ಬೆಂಗಳೂರು: ಹೈಕೋರ್ಟ್, ನಕಲಿ ಪ್ರಮಾಣ ಪತ್ರ ಪಡೆದು ನೌಕರಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದೆ. ಎಸ್.ಟಿ. ಸಮುದಾಯದ ಕೋಲಿ…
Tag: ಬಿಎಸ್ಎನ್ಎಲ್
ಕೇಂದ್ರ ಸರ್ಕಾರದ ಎನ್‌ಎಂಪಿ ಅಡಿಯಲ್ಲಿ ಬಿಎಸ್‌ಎನ್‌ಎಲ್‌ನ 10 ಸಾವಿರ ಟವರ್ ಮಾರಾಟ
ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಆಸ್ತಿ ನಗದೀಕರಣ(ಎನ್‌ಎಂಪಿ) ಅಡಿಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್)ನ…
ಬಿಎಸ್‌ಎನ್‌ಎಲ್ ಗೆ ಬೃಹತ್ ‘ಪುನರುಜ್ಜೀವನ ಪ್ಯಾಕೇಜ್’: ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ
ಬಿಎಸ್‌ಎನ್‌ಎಲ್ ಗೆ 1.64 ಲಕ್ಷ ಕೋಟಿ ರೂ.ಗಳ ಒಂದು ಬೃಹತ್ ‘ಪುನರುಜ್ಜೀವನ’ ಪ್ಯಾಕೇಜ್‌ನ್ನು ಕೇಂದ್ರ ಸಂಪುಟ ಮಂಜೂರು ಮಾಡಿರುವುದಾಗಿ ದೂರಸಂಪರ್ಕ ಮಂತ್ರಿಗಳು ಹೇಳಿದ್ದಾರೆ. 2019ರಲ್ಲಿ ಕೂಡ ಕೇಂದ್ರ ಸಂಪುಟ ರೂ.70,000 ಕೋಟಿ ಪ್ಯಾಕೇಜನ್ನು ಮಂಜೂರು ಮಾಡಿತ್ತು. ಅದರಿಂದಾಗಿ ಅದು ಚೇತರಿಸಿಕೊಂಡು ಒಂದು ಸ್ಥಿರತೆ ಹೊಂದಿರುವ ಕಂಪನಿಯಾಗಿದೆ ಎಂಬ ವಿಶ್ವಾಸ ಮೂಡಿದೆ. ಈ ಎರಡನೇ ಪ್ಯಾಕೇಜಿನಿಂದ ಅದು ಸಮರ್ಥ ಕಂಪನಿಯಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ನಿಜವೇ? ಅಥವ ಸತ್ಯೋತ್ತರ ಕಾಲದ ಇನ್ನೊಂದು ಜುಮ್ಲಾವೇ? ಕೇಂದ್ರ ಸರಕಾರ ನಿಜವಾಗಿಯೂ ಬಿಎಸ್‌ಎನ್‌ಎಲ್ ಒಂದು ಸಮರ್ಥ ಕಂಪನಿಯಾಗ ಬಯಸುತ್ತಿದೆಯೇ? ಈ ಸಂದೇಹ ಮೂಡಲು ಒಂದು ಪ್ರಮುಖ ಕಾರಣ ಏರ್‌ಟೆಲ್, ರಿಲಯಂಸ್ ಜಿಯೊ, ವೊಡಾಫೋನ್ ಇಂಡಿಯ ಮುಂತಾದ ಖಾಸಗಿ ಕಂಪನಿಗಳು 5ಜಿ ಬಗ್ಗೆ ಮಾತಾಡುತ್ತಿರುವವಾಗ ಈ ‘ಎರಡನೇ ಪುನರುಜ್ಜೀವನ’ ಪ್ಯಾಕೇಜ್ ಕೂಡ 2019ರ ಮೊದಲ ಪ್ಯಾಕೇಜಿನಲ್ಲಿಯೂ ಹೇಳಿದ್ದ 4ಜಿಯ ಬಗ್ಗೆಯೇ ಮಾತಾಡುತ್ತಿದೆ. 5ಜಿಯ ಪ್ರಸ್ತಾಪವೂ ಇಲ್ಲ. ವಾಸ್ತವವಾಗಿ ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ (ಬಿಎಸ್‌ಎನ್‌ಎಲ್‌ಯು) ಜುಲೈ 28ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಸರಕಾರ ಇಂತಹ ತಪ್ಪು ಸಂದೇಶವನ್ನು ಏಕೆ ಕೊಡುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದೂ ಅದು ಹೇಳಿದೆ. ಅರ ಪ್ರಕಾರ ನಿಜ ಸಂಗತಿಯೆಂದರೆ ಈ 1.64 ಲಕ್ಷ ಕೋಟಿ ರೂ.ಗಳಲ್ಲಿ 4ಜಿಗೆ ಸರಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ, ಉಳಿದ ಮೊತ್ತದಲ್ಲಿಯೂ ಒಂದು ಪೈಸೆಯೂ ಸರಕಾರೀ ಖಜಾನೆಯಿಂದ ಬರುವುದಿಲ್ಲ. 4ಜಿ ಒದಗಿಸಲು 1.13ಲಕ್ಷ ಕೋಟಿ ರೂ. ಎಷ್ಟು ನಿಜ? 23 ಅಕ್ಟೋಬರ್‌ನ ಮೊದಲ ಪ್ಯಾಕೇಜಿನಲ್ಲಿ ಬಿಎಸ್‌ಎನ್‌ಎಲ್‌ಗೆ…
ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲವಾದರೆ ವೊಡಾಫೋನ್-ಐಡಿಯಾದಲ್ಲಿ ಸರಕಾರ ಶೇರುದಾರನಾಗುವುದು ಯಾಕೆ?
ಉತ್ಕೃಷ್ಟ ಸಂಪರ್ಕ ಜಾಲ ದೇಶದ ಭದ್ರತೆ, ಡಿಜಿಟಲ್ ಆರ್ಥಿಕತೆಯ ಆಧಾರವಾಗಿರುವ ದೃಷ್ಟಿಯಿಂದ ಟೆಲಿಕಾಂ ಆಯಕಟ್ಟಿನ ಕ್ಷೇತ್ರ. ಈ ಕ್ಷೇತ್ರದಲ್ಲಿ ಎರಡು ಕಂಪನಿಗಳ…
ಖಾಸಗಿ ಟೆಲಿಕಾಂ ಕಂಪನಿಗಳಿಗೆ 1.31 ಲಕ್ಷ ಕೋಟಿ ರೂ. ಬಕ್ಷೀಸು ನೀಡುವ ಸರಕಾರದ `ಭವ್ಯ ಸುಧಾರಣೆ’: ಸಿಐಟಿಯು ಖಂಡನೆ
ನವದೆಹಲಿ: ಕೇಂದ್ರ ಸರಕಾರ ದೂರಸಂಪರ್ಕ ವಲಯದ ಸುಧಾರಣೆಗಳ ಹೆಸರಿನಲ್ಲಿ ಕೈಗೊಂಡಿರುವ ನಿರ್ಧಾರ ಸಾರ್ವಜನಿಕ ವಲಯದ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್. ವಿರುದ್ಧ ಯಾವುದೇ…