ಮೋದಿ ಸರ್ಕಾರದ ರಾಜೀನಾಮೆಗೆ ಇದು ಸಕಾಲ
ನವದೆಹಲಿ : ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಆದ್ದರಿಂದ ಸುಪ್ರೀಂಕೋರ್ಟೇ ಕೋವಿಡ್ ನಿರ್ವಹಣೆಗಾಗಿ ಒಂದು ವಿಶೇಷ ಸಮಿತಿಯನ್ನು ನೇಮಿಸಿದೆ.
ಮೋದಿ ಸರಕಾರವು ಕೋವಿಡ್-೧೯ ನಿರ್ವಹಣೆಯಲ್ಲಿ ದಯನೀಯವಾಗಿ ವಿಫಲಗೊಂಡ ಕಾರಣ ಸುಪ್ರೀಂಕೋರ್ಟ್ ಇವತ್ತು ಸ್ವತಃ ಮಧ್ಯ ಪ್ರವೇಶಿಸಿ ನೂತನವಾದ ೧೨ ಸದಸ್ಯರ ರಾಷ್ಟ್ರಿಯ ಕ್ರಿಯಾ ದಳವನ್ನು ನೇಮಿಸಿದೆ. ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಟಾಸ್ಕ್ ಫೋರ್ಸಿನ ನಿರ್ದೇಶನಗಳು ಅನ್ವಯವಾಗಲಿವೆ.
ದೇಶದಾದ್ಯಂತ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ನೆರವು, ಆಮ್ಲಜನಕದ ಅವಶ್ಯಕತೆ, ಸರಬರಾಜು ಮತ್ತು ವಿತರಣೆ ಹಾಗೂ ಕೋವಿಡ್- ೧೯ ಸಾಂಕ್ರಾಮಿಕದ ಬಗೆಗಿನ ಪರಿವೀಕ್ಷಣೆಯನ್ನು ಈ ರಾಷ್ಟ್ರಿಯ ಕ್ರಿಯಾದಳದ ಮೂಲಕ ನಡೆಯಲಿದೆ. ಮತ್ತು ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಬಳಸಲು ಕೇಂದ್ರವು ಎಲ್ಲಾ ಸಹಕಾರಗಳನ್ನು ನೀಡಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ : ಕೇಂದ್ರ ಸರಕಾರಕ್ಕೆ ಮುಖಭಂಗ: ರಾಜ್ಯ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಮೇ.೫ ರಂದು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವು ಕೋವಿಡ್ ನಿರ್ವಹಣೆಯ ಕುರಿತು ನೋಡಿದ ಐತಿಹಾಸಿಕ ತೀರ್ಪನ್ನು ಅನುಸರಿಸಲು ಕೇಂದ್ರ ಸರಕಾರವು ವಿಫಲವಾದ ಕಾರಣ ದೆಹಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸು ಜಾರಿ ಮಾಡಿತ್ತು. ಅದರ ಮೇಲೆ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿತ್ತು. ಇವತ್ತು ಸುಪ್ರೀಂಕೋರ್ಟ್ ವಿಸ್ತೃತವಾದ ಇನ್ನೊಂದು ಆದೇಶದ ಮೂಲಕ ಕೋವಿಡ್-೧೯ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಿದೆ.
ಕಾರ್ಯಪಡೆಯ ಸದಸ್ಯರ ವಿವರ ಹೀಗಿದೆ.
ಡಾ. ಭಬತೋಷ್ ಬಿಸ್ವಾಸ್: ಕೋಲ್ಕತ್ತಾದ ಪಶ್ಚಿಮ ಬಂಗಾಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ
ಡಾ.ದೇವೇಂದರ್ ಸಿಂಗ್ ರಾಣಾ: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ
ಡಾ.ದೇವಿ ಪ್ರಸಾದ್ ಶೆಟ್ಟಿ: ಬೆಂಗಳೂರಿನ ನಾರಾಯಣ ಹೆಲ್ತ್‌ಕೇರ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ
ಡಾ.ಗಗನ್ದೀಪ್ ಕಾಂಗ್: ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ
ಡಾ.ಜೆ.ವಿ.ಪೀಟರ್: ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನಿರ್ದೇಶಕ
ಡಾ.ನರೇಶ್ ಟ್ರೆಹನ್: ಗುರುಗ್ರಾಮ್ನ ಮೆಡಂತ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
ಡಾ.ರಾಹುಲ್ ಪಂಡಿತ್: ಕ್ರಿಟಿಕಲ್ ಕೇರ್ ಮೆಡಿಸಿನ್ ಮತ್ತು ಐಸಿಯು, ಫೋರ್ಟಿಸ್ ಆಸ್ಪತ್ರೆ, ಮುಲುಂಡ್ (ಮುಂಬೈ, ಮಹಾರಾಷ್ಟ್ರ) ಮತ್ತು ಕಲ್ಯಾಣ್ (ಮಹಾರಾಷ್ಟ್ರ) ನಿರ್ದೇಶಕ
ಡಾ.ಸೌಮಿತ್ರ ರಾವತ್: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋಎಂಟರಾಲಜಿ ಮತ್ತು ಪಿತ್ತಜನಕಾಂಗ ಕಸಿ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ
ಹಿರಿಯ ಪ್ರಾಧ್ಯಾಪಕ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಡಾ.ಶಿವ ಕುಮಾರ್ ಸರಿನ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ಐಎಲ್ಬಿಎಸ್) ನಿರ್ದೇಶಕ
ಡಾ.ಜರೀರ್ ಎಫ್ ಉಡ್ವಾಡಿಯಾ: ಹಿಂದೂಜಾ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮತ್ತು ಪಾರ್ಸಿ ಜನರಲ್ ಆಸ್ಪತ್ರೆ, ಮುಂಬೈನ ಸಲಹೆಗಾರ ಹಾಗೂ ವೈದ್ಯರು.
ಕೋವಿಡ್-೧೯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ದಯನೀಯವಾಗಿ ವಿಫಲಗೊಂಡ ಕಾರಣ ಸುಪ್ರೀಂಕೋರ್ಟ್ ಸ್ವತಃ ಮಧ್ಯ ಪ್ರವೇಶಿಸಿ ನೂತನವಾದ ೧೨ ಸದಸ್ಯರ ರಾಷ್ಟ್ರಿಯ ಕ್ರಿಯಾ ದಳವನ್ನು ನೇಮಿಸಿದೆ. ಹಾಗಾಗಿ ಮೋದಿ ಸರ್ಕಾರದ ರಾಜೀನಾಮೆಗೆ ಇದು ಸಕಾಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.