ಚೆನ್ನೈ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯ ಸರಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದು ಮಾಡಿದೆ.
ಈ ಹಿಂದೆ ಮೇ 3 ರಿಂದ 21ರವರೆಗೆ ತಮಿಳುನಾಡು ಡೈರೆಕ್ಟರ್ ಆಫ್ ಗೌರ‍್ಮಮೆಂಟ್ ಆಫ್ ಎಕ್ಸಾಂನೇಷನ್(ಟಿಎನ್‌ಡಿಜಿಇ) ಪ್ರೌಢ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಿಗದಿಪಡಿಸಿತ್ತು. ಆದರೆ ವಿಧಾನಸಭಾ ಚುಣಾವಣೆಗಳ ಹಿನ್ನೆಲೆಯಲ್ಲಿ ಮರು ದಿನಾಂಕವನ್ನು ಘೋಷಿಸಿದ ಟಿಎನ್‌ಡಿಜಿಇ ಮೇ 5 ರಿಂದ ಮೇ 31ರವರೆಗೆ ನಡೆಸಲು ನಿರ್ಧರಿಸಿತು.
ಇದನ್ನು ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ಧತಿ ಸದ್ಯಕ್ಕಿಲ್ಲ: ಸುರೇಶ್ ಕುಮಾರ್
ಈಗ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ 10ನೇ ತರಗತಿ ಪರೀಕ್ಷೆಗಳನ್ನು ಸರಕಾರ ರದ್ದುಪಡಿಸಿದೆ. ಹಾಗೂ ಮೇ 3ರಿಂದ ಆರಂಭವಾಗಬೇಕಿದ್ದ 12ನೇ ತರಗತಿ ಪರೀಕ್ಷೆಗಳ ದಿನಾಂಕವನ್ನು ಮುಂದೂಡಿದ್ದು ಮೇ 31ರಿಂದ ನಡೆಸಲು ಮುಂದಾಗಿದೆ.
ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಎಎನ್‌ಐ ಸಂಸ್ಥೆಯೊಂದಿಗೆ ಮಾತನಾಡುತ್ತ ʻʻ10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳು ಗುಂಪುಗೂಡುವುದಕ್ಕೆ ಈ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ, ತಂಜಾವೂರು ಜಿಲ್ಲೆಯ 14 ಶಾಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಇಲ್ಲಿ ಈಗಾಗಲೇ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದು ಅನಾವಶ್ಯಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ಕೋವಿಡ್: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು
ಬುಧವಾರ ಸಿಬಿಎಸ್‌ಇಯ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಂಡಿದೆ. ಮುಂದಿನ ಸೂಚನೆಗಳು ಬರುವರೆಗೂ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಟಿಎನ್‌ಡಿಜಿಇ ಏಪ್ರಿಲ್ 14ರಂದು ಪ್ರಕಟಣೆ ಹೊರಡಿಸಿದೆ.