ಹೈದರಾಬಾದ್: ತೆಲಂಗಾಣದ 118 ಶಾಸಕರ ಪೈಕಿ 72 ಮಂದಿ (84.96%) ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, 46 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವರದಿಯೊಂದು ಶನಿವಾರ ಬಹಿರಂಗಪಡಿಸಿದೆ. ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯ 101 ಶಾಸಕರ ಪೈಕಿ 58%ರಷ್ಟು ಅಂದರೆ 59 ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ತೆಲಂಗಾಣ ಎಲೆಕ್ಷನ್ ವಾಚ್ ಪ್ರಕಟಿಸಿದ ವರದಿಯು 119 ಕ್ಷೇತ್ರದ 118 ಮಂದಿಯ ಅಪರಾಧ, ಹಣಕಾಸು ಮತ್ತು ಇತರ ಹಿನ್ನೆಲೆ ವಿವರಗಳನ್ನು ವಿಶ್ಲೇಷಿಸಿದೆ. ಬಾಕಿ ಉಳಿದ ಒಂದು ಕ್ಷೇತ್ರ ಸಿಕಂದರಾಬಾದ್ ಕನ್ಟೋನ್‌ಮೆಂಟ್ ಕ್ಷೇತ್ರ ಖಾಲಿಯಾಗಿದೆ.
ಇದನ್ನೂ ಓದಿ: ‘ದಿ ವೈರ್’ ಸಂಪಾದಕರ ಸಾಧನಗಳ ವಶ ಪ್ರಕರಣ: ಹಿಂದಿರುಗಿಸುವ ಆದೇಶ ಎತ್ತಿ ಹಿಡಿದ ದಿಲ್ಲಿ ಕೋರ್ಟ್
2018ರ ವಿಧಾನಸಭೆ ಚುನಾವಣೆಗೆ ಮೊದಲು ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳು ಮತ್ತು ನಂತರ ನಡೆದ ಉಪಚುನಾವಣೆಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ. 118 ಹಾಲಿ ಶಾಸಕರ ಪೈಕಿ 72 (61%) ಹಾಲಿ ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದರೆ. 46 ( 39%) ಹಾಲಿ ಶಾಸಕರು ತಮ್ಮ ವಿರುದ್ಧ ಇರುವ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಏಳು ಶಾಸಕರು ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಸಿದ ಪ್ರಕರಣಗಳು ತಮ್ಮ ವಿರುದ್ಧ ದಾಖಲಾಗಿವೆ ಎಂದು ಘೋಷಿಸಿದ್ದಾರೆ. ನಾಲ್ಕು ಶಾಸಕರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ವರದಿಯು ಹೇಳಿದೆ. “ಈ ನಾಲ್ವರು ಹಾಲಿ ಶಾಸಕರ ಪೈಕಿ ಒಬ್ಬ ಶಾಸಕ ಐಪಿಸಿ ಸೆಕ್ಷನ್-376ರ ಅಡಿಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಘೋಷಿಸಿದ್ದಾರೆ” ಎಂದು ವರದಿಯು ಸೂಚಿಸಿದೆ.
ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಮತ್ತಷ್ಟು ಕುಸಿತ ಜನರ ಬಗ್ಗೆ ಮೋದಿ ಸರ್ಕಾರದ ಉದಾಸೀನತೆ, ನಿರಾಸಕ್ತಿಯ ಪರಿಣಾಮ- ಎಐಕೆಎಸ್
ಆಡಳಿತಾರೂಢ ಬಿಆರ್‌ಎಸ್‌ನ 101 ಶಾಸಕರಲ್ಲಿ 59 (58%) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಉಳಿದಂತೆ ಎಐಎಂಐಎಂನ ಏಳು ಶಾಸಕರಲ್ಲಿ ಆರು (86%), ಕಾಂಗ್ರೆಸ್‌ನ ಆರು ಶಾಸಕರಲ್ಲಿ ನಾಲ್ವರು (67%), ಬಿಜೆಪಿಯ ಇಬ್ಬರು ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರಲ್ಲಿ ಒಬ್ಬರು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. ತೆಲಂಗಾಣ
ಆಡಳಿತಾರೂಢ ಬಿಆರ್‌ಎಸ್‌ನ 101 ಶಾಸಕರಲ್ಲಿ 38 (38%) ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದೆ ಎಂದು ಘೋಷಿಸಿದ್ದಾರೆ. ಎಐಎಂಐಎಂನ ಏಳು ಶಾಸಕರಲ್ಲಿ ಇಬ್ಬರು (29%), ಕಾಂಗ್ರೆಸ್‌ನ ಆರು ಶಾಸಕರಲ್ಲಿ ಮೂವರು (50%), ಬಿಜೆಪಿಯ ಇಬ್ಬರು ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರಲ್ಲಿ ಒಬ್ಬರು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಗೆ ನವೆಂಬರ್ 30 ರಂದು ಮತದಾನ ನಿಗದಿಯಾಗಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರ ಸತತ ಮೂರನೇ ಅವಧಿಗೆ ಕಣ್ಣಿಟ್ಟಿದ್ದು, ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಭರ್ಜರಿ ಪ್ರಚಾರ ನಡೆಸುತ್ತಿದೆ.
ವಿಡಿಯೊ ನೋಡಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media