ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.ತೇಜಸ್ವಿ ಸೂರ್ಯ
ಏಪ್ರಿಲ್ 4 ರ ಗುರುವಾರ ತೇಜಸ್ವಿಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತೇಜಸ್ವಿ ಸೂರ್ಯರ ಚುನಾವಣಾ ಮಾದರಿ ನೀತಿ ಸಂಹಿತಿ ಉಲ್ಲಂಘನೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ತೇಜಸ್ವಿ ಸೂರ್ಯ
ಬೆಂಗಳೂರಿನ ಕೆಲವು ಕಾಲೇಜುಗಳು ತನ್ನ ವಿದ್ಯಾರ್ಥಿಗಳನ್ನು ಬಿಜೆಪಿ ಸಂಸದರಿಗೆ ಕೆಲಸ ಮಾಡಲು ಕಳುಹಿಸುತ್ತಿವೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಾತಿಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ)ಯ ತೇಜಸ್ವಿಸೂರ್ಯ ನಾಮಪತ್ರದಂದು ಜಾಥಾಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ತೇಜಸ್ವಿ ಸೂರ್ಯ
ಅಲ್ಲದೇ ಭಾರತೀಯ ಯುವ ಕಾಂಗ್ರೆಸ್ (IYC) ಕರ್ನಾಟಕವು ವಾಟ್ಸಾಪ್‌ನಲ್ಲಿ ಜೈನ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಬಂದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಅದರಲ್ಲಿ, ‘ಹಲೋ ಸದಸ್ಯರೇ, ನಾಳೆ ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಸದಸ್ಯರು ತೇಜಸ್ವಿ ಸೂರ್ಯ ಅವರ ಜಾಥಾದಲ್ಲಿ ಬೆಳಿಗ್ಗೆ 9:00 ಗಂಟೆಗೆ ಮೈಯಾಸ್ ಹೋಟೆಲ್ ಜಯನಗರದ ಬಳಿ ಸೇರಬೇಕು. ಬಂದವರಿಗೆ ಟೀ ಶರ್ಟ್ ಕೊಡುತ್ತಿದ್ದೇವೆ. ಆದ್ದರಿಂದ ಯಾವ ವಿದ್ಯಾರ್ಥಿಗಳು ಕೂಡ ತಡ ಮಾಡಬೇಡಿ. ಹಾಜರಾತಿಯನ್ನು ತೆಗೆದುಕೊಳ್ಳುವಾಗ ಎಲ್ಲರೂ ಅಲ್ಲಿ ಹಾಜರಿರಬೇಕು. ತಪ್ಪಿದ್ದಲ್ಲಿ ಯಾವುದೇ ಕ್ಷಮೆಯನ್ನು ಪರಿಗಣಿಸಲಾಗುವುದಿಲ್ಲ ಎನ್ನುವುದು ಈ ಸಂದೇಶವಾಗಿದೆ.
ಇದನ್ನು ಟೀಕಿಸಿರುವ ಕಾಂಗ್ರೆಸ್ ‘ಸೂರ್ಯನ ಹೆಜ್ಜೆ’ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ ? ‘ಕಾಲೇಜು ವಿದ್ಯಾರ್ಥಿಗಳು ರಾಜಕೀಯ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದ ತೇಜಸ್ವಿ ಸೂರ್ಯ ಅವರ ನಡೆ ಎಷ್ಟು ಸರಿ? ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಸಂಸದೆ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ? ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ?’ ಎಂದು ಪ್ರಶ್ನಿಸಿದೆ.
