ಐಪಿಎಲ್ ಅಂಕಪಟ್ಟಿಯಲ್ಲಿ ಹಾವು ಏಣಿ ಆಟ; ಯಾರಿಗೆ ಪ್ಲೇಆಫ್‌ ಎಂಬುದೇ ಕುತೂಹಲ

ಇಂಡಿಯನ್ ಪ್ರೇಮಿಯರ್ ಲೀಗ್ 2022ನೇ ಅವೃತ್ತಿಯ ಕ್ರಿಕೆಟ್ ಪಂದ್ಯಾವಳಿಗಳ ಅಂಕಪಟ್ಟಿಯಲ್ಲಿ ಹಾವು ಏಣಿ ಆಟ ಶುರುವಾಗಿದ್ದು, ಎಲ್ಲಾ ತಂಡಗಳು ಇನ್ನು ಮುಂದೆ ಬರುವ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಬಾರಿಯ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ತಳಮಳ ಸೃಷ್ಟಿಸಲು ಕಾರಣವಾಗಿದೆ. ಏಕೆಂದರೆ 2022ರ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳಲ್ಲಿ, ಗುಜರಾತ್ ಟೈಟಾನ್ಸ್‌, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್‌ ರಾಯಲ್ಸ್ ತಂಡಗಳು ಪಂದ್ಯಗಳಲ್ಲಿ ಜಯಗಳಿಸುತ್ತ ಪ್ಲೇ ಆಫ್ ಕನಸನ್ನ ಶೇಕಡ 99% ರಷ್ಟು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಿವೆ.

ಆದರೆ, ಇನ್ನುಳಿದ ಪ್ಲೆಆಫ್ ನ ನಾಲ್ಕನೇ ಸ್ಥಾನಕ್ಕೆ ಉಳಿದಿರುವುದು ಇನ್ನು ಒಂದು ಸ್ಥಾನ ಮಾತ್ರ, ಹಾಗಾಗಿ ಇನ್ನುಳಿದ ತಂಡಗಳಾದ, ಬೆಂಗಳೂರು, ಹೈದರಾಬಾದ್, ಪಂಜಾಬ್, ಡೆಲ್ಲಿ, ಕೋಲ್ಕತ್ತಾ ತಂಡಗಳು  ಪ್ಲೆ ಆಫ್ ಕನಸನ್ನ  ನನಸು  ಮಾಡಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗಿದೆ. ಆದರೆ  ಮಾಜಿ ಚಾಂಪಿಯನ್ ತಂಡಗಳಾದ ಚೆನ್ನೈ  ಮತ್ತು ಮುಂಬೈ ತಂಡಗಳು ಈ ಬಾರಿಯ  ಪ್ಲೇ ಆಫ್ ಕನಸು ಕನಸಾಗೇ ಉಳಿಯಬೇಕಾಗಿದೆ. ಹಾಗಾಗಿ ಉಭಯ  ತಂಡಗಳ  ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಉಳಿದ ತಂಡಗಳು ತಲಾ 14 ಪಂದ್ಯಗಳಲ್ಲಿ ಈಗಾಗಲೇ ಮೊದಲ ಅವೃತ್ತಿಯ ಏಳು ಪಂದ್ಯಗಳನ್ನು ಆಟವಾಡಿ ಅಂಕಪಟ್ಟಿಯಲ್ಲಿ ತಮ್ಮ  ತಮ್ಮ  ಸ್ಥಾನಮಾನಗಳನ್ನ ಗುರುತಿಸಿಕೊಂಡಿವೆ. ಹಾಗಾಗಿ ಉಳಿದಿರುವ ಪ್ಲೆ ಆಫ್ ನ  ಒಂದು ಸ್ಥಾನಕ್ಕೆ ಎಲ್ಲಾ ತಂಡಗಳು ಮೊದಲ ಅಂತದ ಆಟ ಪ್ರದರ್ಶನಕ್ಕಿಂತ ಇನ್ನು ಉಳಿದ  ಏಳು ಪಂದ್ಯಗಳಲ್ಲಿ ತಮ್ಮ ತಂಡದ ಬಲಾಬಲವನ್ನು ತೋರಿಸುತ್ತಿದ್ದೂ, ಅಂಕಪಟ್ಟಿಯಲ್ಲಿ ಕೆಳಗಡೆ ಇದ್ದ ಡೆಲ್ಲಿ, ಪಂಜಾಬ್, ಹೈದರಬಾದ್ ತಂಡಗಳು ತಮ್ಮ ಗೆಲುವಿನ  ಓಟವನ್ನು ಶುರುಮಾಡಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಉಂಟು ಮಾಡತೋಡಗಿದ್ದಾರೆ.

