ತಮಿಳುನಾಡು ಅಧಿವೇಶನ | ಸರ್ಕಾರದ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲ ಆರ್‌.ಎನ್. ರವಿ

ಚೆನ್ನೈ: ರಾಜ್ಯ ಸರ್ಕಾರ ವಾಡಿಕೆಯಂತೆ ಸಿದ್ದಪಡಿಸುವ ಭಾಷಣವನ್ನು ಓದಲು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಸೋಮವಾರ ನಿರಾಕರಿಸುವ ಮೂಲಕ ರಾಜ್ಯದ ಡಿಎಂಕೆ ಸರ್ಕಾರದ ಜೊತೆಗೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಿದ್ದಾರೆ. “ನಾನು ವಾಸ್ತವಿಕ ಮತ್ತು ನೈತಿಕ ಆಧಾರದ ಮೇಲೆ ಒಪ್ಪದ ಹಲವಾರು ಭಾಗಗಳು ಭಾಷಣವು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ನೀಡಿರುವ ಭಾಷಣವು ಸಂವಿಧಾನವನ್ನು ಅಪಹಾಸ್ಯ ಮಾಡುವುದರಿಂದ, ಅದಕ್ಕೆ ನಾನು ನನ್ನ ಧ್ವನಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ರಾಜ್ಯಪಾಲ ರವಿ ಅವರು, 2024 ರಲ್ಲಿ ಮೊದಲ ತಮಿಳುನಾಡು ಅಧಿವೇಶನದ ಉದ್ಘಾಟನಾ ಭಾಷಣವನ್ನು ತ್ವರಿತವಾಗಿ ಮುಗಿಸಿದ್ದಾರೆ.

ಇದನ್ನೂ ಓದಿ:ಸಂವಿಧಾನವೇ ರಾಷ್ಟ್ರೀಯ ಧರ್ಮ : ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿಗೆ ರಾಜ್ಯ ಸರ್ಕಾರ ತಿರುಗೇಟು!

ವಿಧಾನಸಭೆ ಮತ್ತು ಮಾಧ್ಯಮಗಳಿಗೆ ತಮಿಳು ಭಾಷೆಯಲ್ಲಿ ಶುಭಾಶಯ ಕೋರುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದ ಅವರು ತಿರುವಳ್ಳುವರ್ ದ್ವಿಪದಿಯನ್ನು ಉಲ್ಲೇಖಿಸಿದ್ದಾರೆ. ಭಾಷಣದ ಮೊದಲು ಮತ್ತು ನಂತರ ರಾಷ್ಟ್ರಗೀತೆ ನುಡಿಸುವಂತೆ ಮಾಡಿದ ಮನವಿಯನ್ನು ಅಧಿವೇಶನವು ಪದೇ ಪದೇ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ.

ತಮಿಳುನಾಡಿನಲ್ಲಿ ವಾಡಿಕೆಯಂತೆ ವಿಧಾನಸಭೆ ಅಧಿವೇಶನಗಳು ಪ್ರಾರಂಭವಾಗುವ ಮೊದಲು ತಮಿಳು ಭಾಷೆಯ ಹೊಗಳಿಕೆಯ ಹಾಡು ‘ತಮಿಳು ತಯ್ ವಾಲ್ತ್’ ಅನ್ನು ವಾಡಿಕೆಯಂತೆ ಹಾಡಲಾಗುತ್ತದೆ. ಅಧಿವೇಶನ ಮುಗಿದ ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.

ಇದನ್ನೂ ಓದಿ: ತಾಕತ್ತಿದ್ದರೆ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಘೋಷಣೆ ಮಾಡಿ: ಅಮಿತ್ ಶಾಗೆ ಸಿದ್ದರಾಮಯ್ಯ ಸವಾಲು

“ರಾಷ್ಟ್ರಗೀತೆಯನ್ನು ಗೌರವಿಸಲು ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅದನ್ನು ನುಡಿಸಲು ನನ್ನ ಪುನರಾವರ್ತಿತ ವಿನಂತಿಗಳು ಮತ್ತು ಸಲಹೆಗಳನ್ನು ನಿರ್ಲಕ್ಷಿಸಲಾಗಿದೆ. ನಾನು ವಾಸ್ತವಿಕ ಮತ್ತು ನೈತಿಕ ಆಧಾರದ ಮೇಲೆ ಒಪ್ಪದ ಹಲವಾರು ಭಾಗಗಳು ಈ ಭಾಷಣವು ಹೊಂದಿದೆ. ಅದಕ್ಕೆ ನನ್ನ ಧ್ವನಿಯನ್ನು ನೀಡುವುದು ಸಾಂವಿಧಾನಿಕ ಅಪಹಾಸ್ಯವಾಗಿದೆ. ಆದ್ದರಿಂದ ಸದನಕ್ಕೆ ಸಂಬಂಧಿಸಿದಂತೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ” ಎಂದು ರವಿ ಹೇಳಿದ್ದಾರೆ.

ರಾಜ್ಯಪಾಲ ಎನ್‌.ಆರ್‌. ರವಿ ಅವರು ಭಾಷಣದ ವಿಚಾರದಲ್ಲಿ ರಾಜ್ಯ ಸರ್ಕಾರದ ಜೊತೆಗೆ ತಕರಾರು ಎತ್ತಿದ್ದು ಇದುವೆ ಮೊದಲಲ್ಲ. ಈ ವರ್ಷ ತಮ್ಮ ಭಾಷಣವನ್ನು ಸಂಪೂರ್ಣವಾಗಿ ಓದಲು ನಿರಾಕರಿಸಿದ್ದ ಅವರು, ಕಳೆದ ವರ್ಷ ಕೂಡಾ ವಿವಾದ ಸೃಷ್ಟಿಸಿದ್ದರು. ರಾಜ್ಯ ಸರ್ಕಾರ ಸಿದ್ದಪಡಿಸಿದ್ದ ಭಾಷಣದಲ್ಲಿದ್ದ ‘ದ್ರಾವಿಡ ಮಾದರಿ’, ಪೆರಿಯಾರ್ ಮತ್ತು ಅಣ್ಣಾ ದೊರೈ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ದ್ರಾವಿಡ ನಾಯಕರನ್ನು ಉಲ್ಲೇಖಿಸಿದ್ದ ಹಲವಾರು ಪ್ಯಾರಾಗಳನ್ನು ಬಿಟ್ಟುಬಿಡುವ ಮೂಲಕ ವಿವಾದ ಸೃಷ್ಟಿಸಿದ್ದರು.

ಆ ಸಮಯದಲ್ಲಿ ಅವರ ನಡವಳಿಕೆಯು ವಿಧಾನಸಭೆಯಲ್ಲಿ ಕೋಲಾಹಲವನ್ನು ಉಂಟುಮಾಡಿತ್ತು ಮತ್ತು ವಿಧಾನಸಭೆಯಿಂದ ಹೊರಹೋಗಿದ್ದರು.

ವಿಡಿಯೊ ನೋಡಿ:ಗ್ರಂಥಾಲಯ ಸಮ್ಮೇಳನ : ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳು Janashakthi Media

Donate Janashakthi Media

Leave a Reply

Your email address will not be published. Required fields are marked *