ಚೆನೈ, ಫೆ.09 : ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ತಮ್ಮ ಹೊಸ ಚಿತ್ರವಾದ ಕೂಜಂಗಲ್ (ಪೆಬಲ್) 50ನೇ ಅಂತರಾಷ್ಟ್ರೀಯ ರೋಟರ್ಡ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಕೂಜಂಗಲ್ ಚಿತ್ರವನ್ನು ನಾನ್ನು ಮತ್ತು ನನ್ನ ಗೆಳತಿ ನಯನತಾರ ನಿರ್ದೇಶಿಸುತ್ತಿದ್ದೇವೆ, ಈ ಚಿತ್ರದಲ್ಲಿ ಎಲ್ಲರೂ ಹೊಸಬರಿದ್ದಾರೆ, ವಿಶೇಷವೆಂದರೆ ಈ ಚಿತ್ರ ರೌಡಿ ಬ್ಯಾನರ್ಸ್ನಲ್ಲಿ ಬರಲಿದೆ. ಇದು ನಯನತಾರ ಅವರ ಮೂರನೆ ಚಿತ್ರವಾಗಿದ್ದು, ಈ ಬ್ಯಾನರ್‌ನಲ್ಲಿ ಬರುವುದು ವಿಶೇಷ ಎಂದು ತಮ್ಮ ಖಾತೆಯನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರವು ಕುಡುಕ ತಂದೆ ಮತ್ತು ಅವನ ಮಗನ ನಡುವಿನ ಸಂಬಂಧವನ್ನು ಮತ್ತು ಅವರು ತಾಯಿಯನ್ನು ಹೇಗೆ ಮರಳಿ ಪಡೆಯುತ್ತಾರೆ ಎಂಬುದನ್ನು ಅನ್ವೇಷಿಸುತ್ತದೆ, ಹೆಂಡತಿ ಗಂಡನ ನಿಂದನೆಯ ಕಾರಣದಿಂದಾಗಿ ಪೋಷಕರ ಮನೆಗೆ ಹಿಂತಿರುಗಿರುತ್ತಾಳೆ. ಅವಳನ್ನ ಮತ್ತೆ ಮರಳಿ ಗಂಡನೆ ಮನೆಗೆ ಹೇಗೆ ಕರೆತರುತ್ತಾರೆಂಬುದನ್ನು ನಿರ್ದೇಶಕ ವಿಡಂಬಡಿಸುತ್ತಾ ಹೋಗುತ್ತಾನೆ.
ಕೂಟರ್ಗಾಲ್ ಗುರುವಾರ (ಫೆಬ್ರುವರಿ 4) ರೋಟರ್ಡ್ಯಾಮ್ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರಥಮ ಪ್ರದರ್ಶನಗೊಂಡಿತು. ಸನಾಲ್ ಕುಮಾರ್ ಸಸಿಧರನ್ ಅವರ ಸೆಕ್ಸಿ ದುರ್ಗಾ ನಂತರ, ಕೂಜಂಗಲ್ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಚಿತ್ರವಾಗಿದೆ.