ಅದೇ ರೀತಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಎಲ್ಲಾ ತಂಡಗಳಿಗಿಂತ ಹೆಚ್ಚು ಪಂದ್ಯಗಳನ್ನು  ಆಡಿದ್ದು ಹನ್ನೊಂದು ಪಂದ್ಯಗಳಲ್ಲಿ 6 ಪಂದ್ಯಗಳನ್ನ ಮಾತ್ರ ಜಯಗಳಿಸಿದೆ. ಆದರೆ ಬಾಕಿ ಉಳಿದಿರುವ ಮೂರೂ ಪಂದ್ಯಗಳಲ್ಲಿ ಮೂರನ್ನೂ ಗೆಲ್ಲಬೇಕಾದ ಪರಿಸ್ಥಿತಿ ಒದಗಿಬಂದಿದ್ದು, ಗೆದ್ದರೆ ಮಾತ್ರ ಈ ಬಾರಿಯ ಆರ್‌ಸಿಬಿ ಪ್ಲೆ ಆಫ್ ಕನಸು ನನಸಾಗಿಸಿ ಅಭಿಮಾನಿಗಳಲ್ಲಿನ ನಿರಾಶೆಯನ್ನು ದೂರ ಮಾಡಬಹುದು.

ಈ ರೀತಿಯ  ಪರಿಸ್ಥಿತಿ ಇರುವುದರಿಂದಾಗಿ  ಆರ್‌ಸಿಬಿ ತಂಡ ಮೂರು  ಪಂದ್ಯಗಳನ್ನು ಗೆದ್ದರೆ ಉಳಿದ ತಂಡಗಳ ಪ್ಲೇ ಆಫ್ ಕನಸು ಕನಸಾಗಿಯೇ ಉಳಿಯುತ್ತದೆ ಮತ್ತು ಡೆಲ್ಲಿ ತಂಡವು  ಈಗಾಗಲೇ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಡೆಲ್ಲಿ ತಂಡವು  ಪ್ಲೇ ಆಪ್ ಗೆ ಬರಲು 5 ಪಂದ್ಯಕ್ಕೆ 5 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹಾಗೆ ಪಂಜಾಬ್ ತಂಡವು ಹತ್ತು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು ಉಳಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹೈದರಾಬಾದ್ ತಂಡವು  ಒಂಬತ್ತು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆದ್ದಿದ್ದು ಇನ್ನುಳಿದ ಐದು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೆಆಪ್ ಗೆ ತಲುಪಬಹುದು.

ಅಂಕ ಪಟ್ಟಿಯಲ್ಲಿ ಮೇಲಿರುವ ತಂಡಗಳು ಸಹ ಮುಂಬರುವ ಪಂದ್ಯಗಳಲ್ಲಿ ಸೋತರೆ ಅಂಕಪಟ್ಟಿಯಲ್ಲಿ ಕೆಳಗಡೆ ಇರುವ ತಂಡಗಳು ಎಲ್ಲಾ ಪಂದ್ಯಗಳನ್ನ ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಅವಕಾಶ ದೊರಕುತ್ತದೆ.

ಅಂಕಪಟ್ಟಿಯಲ್ಲಿ  ಕೆಳಗೆ ಇರುವ ತಂಡಗಳು ಮುಂಬರುವ ಎಲ್ಲಾ ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ಅಂಕಪಟ್ಟಿಯಲ್ಲಿನ  ಅಂಕಗಳು ಸಮಬಲ ಆಗುವ ಸಾಧ್ಯತೆ ಇದ್ದು ಹಾಗೇನಾದರೂ  ಆದರೆ ನೆಟ್ ಪಾಯಿಂಟ್ ರೇಟ್ (ಎನ್‌ಪಿಆರ್‌) ಮೇಲೆ ಪ್ಲೆ ಆಫ್ ಗೆ ಹೋಗಲು ಅವಕಾಶ ಸಿಗುತ್ತದೆ. ಹೀಗೆ ಈ ಬಾರಿಯ  ಐ ಪಿ ಎಲ್ ನಲ್ಲಿ ಯಾವ ತಂಡ ಪ್ಲೆ ಆಫ್ ಕನಸು ನನಸು ಮಾಡಿಕೊಳ್ಳುತ್ತದೆ ಎಂಬುದು ರೋಚಕವಾಗಿರುವುದರಿಂದ ಇನ್ನು ಈ ಬಾರಿ ಎರೆಡು ಹೊಸ ತಂಡಗಳು  ಸೇರ್ಪಡೆಯದ್ದರಿಂದ ಐಪಿಎಲ್ ಗೆ ರೋಚಕತೆ  ಸಿಗುತ್ತಿದೆ.

ಒಟ್ಟಾರೆ ಹೇಳಬೇಕಾದರೆ ಈ ಬಾರಿ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಟ್ವಿಸ್ಟ್ ಕೊಡುವುದಂತು ನಿಜ. ಯಾರು ಪ್ಲೇ ಆಫ್ ತಲುಪುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *