ನವದೆಹಲಿ: ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾಗಿರುವ ಮಲಯಾಳ ವಾಹಿನಿಯಾದ ಮೀಡಿಯಾ ಒನ್‌ನ ಮೇಲ್ಮನವಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಚಾನಲ್ ಪ್ರಸಾರ ನಿಷೇಧವನ್ನು ತಡೆಹಿಡಿದಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಚಲಿತ ವಿದ್ಯಮಾನಗಳ ಚಾನೆಲ್ ಪ್ರಸಾರವನ್ನು ನಿಷೇಧಿಸುವ ಮೊದಲು ಕಾರ್ಯನಿರ್ವಹಿಸುತ್ತಿದ್ದಂತೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಈ ಹಿಂದೆ, ಪ್ರಸಾರ ನಿಷೇಧದ ವಿರುದ್ಧ ಮೀಡಿಯಾ ಒನ್ ಚಾನೆಲ್ ವಿಚಾರವಾಗಿ ನಿಖರವಾದ ಆಧಾರಗಳನ್ನು ಬಹಿರಂಗಪಡಿಸದೆ ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪ್ರಸಾರ ಪರವಾನಗಿಯನ್ನು ನವೀಕರಿಸಲು ಎಂಐಬಿ ನಿರಾಕರಿಸಿತ್ತು.
ಮೀಡಿಯಾ ಒನ್ ಚಾನಲ್ ಬಗ್ಗೆ ಸಾಮಾಜಿಕ ಭದ್ರತೆಯ ಕಾರಣ ಹಿನ್ನೆಲೆಯಲ್ಲಿ ವಾಹಿನಿಯ ಪ್ರಸಾರವನ್ನು ನಿಲುಗಡೆ ಮಾಡಿರುವುದಾಗಿ ಕೇಂದ್ರ ಸರಕಾರ ಪ್ರಕಟಿಸಿತ್ತು.
ಮಲಯಾಳಂ ಸುದ್ದಿ ವಾಹಿನಿಯ ಪ್ರಸಾರವನ್ನು ನಿಷೇಧಿಸುವ ಜನವರಿ 31 ರ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಎತ್ತಿಹಿಡಿದಿತು.
ಚಾನಲ್ ಪರವಾಗಿ ವಾದ ಮಂಡನೆ ಸಂದರ್ಭದಲ್ಲಿ ಹೊಸ ಅನುಮತಿ/ಪರವಾನಗಾಗಿ ಸಂದರ್ಭದಲ್ಲಿ ಮಾತ್ರ ಎಂಹೆಚ್‌ಎ ಕ್ಲಿಯರೆನ್ಸ್ ಅಗತ್ಯವಿದೆಯೇ ಹೊರತು ನವೀಕರಣದ ಸಮಯದಲ್ಲಿ ಅಲ್ಲ ಎಂದು ವಾದಿಸಿತು. ಮಾರ್ಗಸೂಚಿಗಳ ಪ್ರಕಾರವೂ ಇದೇ ಆಗಿದ್ದು, ಹೊಸ ಅನುಮತಿಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಮಾತ್ರ ಭದ್ರತಾ ಕ್ಲಿಯರೆನ್ಸ್ ಅಗತ್ಯವಿದೆಯೇ ಹೊರತು ಪರವಾನಗಿ ನವೀಕರಣದ ಸಮಯದಲ್ಲಿ ಅಲ್ಲ ಎಂದಿದೆ.
ಚಾನೆಲ್ ಪರವಾಗಿ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ, ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ವಾದ ಮಂಡಿಸಿದರು. ಸುದೀರ್ಘವಾಗಿ ವಾದ ಆಲಿಸಿದ ಬಳಿಕ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಲು ಒಪ್ಪಿತು.