“ತೇಜಸ್ವಿ ಸೂರ್ಯನಲ್ಲಿ ಸಾವರ್ಕರ್ ಕಂಡೆ” ನೆಟ್ಟಿಗರಿಂದ ಟ್ರೋಲ್ ಆದ ಸಂಸದ

ಬೆಂಗಳೂರು : ಉಡುಪಿಯ ಕೃಷ್ಣ ಮಠದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ʼಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನʼ ಎಂಬ ವಿಚಾರದ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ “ಮುಸ್ಲಿಂ, ಕ್ರಿಶ್ಚಿಯನ್ ಘರ್ ವಾಪ್ಸಿ” ಕುರಿತು ವಿವಾದಾತ್ಮಕ ಮಾತುಗಳನ್ನಾಡಿದ್ದರು. ಈ ದೇಶದಲ್ಲಿ ಟಿಪ್ಪುವಿನ ಖಡ್ಗದಿಂದ ಮತಾಂತರವಾದ ಅನ್ಯಧರ್ಮೀಯರೆಲ್ಲರನ್ನೂ ಟಿಪ್ಪು ಜಯಂತಿಯ ದಿನದಂದೇ ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು.

” ನೀವು ಹೇಳಿದಂತೆ ನಾವು “ಘರ್ ವಾಪ್ಸಿ”ಗೆ ಸಿದ್ದರಿದ್ದೇವೆ, ನೀವು ನಿಮ್ಮನ್ನು ಹಿಂದೂ ಧರ್ಮದ ಯಾವ ಜಾತಿಯಲ್ಲಿ ಸೇರಿಸಿಕೊಳ್ಳುತ್ತೀರಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಬಹಿರಂಗ ಸವಾಲು ಹಾಕಿದ್ದರು. ಬಹಳಷ್ಟು ಜನ ಈ ಹೇಳಿಕೆಯನ್ನು ಬೆಂಬಲಿಸಿದ್ದರು. ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು. ವಿವಾದದ ವಿಡಿಯೊ ವೈರಲ್ ಆಗುತ್ತಿದ್ದಂತೆ, ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ʼಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನʼ ಎಂಬ ವಿಷಯದ ಕುರಿತು ಮಾತನಾಡಿದ್ದೆ. ಆದರೆ ನಾನಾಡಿದ ಕೆಲ ಮಾತುಗಳು ವಿವಾದಕ್ಕೀಡಾಗಿದ್ದು, ಆದ್ದರಿಂದ ನಾನು ಬೇಷರತ್‌ ಆಗಿ ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ” ಎಂದು ಟ್ವೀಟ್‌ ಮಾಡಿದ್ದರು.

ಸದ್ಯ ಈ ಟ್ವೀಟ್‌ ಹಲವು ವ್ಯಂಗ್ಯ ಪ್ರತಿಕ್ರಿಯೆಗಳಿಗೆ ಸಾಕ್ಷಿಯಾಗಿದೆ. “ನೀವು ಸಾವರ್ಕರ್‌ ತಂಡದವರು ಎನ್ನುವುದು ನಮಗೆ ತಿಳಿದಿದೆ, ತೇಜಸ್ವಿಯಲ್ಲಿ ಸಾವರ್ಕರ್ ಕಂಡೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ತೇಜಸ್ವೀ ಸೂರ್ಯನನ್ನು ಕಿಚಾಯಿಸಿದ ಟ್ವೀಟ್ ಗಳು ಈ ಕೆಳಗಿನಂತಿವೆ.

ಯಶ್ ಗೌಡ ಎನ್ನುವವರು ತೇಜಸ್ವಿಯಲ್ಲಿ ಸಾವರ್ಕರ್ ಕಂಡೆ ಎಂದೆ ಟ್ವೀಟ್ ಮಾಡಿದ್ದಾರೆ. 

ಡಾ.ಯೂಸುಫ್ ಖಾನ್ ಎನ್ನುವವರು ಉಡುಪಿಯ ಮಠದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸಾವರ್ಕರ್ ಶಿಷ್ಯ ತೇಜಸ್ವಿ ಸೂರ್ಯ ಕೊನೆಗೂ ಕ್ಷಮೆ ಕೇಳಿದ್ದಾನೆ.

@Ayaz9166 ಎಂಬ ಹೆಸರಿನವರು ಸಾವರ್ಕರ್ ನ ಹನ್ನೊಂದನೇ ಜನ್ಮ 🤦🤦ಇವನು ಹೇಳಿದಕ್ಕಿಂತ ಮಾಡಿದಕ್ಕಿಂತ ವಾಪಸ್ ಪಡೆದಿದ್ದೆ ಹೆಚ್ಚು!! ಎಂದು ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಬಿಎನ್ ಎನ್ನುವವರು ” ಸಾವರ್ಕರ್ ಬ್ರಿಟಿಷರ ಕ್ಷಮೆ ಕೇಳಿದ. ಮೋದಿ 700+ ಅಮಾಯಕ ರೈತರನ್ನ ಕೊಂದು ಕ್ಷಮೆ ಕೇಳಿದ. ಇನ್ನು ಈ ಚಿಲ್ಲರೆ ಡೈಪರ್ ಸೂರ್ಯ ಕೋಮುವಾಂತಿ ಮಾಡಿ ಕ್ಷಮೆ ಕೇಳಿದ. ಕ್ಷಮೆ ಕೇಳೋದು ಇವರ ರಕ್ತಗುಣ ಎಂದು ಟ್ವೀಟ್ ಮಾಡಿದ್ದಾರೆ. 

“ನೀವು ನಿಮ್ಮ ಹೇಳಿಕೆಗಳನ್ನು ಹಿಂಪಡೆಯುವ ಬದಲು ಸಂಸದ ಸ್ಥಾನವನ್ನೇ ಹಿಂಪಡೆದುಬಿಡಿ. ಗಾಂಧೀಜಿಯ ಶಾಂತಿಯನ್ನು ನಂಬುವ ಈ ಭಾರತದ ಮಣ್ಣಿನಲ್ಲಿ ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ”  ಎಂಬ ಟ್ವೀಟ್ ಗಳು ಇವೆ.

ಒಟ್ಟನಲ್ಲಿ “ಆಡಬಾರದ ಮಾತನ್ನು ಆಡಿ ಬಾಯಿ ಸುಟ್ಟುಕೊಂಡ್ರು” ಅನ್ನೋಹಾಗೆ ತೇಜಸ್ವಿ ಸೂರ್ಯ ಸ್ಥಿತಿಯಾಗಿದೆ. ನೆಟ್ಟಿಗರಿಂದ ಬುದ್ಧಿವಾದ ಹೇಳಿಸಿಕೊಂಡ ಸಂಸದ ಎಂಬ ನಾಮಾಂಕಿತ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

 

Donate Janashakthi Media

Leave a Reply

Your email address will not be published. Required fields are marked *