ಪೋಷಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅಮಾನತು

ಹನೂರು: ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಜಿಲ್ಲೆಗಳಲ್ಲಿ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಒಂದಾಗಿದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದೇ ದೊಡ್ಡ ವಿಚಾರ, ಹೀಗಾಗಿ ಖಾಸಗಿ ಶಾಲೆಗಳ ಹಾವಳಿ ಕಡಿಮೆಯಿದೆ. ಮಹಿಳೆ

ಆದರೆ, ಕಷ್ಟಪಟ್ಟು ಮಗುವನ್ನು ಓದಿಸುತ್ತೇನೆ ಎಂದು ಪೋಷಕ ಮಹಿಳೆ ಮಗುವನ್ನು ಶಾಲೆಗೆ ಬಿಡಲು ಬಂದರೆ ಇಲ್ಲೊಬ್ಬ ಸರ್ಕಾರಿ ಶಾಲಾ ಶಿಕ್ಷಕ, ಆಕೆಯ ಮೇಲೆಯೇ ಕಣ್ಣು ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಶಿಕ್ಷಕರ ದುರ್ನಡತೆಯನ್ನು ಕಂಡ ತಕ್ಷಣ ಈ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಮಹಿಳೆ

ಬಸಪ್ಪನದೊಡ್ಡಿ ಗ್ರಾಮ ಸಮೀಪದ ದಾಸನದೊಡ್ಡಿ ಗ್ರಾಮದ ಭಾಗ್ಯ ಎಂಬುವರ ಪುತ್ರ ಮಾದೇವ ಅಂಗವಿಕಲವಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ ನ.8 ರಂದು ಶಾಲೆಯಲ್ಲಿ ಅಂಗವಿಕಲ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಾಗ್ಯ ಅವರು ಶಾಲೆಗೆ ತೆರಳಿದ್ದರು.

ಇದನ್ನೂ ಓದಿ: ಮಕ್ಕಳ ದಿನ – ಆಚರಣೆ ವಾಸ್ತವಗಳ ನಡುವೆ

ಈ ವೇಳೆ ಇಲ್ಲಿನ ಮುಖ್ಯ ಶಿಕ್ಷಕರು ಸಮೀಪದ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅಲ್ಲಿಗೆ ತೆರಳಿದ ಭಾಗ ಆಹಾರ ಪದಾರ್ಥಗಳನ್ನು ನೀಡುವಂತೆ ಶಿಕ್ಷಕ ವೆಂಕಟನಾರಾಯಣ ರನ್ನು ಕೇಳಿದ್ದಾರೆ. ಪ್ರತಿನಿತ್ಯ ಶಾಲೆಗೆ ಮಗುವನ್ನು ಬಿಡಲು ಬರುತ್ತಿದ್ದರಿಂದ ಈ ಶಿಕ್ಷಕ ಅವರನ್ನು ಸಲುಗೆಯಿಂದ ಮಾತನಾಡಿಸಿ, ಆ ದಿನ ಅಸಭ್ಯ ವರ್ತನೆ ತೋರಿದ್ದಾನೆ.

ಇದೀಗ ಕೆಲಸದಿಂದ ಸಸ್ಪೆಂಡ್ ಆಗಿ ಮನೆಯಲ್ಲಿ ಕುಳಿತಿದ್ದಾನೆ. ಈ ಬಗ್ಗೆ ತಿಳಿದ ಸ್ಥಳೀಯರು ಶಿಕ್ಷಕನಿಗೆ ಥಳಿಸಿದ್ದು ನ.11ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ಭಾಗ್ಯ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಬಿಇಒ ಗುರುಲಿಂಗಯ್ಯ ಅವರು ವೆಂಕಟನಾರಾಯಣ ಅವರನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ದೇವೇಗೌಡ್ರೆ.. ನಿಮ್ಮನ್ನು ಸಿಎಂ ಮಾಡಿದ್ದು ಯಾರು? ಸಿದ್ದರಾಮಯ್ಯ ಪ್ರಶ್ನೆ Janashakthi Media

Donate Janashakthi Media

Leave a Reply

Your email address will not be published. Required fields are marked *