ಮಣಿಪುರದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ; ಹಲವು ಶಸ್ತ್ರಾಸ್ತ್ರ ಮದ್ದುಗುಂಡುಗಳು ವಶ

Please follow and like us:
ಇಂಫಾಲ: ಭದ್ರತಾ ಪಡೆಯು ಮಣಿಪುರದ ಜಿರೀಬಾಮ್ ಮತ್ತು ಚುರ್‌ಚಂದಪುರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರದಂದು ಜಿರೀಬಾಮ್ ಜಿಲ್ಲೆಯ ಚಂಪಾನಗರ, ನಾರಾಯಣಪುರ ಮತ್ತು ತಂಗ್‌ಬೋಪುಂಜ್ರೆ ಪ್ರದೇಶಗಳಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿವೆ.

ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ : ಅತೀ ಭ್ರಷ್ಟ ಚುನಾವಣೆಗೆ ಸಾಕ್ಷಿ

ಈ ವೇಳೆ 2 ಇಂಚಿನ ತೋಪು, 36 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುರ್‌ಚಂದಪುರ ಜಿಲ್ಲೆಯ ಎಚ್.ಕೋಟ್ಲಿಯನ್ ಗ್ರಾಮದಲ್ಲಿ 303 ರೈಫಲ್, ಒಂದು 9 ಎಂಎಂ ಪಿಸ್ತೂಲ್, ಎರಡು ಸ್ಥಳೀಯ ನಿರ್ಮಿತ ಫಿರಂಗಿ ಹಾಗೂ 5 ಎಕೆ 47 ಬಂದೂಕು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ನೋಡಿ: ದೇಶದಲ್ಲಿ ಯಾರೂ ಸಂತೋಷವಾಗಿಲ್ಲ: ನಟ ಪ್ರಕಾಶ್ ರೈ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *