ರಂಗಪ್ಪನ ಗುಡ್ಡದಲ್ಲಿ ಧಗಧಗ ಬೆಂಕಿ : ಹೊತ್ತಿ ಉರಿದ ಮರಗಳು

ಶಿವಮೊಗ್ಗ : ಕೆಲ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರದ ಹುಣಸೋಡಿನಲ್ಲಿ ಸ್ಫೋಟ ಸಂಭವಿಸಿ ಭಾರಿ ಅನಾಹುತ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟ ಕೇಳಿಬಂದಿದೆ. ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದಲ್ಲಿ ಧಗಧಗ ಬೆಂಕಿ ಕಾಣಿಸಿಕೊಂಡು ಮರಗಳು ಹೊತ್ತಿ ಉರಿದಿವೆ.

ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದ ಸುತ್ತಮುತ್ತದ ಜನ ಸ್ಫೋಟಕ್ಕೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರು ಹಾಗೂ ಇನ್ನಿತರ ನಗರ ಪ್ರದೇಶಗಳಿಗೆ ವಿದ್ಯುತ್ ನೀಡಲು ಕೆಪಿಟಿಸಿಎಲ್ ಇಲಾಖೆಯ ಹೈಟೆನ್ಷನ್ ಲೈನ್ ಹಾದುಹೋಗಿದ್ದು, ಈ ಲೈನ್ ಹತ್ತಿರದಲ್ಲೇ ಬೃಹತ್ ಪ್ರಮಾಣದ ಅಕೇಶಿಯಾ ಮರಗಳು ಬೆಳೆದಿವೆ. ಹೈಟೆನ್ಷನ್ ವೈರ್​ಗೆ ಮರ ತಾಗಿ ಭಾರಿ ಸ್ಫೋಟವಾಗಿದೆ.

ಸ್ಫೋಟದ ಬೆನ್ನಲ್ಲೇ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಉರಿದಿದೆ. ಈ ಬೃಹತ್ ಸ್ಪೋಟ ಪಶ್ಚಿಮಘಟ್ಟದ ಜನರನ್ನ ಬೆಚ್ಚಿ ಬೀಳಿಸಿದ್ದು, ಪರಿಸರದ ಮೇಲೆ ತೀವ್ರತರವಾದ ಆಘಾತವುಂಟು ಮಾಡಿದೆ. ಇದು ಕೆಪಿಟಿಸಿಎಲ್​ನ  ನಿರ್ಲಕ್ಷತನವೆಂದು ಜನ ಆರೋಪಿಸಿದ್ದಾರೆ.

ಸಾಗರ ತಾಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಕಾಲೋನಿಯಲ್ಲಿರುವ 250 ಕ್ಕೂ ಹೆಚ್ಚು ಕುಟುಂಬಗಳ ಜೀವ ಹಾಗೂ ಜೀವನ ಕೆಪಿಟಿಸಿಎಲ್ ಅಧಿಕಾರಿಗಳ ನಿರ್ಲಕ್ಷತನದಿಂದ ಭಯದಿಂದ ಸಾಗುತ್ತಿದೆ. ವರ್ಷವಿಡೀ ಈ ರೀತಿಯ ವಿದ್ಯುತ್ ಅವಘಡಗಳು ಸರ್ವೇ ಸಾಮಾನ್ಯವಾಗಿರುತ್ತದೆ ಆದರೆ ಈ ಅವಘಡ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *