ಚೆನ್ನೈ: ಗಾಂಜಾ ಹೊಂದಿದ್ದಾನೆಂಬ ಕಾರಣಕ್ಕಾಗಿ ಬಂಧಿಸಿದ ವಿಘ್ನೇಶ್ ಎಂಬ ಯುವಕ ಮಾರನೆದಿನವೇ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮರಣ ಹೊಂದಿದ್ದಾನೆ.
ಏಪ್ರಿಲ್ 18 ರಂದು ಗಾಂಜಾ ಹೊಂದಿದ್ದ ಆರೋಪದ ಮೇಲೆ 25 ವರ್ಷದ ವಿಘ್ನೇಶ್ ಮತ್ತು ಆತನ ಸಹಾಯಕನೊಂದಿಗೆ ಜಿ5 ಸೆಕ್ರಾಟಾರಿಯೆಟ್ ಕಾಲೋನಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದರು. ವಿಘ್ನೇಶ್ ಕಸ್ಟಡಿಯಲ್ಲಿರುವಾಗ ದೇಹದ ಮೇಲೆ 13 ಗಾಯಗಳಾಗಿದ್ದು, ಮರೋಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ನಿಖರವಾದ ಮಾಹಿತಿಗಾಗಿ ಕಾದುನೋಡಬೇಕಾಗಿದೆ.
ಪೊಲೀಸರು ಮೃತನ ಕುಟುಂಬದವರಿಗೆ ವಿಘ್ನೇಶ್ ರೋಗಗ್ರಸ್ತವಾಗಿ ಮರಣ ಹೊಂದಿದ್ದಾನೆಂದು ಮಾಹಿತಿ ನೀಡಿದರು. ಸಂಶಯ ವ್ಯಕ್ತಪಡಿಸಿರುವ ಮೃತನ ಕುಟುಂದವರು ಹಾಗೂ ಕೆಲ ಸಂಘಟನೆಯ ಹೋರಾಟಗಾರರು ಪೊಲೀಸರ ವಿರುದ್ಧ ದೂರು ನೀಡಿದ್ದಾರೆ.
ದೇಹದ ಹಲವು ಭಾಗಗಳಿಗೆ ಬಲವಾಗಿ ಗಾಯಗಳಾಗಿವೆ. ಕಣ್ಣು, ಮೂಗು ಹಾಗು ತಲೆಯ ಮೇಲೆ ಒಂದೇ ಸಮನಾಗಿ ಪೆಟ್ಟು ಬಿದ್ದಿದೆಯೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪೊಲೀಸರು ವಿಘ್ನೇಶಗಾಗಿ ಬೆನ್ನಟ್ಟಿ ಹಿಡಿದು ಲಾಠಿಯಲ್ಲಿ ಬಾರಿಸಿದ ದೃಶ್ಯವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣದ ನಂತರ ಸಬ್ ಇನ್ಸಪೆಕ್ಟರ್ ಹಾಗು ಕಾನ್ ಸ್ಟೇಬಲ್ ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಾಜ್ಯ ಸರ್ಕಾರವು ಅಪರಾಧ ವಿಭಾಗ, ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ)ಗೆ ವರ್ಗಾಯಿಸಿದೆ.
ಮೃತನ ಕುಟುಂಬ ವರ್ಗಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ 10 ಲಕ್ಷ ಪರಿಹಾರ ನಿಧಿ ಘೋಷಿಸಿದ್ದಾರೆ.
ಈ ಘಟನೆಯ ತನಿಖೆಯ ಕುರಿತು ಜನಪರ ಸಂಘಟನೆಯ ಹೋರಾಟಗಾರರು ದನಿಯೆತ್ತಿದ್ದಾರೆ. ಒಟ್ಟು15 ಕ್ಯಾಮೆರಾಗಳಿವೆ, ಆದರೆ ಪೊಲೀಸರು ಏನೂ ಕೆಲಸ ಮಾಡಲಿಲ್ಲ ಎಂದು ಹೇಳುತ್ತಿದ್ದಾರೆ. ರಾತ್ರಿ 11 ರಿಂದ ಮೂರು ಗಂಟೆಗಳ ಕಾಲ ವ್ಯಕ್ತಿಯನ್ನು ಚಿತ್ರಹಿಂಸೆಗೊಳಿದ್ದರೆಂದು, ಮಾನವ ಹಕ್ಕುಗಳ ಸಂಘಟನೆಯ ಪೀಪಲ್ಸ್ ವಾಚ್‌ನ ನಿರ್ದೇಶಕ ಹೆನ್ರಿ ಟಿಫಾಂಗ್ನೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಡಿಯೋದಿಂದ ತಿಳಿದುಬಂದಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ವಿಘ್ನೇಶ್ ಗಾಂಜಾ ಹೊಂದಿದ್ದು, ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬೆನ್ನಟ್ಟಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮೇಲೆ ಚಾಕು ಎಸೆದು ದಾಳಿ ಮಾಡಲು ಯತ್ನಿಸಿದ ಸ್ಥಳದ ದೃಶ್ಯಗಳಲ್ಲಿ ವಿಘ್ನೇಶ್ ಚಲನವಲನಗಳ ಬಗ್ಗೆ ವಿವರಿಸಲಾಗಿದೆ.
ಮರಣದ ನಂತರ ಪ್ರಕರಣವನ್ನು ಮುಚ್ಚಿಹಾಕಲು ಬೆಳಿಗ್ಗೆ ಸಮುದ್ರತೀರದಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವಿಘ್ನೇಶ್ ಅವರು ರೋಗಗ್ರಸ್ತಕ್ಕೆ ಒಳಗಾಗಿದ್ದರು ಹಾಗಾಗಿ ವೈದ್ಯಕೀಯ ಸಹಾಯದ ಹೊರತಾಗಿಯೂ ಉಳಿಸಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು 1 ಲಕ್ಷ ರೂಪಾಯಿ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ, ಅವರು ಹಣವನ್ನು ನಿರಾಕರಿಸಿ ವಿಘ್ನೇಶ್ ಸಾವಿನ ಬಗ್ಗೆ ನ್ಯಾಯಯುತ ತನಿಖೆಗೆ ಒತ್ತಾಯಿಸಿದರು.