ಹೊಸಕೋಟೆ: ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯವಾಗಿರುವ ಟೇಲರಿಂಗ್ ಕುಟುಂಬಗಳು ದಶಕಗಳಿಂದಲೂ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದು, ರಾಜ್ಯದಲ್ಲೂ ಪ್ರತ್ಯೇಕ ಟೇಲರಿಂಗ್ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ನಗರದ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಘಟಕದ ಪಧಾಧಿಕಾರಿಗಳ ಗುರುತಿನ ಚೀಟಿ ವಿತರಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ಟೇಲರಿಂಗ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆನಂದ್ ಜಿ. ಕಾಂಚನ್ ಒತ್ತಾಯಿಸಿದರು. ನಿಗಮ
ಕೋವಿಡ್ ನಂತರ ವೃತ್ತಿಗೆ ದೊಡ್ಡಮಟ್ಟದ ಪೆಟ್ಟುಕೊಟ್ಟಿತ್ತು. ಟೇಲರಿಂಗ್ ಬಿಟ್ಟರೆ ಇತರ ಕೆಲಸಗಳು ಗೊತ್ತಿರದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇತ್ತೀಚೆಗೆ ಇತರ ರಾಜ್ಯಗಳಿಂದ ಕಸೂತಿ ಅಥವಾ ರ್ನಿದಿಷ್ಟ ಕೆಲಸಕ್ಕಾಗಿ ಬಂದು ನಂತರ ಸಂಪೂರ್ಣ ಟೇಲರಿಂಗ್ನಲ್ಲಿ ತೊಡಗಿಕೊಂಡು ಕಡಿಮೆ ದರದಲ್ಲಿ ಗ್ರಾಹಕರನ್ನು ಆಕರ್ಷಿಸಿ, ಸ್ಥಳಿಯ ಟೇಲರ್ಗಳ ಬದುಕಿಗೆ ಪೆಟ್ಟು ನೀಡಿದರು. ಈ ಕುರಿತು 2-3 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಮೂಲಕವೂ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇದನ್ನೂ ಓದಿ: ಕೆಲಸಕ್ಕಿದ್ದ ಕಂಪನಿಯಲ್ಲೇ ಬಹುಕೋಟಿ ಮೌಲ್ಯದ ಡೇಟಾ ಕದ್ದ ಅಧಿಕಾರಿ!
ಅಖಿಲ ಕರ್ನಾಟಕ ಟೇಲರ್ ಸಂಫಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್.ವೆಂಕಟೇಶ್ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ವೃತ್ತಿಗೆ ಎದುರಾಗಿರುವ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮನವರಿಕೆ ಮಾಡಿದ್ದೇವೆ. ಆರಂಭದಲ್ಲಿ ಸ್ಪಂದಿಸಿ ದತ್ತಾಂಶ ಕೊರತೆಯಿದೆ ಎಂದು ಹೇಳಿ ಕಾಲಹರಣ ಮಾಡಿತ್ತು. ಇತ್ತೀಚೆಗೆ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭವಾಗಿದ್ದು, ಇದು ಸ್ವಾಗತಾರ್ಹ. ಶೀಘ್ರದಲ್ಲೇ ಟೇಲರ್ ನಿಗಮ ಮಂಡಳಿ ಸ್ಥಾಪನೆಗೆ ಸರ್ಕಾರ ಮುಂದಾಗಿ ಟೇಲರ್ ಕುಟುಂಬಗಳನ್ನು ಕೈಹಿಡಿಯಬೇಕು ಎಂದು ಮನವಿ ಮಾಡಿದರು.
ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಡಾ.ಸುಮತಿ ಮಾತನಾಡಿದರು. ಸಂಘದ ಖಜಾಂಚಿ ರಾಧಮ್ಮ, ಅಖಿಲ ಕರ್ನಾಟಕ ಟೇಲರಿಂಗ್ ಸಂಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷರಾದ ಕೆ.ಆರ್.ರಮಣ, ಜಿ.ಪಿ.ಗೋವರ್ಧನ್, ಸಹ ಕಾರ್ಯದರ್ಶಿಗಳಾದ ಅಶ್ವಥ್ ರೆಡ್ಡಿ, ಎನ್.ವಿಜಯ್ ಕುಮಾರ್, ಮಮತಾ, ಖಜಾಂಚಿ ರಾದಮ್ಮ, ಜಂಟಿ ಕಾರ್ಯದರ್ಶಿ ಸುಮತಿರೆಡ್ಡಿ, ಸಂಘಟನೆ ಕಾರ್ಯದರ್ಶಿ ಕುಸುಮಾ, ಸಂಚಾಲಕರಾದ ಹಬೀಬ್ ಸಾಬ್, ಸಂಘಟನಾ ಕಾರ್ಯದರ್ಶಿಗಳಾದ ಮುಹಿಬ್, ಅನ್ನಪೂರ್ಣ, ಲಿಯಾಕಾರ ಪಾಷಾ ಇತರರು ಇದ್ದರು.
ಇದನ್ನೂ ನೋಡಿ: ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತರೆ ರಾಜ್ಯಪಾಲರು?! Janashakthi Media
