ರಾಣೇಬೆನ್ನೂರ: ತಾಲ್ಲೂಕಿನ ಕಾಕೋಳ ಗ್ರಾಮದ ವಿದ್ಯಾರ್ಥಿನಿ ಸಹನಾ ಅಡಿವೇರ್ ಗೆ ಆದ ಅನ್ಯಾಯದ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಡಿಡಿಪಿಯು ಉಮೇಶಪ್ಪ ಹೆಚ್ ಅವರಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ರಂದು ತಾಲ್ಲೂಕಿನ ಕಾಕೋಳ ಗ್ರಾಮದಲ್ಲಿರುವ ವಿದ್ಯಾರ್ಥಿನಿ ಮನೆ ಬಾಗಿಲಿಗೆ ಹೆಚ್.ಬಿ.ಎಸ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ನಿಯೋಗ ಹೋಗಿ ವರ್ಗಾವಣೆ ಪತ್ರ (ಟಿಸಿ) ಹಾಗೂ ಕಟ್ಟಿಸಿಕೊಂಡ ಪೂರ್ತಿ ಶುಲ್ಕವನ್ನು ಮರು ಹಿಂದಿರುಗಿಸಿದ್ದಾರೆ.
ಬಿ.ವಿ.ಎಸ್ ಮೆಡಿಕಲ್ ಸಂಸ್ಥೆ ದಾವಣಗೆರೆ ಸಂಬಂಧ ಪಟ್ಟ ಹೆಚ್.ಎಸ್.ಬಿ ಪಿ.ಯು ಮಹಾವಿದ್ಯಾಲಯವು 10.000 ರೂ ಕಟ್ಟಿಸಿಕೊಂಡು ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡದೆ ದಾಖಲಾತಿ ಮಾಡಿಕೊಂಡು ಸಹನಾ ವಿದ್ಯಾರ್ಥಿನಿಗೆ ವಿದ್ಯಾಭ್ಯಾಸ ಇಷ್ಟವಾಗದ ಸಂದರ್ಭದಲ್ಲಿ ಬೇರೆ ಕಾಲೇಜಿಗೆ ಹೋಗಬೇಕು ಎಂದಾಗ 25.000 ರೂ ಕಟ್ಟಿ ಟಿಸಿ ತೆಗೆದುಕೊಂಡ ಹೋಗಬೇಕು ಎಂದು ಹೆಚ್.ಎಸ್.ಬಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸುನೀತಾ ಅವರು ವಿದ್ಯಾರ್ಥಿನಿ ಸಹನಾ ಅಡಿವೇರ್ ಹಾಗೂ ಪಾಲಕರಿಗೆ ವಿಪರೀತ ಕಿರುಕುಳ ನೀಡಿ ಒತ್ತಡ ಹಾಕಿದ ರಿಂದ ಬೇಸತ್ತು ಎಸ್ಎಫ್ಐ ಸಂಘಟನೆ ದೂರ ನೀಡಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲು ಏರಿದರು.
ಇದನ್ನು ಓದಿ : ಚೇಳೂರು ತಾಲ್ಲೂಕಿನಲ್ಲಿ ಹಾಸ್ಟೆಲ್ ಗಳ ಸಂಖ್ಯೆಯನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಂದ ಪತ್ರ ಚಳುವಳಿ: ಎಸ್ಎಫ್ಐ
ಡಿಡಿಪಿಯು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಕೂಡಲೇ ಟಿಸಿ ಹಾಗೂ ಶುಲ್ಕವನ್ನು ಮುರು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು. ಅದರ ಪರಿಣಾಮವಾಗಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಸ್ವತಃ ವಿದ್ಯಾರ್ಥಿನಿ ಮನೆಗೆ ಶುಕ್ರವಾರ ಭೇಟಿ ನೀಡಿ ವರ್ಗಾವಣೆ ಪತ್ರ (ಟಿಸಿ) ಹಾಗೂ ಕಟ್ಟಿಸಿಕೊಂಡ ಶುಲ್ಕ 10.000 ರೂ ವನ್ನು ಹೆಚ್.ಎಸ್.ಬಿ ಕಾಲೇಜ್ ಆಡಳಿತ ಮಂಡಳಿಯ ಪ್ರೀತಮ್ ಡಿ.ಬಿ, ವೀರೇಶ ಬಣಕಾರ ಅವರು ವಿದ್ಯಾರ್ಥಿನಿ ಸಹನಾ, ಸಾವಿತ್ರ ಅಡಿವೇರ್, ಮಹಾಂತೇಶ ಅಡಿವೇರ್ ಅವರಿಗೆ ಹಸ್ತಾಂತರಿಸಿದರು.
ಡೊನೇಷನ್ ವಸೂಲಿಯು ಸರ್ಕಾರದ ನಿಯಮ ಉಲ್ಲಂಘನೆ ಮೀರಿ ಹೆಚ್.ಎಸ್.ಬಿ ಪಿ.ಯು ಮಹಾವಿದ್ಯಾಲಯವು ಸಹನಾ ಅಡಿವೇರ್ ಸೇರಿದಂತೆ 22 ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಡಿಡಿಪಿಯು ಅವರು ಖುದ್ದಾಗಿ ಕಾಲೇಜ್ ಭೇಟಿ ನೀಡಿ ಅಗತ್ಯ ಸೌಕರ್ಯಗಳನ್ನು ಪರಿಶೀಲಿಸಿ ಶಿಕ್ಷಣ ಕಾಯಿದೆ ಅನ್ವಯಿಸಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಡಿ.ಬಿ. ಸುನೀತಾ ಅವರ ಮೇಲೆ ಸೇರಿದಂತೆ ಸಂಸ್ಥೆ ಮೇಲೆ ಶಿಸ್ತು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಆಗ್ರಹಿಸಿದರು.
ಇದನ್ನು ನೋಡಿ : ಕೇಂದ್ರ ಬಜೆಟ್ 2024-25 : ಬಡ ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಬಜೆಟ್Janashakthi Media