ರಾಜಕೀಯದಿಂದ ದೇವರನ್ನು ದೂರವಿಡಿ ಎಂದು ಹೇಳಿದ​ ಸುಪ್ರೀಂ ಕೋರ್ಟ್​

ನವದೆಹಲಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ರಾಜಕೀಯದಿಂದ ದೇವರನ್ನು ದೂರವಿಡುವಂತೆ ಸುಪ್ರೀಂ ಕೋರ್ಟ್​ ಹೇಳಿದೆ.

ಕಲಬೆರಕೆ ತುಪ್ಪವನ್ನು ಪ್ರಸಾದಕ್ಕೆ ಬಳಸುತ್ತಾರೆಯೇ ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರ ಉತ್ತರ ನೀಡಿದೆ. ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು, ತಕ್ಷಣ ಪತ್ರಿಕಾಗೋಷ್ಠಿ ನಡೆಸುವ  ಅಗತ್ಯ ಏನಿತ್ತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಸಾದ ಲಡ್ಡು ಕಲಬೆರಕೆ ಪ್ರಕರಣದ ತನಿಖೆ ಆರಂಭಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ತಿರುಪತಿಗೆ ಭೇಟಿ ನೀಡಿತ್ತು. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುತ್ತಿದ್ದ ಪ್ರಸಾದವಾದ ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ನಂತರ ತಿರುಪತಿ ಪ್ರಸಾದದ ಬಗ್ಗೆ ಗಲಾಟೆ ಪ್ರಾರಂಭವಾಯಿತು.

ಇದನ್ನೂ ಓದಿ: ಬಿಎಂಟಿಸಿ ಚಕ್ರದ ಅಡಿ ಸಿಲುಕಿ ಬೈಕ್ ಸವಾರ ಸಾವು

ಇದಕ್ಕೂ ಮುನ್ನ, ವೈಎಸ್‌ಆರ್‌ಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ಮಾತನಾಡಿ, ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸಿಎಂ ನಾಯ್ಡು ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ತುಪ್ಪ ಖರೀದಿ ಇ-ಟೆಂಡರ್ ದಶಕಗಳಿಂದ ನಡೆಯುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರಾಕ್ಷಸ ಆಳ್ವಿಕೆ ಮುಂದುವರಿದಿದೆ, ಮುಂಬರುವ ತಿರುಮಲ ದೇಗುಲಕ್ಕೆ ನನ್ನ ಭೇಟಿಗೆ ಅಡ್ಡಿಪಡಿಸಲು ಸರಕಾರ ಯತ್ನಿಸುತ್ತಿದೆ. ದೇವಾಲಯ ದರ್ಶನಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವೈಎಸ್‌ಆರ್‌ಸಿಪಿ ಮುಖಂಡರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಆಂಧ್ರ ಸಿಎಂ ನಾಯ್ಡು ರಾಜಕೀಯ ಗಮನವನ್ನು ಬೇರೆಡೆ ಸೆಳೆಯಲು ಲಡ್ಡು ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ನೋಡಿ: ಸೌಹಾರ್ದವಿಲ್ಲದೇ ಶಾಂತಿ ನೆಲೆಸದು. ಶಾಂತಿ ಇಲ್ಲದೇ ವಿಕಾಸ ಸಾಧ್ಯವಾಗದು – ಅಜಯ್ ಕುಮಾರ್ ಸಿಂಗ್Janashakthi Media

Donate Janashakthi Media

Leave a Reply

Your email address will not be published. Required fields are marked *