ನವದೆಹಲಿ: ದೆಹಲಿ ನ್ಯಾಯಾಲಯವು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿಗೆ ಸಮನ್ಸ್ ಜಾರಿಮಾಡಿದೆ.
ದೆಹಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜೂನ್ 29 ರಂದು ಅತಿಶಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅತಿಶಿಗೆ ತಿಳಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ವಿರುದ್ಧ ಕಪೂರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ಹಾಗೂ ತಮ್ಮ ಪಕ್ಷದ ಪ್ರತಿಷ್ಠಗೆ ಧಕ್ಕೆ ತಂದಿರುವುದಾಗಿ ಕಪೂರ್ ಆರೋಪಿಸಿದ್ದರು.
ಇದನ್ನು ಓದಿ : ಕೊನೆಗೂ ಚುನಾವಣಾ ಆಯೋಗ ಮತದಾರರ ವಿವರಗಳನ್ನು ಪ್ರಕಟಿಸಿದೆ! ಏಕೆ?
ಈ ಬಗ್ಗೆ ವಾದ ಮಂಡಿಸಿದ್ದ ಕಪೂರ್ ಪರ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕಿಸಿದೆ ಮತ್ತು ಪಕ್ಷವನ್ನು ಬದಲಾಯಿಸಲು ಅವರಿಗೆ 25 ಕೋಟಿ ರೂ. ನೀಡುತ್ತಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಆಪ್ ನಾಯಕರು ತಮ್ಮ ಆರೋಪಗಳಿಗೆ ಸಾಕ್ಷ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದಿದ್ದಾರೆ.
ಈ ಆರೋಪಗಳನ್ನು ಪರಿಗಣಿಸಿದ ಕೋರ್ಟ್ ಅತಿಶಿಯನ್ನು ಆರೋಪಿ ಎಂದು ಗುರುತಿಸಿ ಜೂನ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.
ಇದನ್ನು ನೋಡಿ : ಐದು ಹಂತದ ಮತದಾನ ಮುಗಿದರೂ ವಿವರ ನೀಡದ ಚುನಾವಣಾ ಆಯೋಗ : ಆಯೋಗದ ಸುತ್ತ ಅನುಮಾನದ ಹುತ್ತJanashakthi Media