ಪತ್ರಿಕಾ ಸ್ವಾತಂತ್ರ ಬೆಂಬಲಿಸಿ ಪ್ರಜಾಪ್ರಭುತ್ವ ತತ್ವ ಎತ್ತಿ ತೋರಿಸಲು ಇದು ಸಕಾಲ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕ

ವಾಷಿಂಗ್‌ಟನ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕಾ ಇದು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ತತ್ವಗಳ ಮಹತ್ವವನ್ನು ಎತ್ತಿ ತೋರಿಸಲು ಇದು ಸಕಾಲ ಎಂದು ತಿಳಿಸಿದೆ.

ಅಮೆರಿಕ ಸಂಸ್ಥಾನ ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರೈಸ್, ವಾಷಿಂಗ್ಟನ್ ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ತೋರಿಸುವುದು ಅತ್ಯಂತ ಮಹತ್ವವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರ; ಇಷ್ಟಕ್ಕೂ ಬಿಬಿಸಿ ವಿರುದ್ಧ ಕೇಂದ್ರ ಸರ್ಕಾರ ಕೆಂಡಕಾರುವುದೇಕೆ?

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಪ್ರಾಮುಖ್ಯತೆಯನ್ನು ಬೆಂಬಲಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮ ಅಥವಾ ನಂಬಿಕೆಯಂತಹ ಪ್ರಜಾಪ್ರಭುತ್ವದ ತತ್ವಗಳ ಪ್ರಾಮುಖ್ಯತೆಯನ್ನು ಮಾನವ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ರಾಜಕೀಯ, ಆರ್ಥಿಕ ಮತ್ತು ಅಸಾಧಾರಣವಾಗಿ ಆಳವಾದ ಜನರಿಂದ ಜನರ ಸಂಬಂಧಗಳನ್ನು ಒಳಗೊಂಡಿರುವ ಭಾರತದೊಂದಿಗಿನ ಅಮೆರಿಕದೊಂದಿಗೆ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ  ಹೆಚ್ಚಿಸುವ ಹಲವಾರು ಅಂಶಗಳಿವೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ವಿವಿಗಳಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ : ಜೆಎನ್‌ಯು ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ

ಸಾಕ್ಷ್ಯಚಿತ್ರ ನನಗೆ ಪರಿಚಯವಾಗಿಲ್ಲ. ಆದರೆ, ಯುಎಸ್‌ ಮತ್ತು ಭಾರತವನ್ನು ಎರಡು ಅಭಿವೃದ್ಧಿಶೀಲ, ಪ್ರಜಾಪ್ರಭುತ್ವ ಮೌಲ್ಯಗಳೊಂದಿಗೆ ನನಗೆ ಬಹಳ ಅಭಿಮಾನ ಹೊಂದಿರುವೆ ಎಂದಿದ್ದಾರೆ.

ಬಿಬಿಸಿ ಸಿದ್ಧಪಡಿಸಿರುವ ಎರಡು ಭಾಗಗಳ ಸಾಕ್ಷ್ಯಚಿತ್ರವು 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವಧಿಯಲ್ಲಿ ಸಾಕ್ಷ್ಯಚಿತ್ರವನ್ನು ಸರಣಿ ರೂಪದಲ್ಲಿ ಯುಕೆಯ ಬಿಬಿಸಿ ಪ್ರಸಾರ ಮಾಡಿತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *