಥ ದೇಶವ್ಯಾಪಿ ಬಾವುಟಗಳನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಈಗ ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯಿಂದಾಗಿ ಶಸ್ತ್ರಾಸ್ತ್ರ ಸ್ಪರ್ಧೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಹವ್ಯಾಸ ಹೆಚ್ಚುತ್ತಿದೆ ಎನ್ನಲಾಗಿದೆ.

ಅಮೆರಿಕದ ಪಾರ್ಕ್​ಲೆಂಡ್​ನಲ್ಲಿ 2018ರಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಪ್ರೌಢಶಾಲೆಯ 14 ಮಕ್ಕಳು ಸತ್ತಿದ್ದರು. 2012ರಲ್ಲಿ ಸ್ಯಾಂಡಿ ಹೂಕ್​ನಲ್ಲಿ ನಡೆದಿದ್ದ ಇಂಥದ್ದೇ ಘಟನೆಯೊಂದರಲ್ಲಿ 20 ಮಕ್ಕಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು.

Donate Janashakthi Media

Leave a Reply

Your email address will not be published. Required fields are marked *