ಮೈಸೂರು: ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೂಚಿಸಿರುವುದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ತಂಡದೊಂದಿಗೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯಿದಿಂದ ಸೂಚನೆ ಬರುತ್ತಿದ್ದಂತೆ ನಿನ್ನೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ಮುಂದಿನ 15 ದಿನಗಳವರೆಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದೆ. ಪ್ರತಿದಿನ 24 ಸಾವಿರ ಕ್ಯೂಸೆಕ್ ಹರಿಸುವಂತೆ ತಮಿಳುನಾಡು ವಾದಿಸಿದೆ. ನಾವು ಅಷ್ಟು ನೀರು ಹರಿಸಲು ಆಗುವುದಿಲ್ಲವೆಂದು ವಾದ ಮಂಡಿಸಿದ್ದು, ಹಾಗಾಗಿ ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲು ಸೂಚಿಸಲಾಗಿದೆ ಎಂದರು.
ಸಂಕಷ್ಟ ಸೂತ್ರ ಅನುಸರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ನಮ್ಮ ಬಳಿಯೇ ನೀರಿಲ್ಲ. ಕುಡಿಯುವ ಉದ್ದೇಶಕ್ಕೆ ನಮಗೆ ನೀರು ಬೇಕು. ನಮ್ಮ ಬೆಳೆಗಳನ್ನೂ ನೋಡಬೇಕಿದೆ.ಮಳೆ ಸರಿಯಾಗಿ ಬೀಳದ ಕಾರಣ ನೀರಿನ ಕೊರತೆಯಾಗಿದೆ ಕೊಡಗಿನಲ್ಲಿ ಹಾಗೂ ನೆರೆಯ ಕೇರಳದಲ್ಲೂ ಕಡಿಮೆ ಮಳೆಯಾಗಿದೆ. ಸಂಕಷ್ಟದಲ್ಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:24 ಸಾವಿರ ಕ್ಯೂಸೆಕ್ ನೀರಿಗಾಗಿ ತಮಿಳುನಾಡು ಮನವಿ:ಆದೇಶ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಕೆಆರ್‌ಎಸ್ ಜಲಾಶಯದಲ್ಲಿ 101 ಅಡಿ ನೀರಿದೆ.ಮೊದಲು ನಿಮ್ಮ ರೈತರ ಜಮೀನಿಗೆ ನೀರು ಹರಿಸಿ ನಂತರ ಬೇರೆ ಯವರಿಗೆ ಹರಿಸಲು ಕ್ರಮ ವಹಿಸಬೇಕು. ನಮ್ಮ ರೈತರ ಹಿತ ರಕ್ಷಣೆ ಮುಖ್ಯವಾಗಿದೆ ಎಂದು ಹೇಳಿದರು