ಇನ್ನು ಜಯನಗರದ ಮಾಜಿ ಶಾಸಕಿಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೌಮ್ಯಾರೆಡ್ಡಿ, ಸೂರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ನನ್ನ ವಿರುದ್ಧ ಶೋಭಾ ಕರಂದ್ಲಾಜೆ ಅವರು ಯಾವಾಗ ದ್ವೇಷ ಭಾಷಣ ಮಾಡುತ್ತಾರೋ ಎಂಬ ಭಯ ಕಾಡುತ್ತಿದೆ; ಎಸ್.ಟಿ.ಸೋಮಶೇಖರ್
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಅಪರಿಚಿತರು ಹ್ಯಾಂಡಲ್ ಮಾಡುತ್ತಿರುವ ಎಕ್ಸ್ ಟ್ವಿಟ್ಟರ್‌ನಲ್ಲಿನ ಪೋಸ್ಟ್ ಸೂರ್ಯನ ಜಾಥಾ ಎಂದು ಹೇಳಿದೆ. ಈ ಸಂಬಂಧ ಸಂದೇಶಗಳನ್ನು ಕಾಲೇಜಿನ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕಳೆದ ತಿಂಗಳು, ಮುಂಬೈನ ಕಾಂದಿವಲಿಯಲ್ಲಿರುವ ಠಾಕೂರ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಬಿಜೆಪಿಯ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿಯೂಷ್ ಗೋಯಲ್ ಪುತ್ರ ಧೃವ ಗೋಯಲ್‌ನ ಭಾಷಣ ಕೇಳುವಂತೆ ಮುಂಬೈ ಕಾಲೇಜು ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿತ್ತು.ಈ ಬಗ್ಗೆ ವಿಶ್ವವಿದ್ಯಾಲಯದಿಂದ (ಎಂಯು)ಕಾಲೇಜಿಗೆ ನೊಟೀಸ್ ಬಂದಿತ್ತು ಎಂಬುದಿಲ್ಲಿ ಗಮನಾರ್ಹ. ವಿಶ್ವವಿದ್ಯಾನಿಲಯವು ಇಂತಹ ಘಟನೆಗಳನ್ನು ರಾಜಕೀಯ ಪ್ರಚಾರಕ್ಕಾಗಿ ಅಥವಾ ಯಾವುದೇ ಸಂಬಂಧಿತ ವ್ಯಕ್ತಿ ಅಥವಾ ಪಕ್ಷಗಳನ್ನು ಪ್ರಚಾರ ಮಾಡಲು ಬಳಸದಂತೆ ಕಾಲೇಜುಗಳಿಗೆ ನಿರ್ದೇಶಿಸಿದೆ.
ಇನ್ನು ತೇಜಸ್ವಿ ಸೂರ್ಯ ವಿವಾದಗಳಲ್ಲಿ ಸಿಲುಕಿರುವುದು ಇದೇ ಮೊದಲೇನಲ್ಲ ಎಂಬುದು ಗಮನಾರ್ಹ. ಮಾರ್ಚ್ 22 ರಂದು, ನಗರತ್‌ಪೇಟೆಯಲ್ಲಿ ನಡೆದಿದ್ದ “ಹನುಮಾನ್ ಚಾಲೀಸಾ” ಘಟನೆಯನ್ನು ಸೂರ್ಯ ಕೋಮು ಸೌಹಾರ್ದತೆ ಕದಡಲು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.ಅಲ್ಲದೇ ಕೆಲವು ಮಾಧ್ಯಮಗಳು ವರದಿಯನ್ನೂ ಮಾಡಿದ್ದವು. ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸಿದ ಆರೋಪದ ಮೇಲೆ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಕೆಲವು ತಿಂಗಳುಗಳ ಹಿಂದೆ ತೇಜಸ್ವಿ ಸೂರ್ಯ, ಚೆನ್ನೈನಿಂದ ತಿರುಚ್ಚಿಗೆ ಹೋಗುವಾಗ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲುಗಳನ್ನು ತೆರೆಯುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಮತ್ತೊಂದು ಇಂತಹದ್ದೇ ವಿದ್ಯಾರ್ಥಿಗಳನ್ನು ಚುನಾವಣೆಗೆ ಬಿಜೆಪಿ ಬಳಸಿಕೊಂಡಿದೆ ಎನ್ನುವುದು ಸುದ್ದಿಯಾಗಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್, ಶಾಲಾ-ಕಾಲೇಜುಗಳಲ್ಲಿ ಮತ ಯಾಚನೆ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. “ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಶಾಲಾ ಕಾಲೇಜುಗಳಲ್ಲಿ ಮತ ಯಾಚಿಸಿದ್ದಾರೆ. ವಿದ್ಯಾರ್ಥಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು, ರಾಜಕೀಯ ಚಟುವಟಿಕೆಗಳಿಗೆ ಬಳಸುವುದು ಬಿಜೆಪಿಯ ಚುನಾವಣಾ ಅಕ್ರಮದ ಸಾಮಾನ್ಯ ಸಂಗತಿಯಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಕೂಡಲೇ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಬರೆದುಕೊಂಡಿದೆ.ಈ ದೃಶ್ಯದಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರು ಕೇಸರಿ ಶಾಲು ಹಾಕಿಕೊಂಡು ಕಾಲೇಜೊಂದರ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಹಸ್ತಲಾಘವ ಮಾಡಿರುವುದನ್ನು ಕಾಣಬಹುದಾಗಿದೆ.
ಇದನ್ನು ನೋಡಿ : ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಎಷ್ಟು ಮತ ಪಡೆಯಬಹುದು?