ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​: ಪುರಾವೆ, ಸಾಕ್ಷ್ಯ ನೀಡಬೇಕೆಂದು ತೆಲಂಗಾಣ ಸರ್ಕಾರಕ್ಕೆ ತನಿಖಾ ಆಯೋಗ ಸೂಚನೆ

ನವದೆಹಲಿ: 2019ರ ನವೆಂಬರ್​​ನಲ್ಲಿ ನಡೆದಿದ್ದ ಹಿರಿಯ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು 2019ರ ಡಿಸೆಂಬರ್​ 6ರಂದು ಬೆಂಗಳೂರು-ಹೈದರಾಬಾದ್​ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಸೇತುವೆಯ ಕೆಳಗೆ ನಾಲ್ವರನ್ನೂ ಎನ್​ಕೌಂಟರ್ ಮಾಡಿ ಕೊಲ್ಲಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪರ ವಿರೋಧಗಳು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪೊಲೀಸರ ಕ್ರಮವನ್ನು ಹಲವರು ಶ್ಲಾಘಿಸಿದ್ದರು.  ಪೊಲೀಸರ​ ಎನ್​ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್​ ಆಯೋಗ ವಿಚಾರಣೆಯನ್ನು ಕೈಗೊಂಡಿದ್ದವೆ.

ಸಾಕ್ಷಿಯನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ, ಸುಪ್ರೀಂಕೋರ್ಟ್​ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್​ ಆಯೋಗ ಸೂಚನೆ ನೀಡಿದೆ.

ಇದನ್ನು ಓದಿ: ದಿಲ್ಲಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದಿಂದ ದಹನ “ಮಗುವಿಗೆ ನ್ಯಾಯದ ಸಂದೇಶ ಗಟ್ಟಿಯಾಗಿ, ಬಲಯುತವಾಗಿ ಹೋಗಬೇಕಾಗಿದೆ” -ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

ಹೈದರಾಬಾದ್​ನ ಶಂಶಾಬಾದ್​ನ ಚತನ್​ಪಲ್ಲಿ ಬಳಿ 26 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳು ಹತ್ಯೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿದ್ದ ಸೈಬರಾಬಾದ್​ ಪೊಲೀಸರು 2019ರ ಡಿಸೆಂಬರ್‌ 6ರಂದು ಎನ್​ಕೌಂಟರ್​ ಮಾಡಿದ್ದರು.

ನ್ಯಾಯಮೂರ್ತಿ ಸಿರಪುರ್​ಕರ್​ ನೇತೃತ್ವದ ಆಯೋಗವು ಎನ್​ಕೌಂಟರ್​ಗೆ ಸಂಬಂಧಪಟ್ಟ ಸಮಗ್ರವಾದ ದಾಖಲೆಗಳನ್ನು ಸಂಗ್ರಹ ಅಂತಿಮ ಹಂತದ ಎಲ್ಲ ಕೆಲಸವನ್ನು ಕಳೆದವಾರ ಪೂರ್ಣಗೊಳಿಸಿತ್ತು. ಇದೀಗ ಸಾಕ್ಷಿ ಸಂಗ್ರಹ, ಪರಿಶೀಲನೆ ಹಂತಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಆಯೋಗವು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಎನ್​ಕೌಂಟರ್ ಮಾಡಲಾಗಿದೆ ಎನ್ನಲಾಗುವ ಸಾಕ್ಷ್ಯಗಳನ್ನು ಸಲ್ಲಿಸಿ ಎಂದು ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿದೆ. ಕಳೆದೆರಡು ದಿನಗಳ ಹಿಂದೆಯೇ ನಿರ್ದೇಶನ ನೀಡಿದ್ದ ಆಯೋಗ ಇಂದು (ಆಗಸ್ಟ್​ 21) ಕೊನೇ ದಿನ ಎಂದಿತ್ತು. ಅದರ ಅನ್ವಯ ಇಂದು ಸಂಜೆಯೊಳಗೆ ಸರ್ಕಾರ ಸಮಿತಿ ಎದುರು ಸಾಕ್ಷಿ ಸಲ್ಲಿಕೆ ಮಾಡಬೇಕಿದೆ.

ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ, ನಮ್ಮ ಬಳಿಯಿದ್ದ ಗನ್​, ಅಸ್ತ್ರಗಳನ್ನು ಕಸಿಯಲು ಮುಂದಾದರು. ಹಾಗಾಗಿ ಆತ್ಮರಕ್ಷಣೆಗಾಗಿ ಹತ್ಯೆ ಮಾಡಬೇಕಾಯ್ತು ಎಂದು ಸೈಬರಾಬಾದ್ ಪೊಲಿಸರು ಹೇಳಿಕೆ ನೀಡಿದ್ದರು. ಅತ್ಯಾಚಾರ ಆರೋಪಿಗಳ ಎನ್​ಕೌಂಟರ್ ಮಾಡಿದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಎನ್​ಕೌಂಟರ್​ ಕಾನೂನು ಬಾಹಿರ ಎಂದೂ ಹೇಳಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *