ಸಮರ್ಪಕ ಬಸ್ ಸೌಲ್ಯಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಗಜೇಂದ್ರಗಡ : ಶಾಲಾ – ಕಾಲೇಜ್‌ ಸಮಯಕ್ಕೆ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಬಸ್‌ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು  ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) ಗಜೇಂದ್ರಗಡ ತಾಲ್ಲೂಕು ಸಮಿತಿಯು ನೇತೃತ್ವದಲ್ಲಿನಗರದ ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿ,  ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ನ ರಾಜ್ಯ ಪಧಾದಿಕಾರಿ ಗಣೇಶ ರಾಠೋಡ್ ಮಾತನಾಡಿ, ಗಜೇಂದ್ರಗಡ ತಾಲ್ಲೂಕು ಶೈಕ್ಷಣಿಕವಾಗಿ ದಿನೇ ದಿನೇ ಬೆಳೆಯುತ್ತಿರುವ ನಗರವಾಗಿದ್ದು ಸುತ್ತಲೂ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ ಆದರೆ ಅವರಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೇ ಶಿಕ್ಷಣ ವಂಚಿತರಾಗುತ್ತಿದ್ದಾರೆ.

ಈ ಕುರಿತು ಹಲವಾರು ಭಾರಿ ನಾವು ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭ ಸಂದರ್ಭದಲ್ಲಿ ಹೋರಾಟ ಮಾಡಿಯೇ ಪರಿಹರಿಸುವ ಸ್ಥಿತಿ ನಿರ್ಮಾಣ ಆಗಿದೆ ಇದನ್ನು ಗಂಭೀರ ಎಂದು ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಮಾನ್ಯ ಡಿಪೋ ಮ್ಯಾನೇಜರ್ ಅವರು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ : ಫೇಕ್ ನ್ಯೂಸ್ ಗಳ ಬಗ್ಗೆ ಬಹಳ ಎಚ್ಚರವಹಿಸಿ : ಸಿ.ಎಂ.ಸಿದ್ದರಾಮಯ್ಯ ಕರೆ

ಎಸ್ಎಫ್ಐ  ಜಿಲ್ಲಾ ಮುಖಂಡ ಚಂದ್ರು ರಾಠೋಡ್ ಮಾತನಾಡಿ,ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಮಾಟರಂಗಿ, ಬೆಣಚಮಟ್ಟಿ ಈ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ತೀವ್ರ ಇದ್ದು ನಾಗರಸಕೊಪ್ಪ ಕ್ರಾಸ್ ಗೆ ಎಲ್ಲಾ ಬಸ್ ಗಳನ್ನು ನಿಲ್ಲಿಸಬೇಕು ಮತ್ತು ಮಾಟರಂಗಿಯಿಂದ ಬೆಳ್ಳಿಗ್ಗೆ ಬರುವ ಬಸ್‌ನ್ನು ಮತ್ತೆ ಮಧ್ಯಾಹ್ನ ಮರಳಿ ಬಿಡಬೇಕೆಂದು ಮತ್ತು ಮಾಟರಂಗಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಬೆಣಚಮಟ್ಟಿ ಮಾರ್ಗವಾಗಿ ಒಂದು ಬಸ್ ನ್ನು ಬೆಳ್ಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯ ಬಿಡಬೇಕೆಂದು ಒತ್ತಾಯಿಸಿದರು.

ಹೋರಾಟದ ಸ್ಥಳಕ್ಕೆ ಪ್ರಭಾರಿ ಡಿಪೋ ಮ್ಯಾನೇಜರ್ ಅವರು ಬಂದು ಮನವಿ ಸ್ವೀಕರಿಸಿ ಈ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು ಹೊಸ ಡಿಪೋ ಮ್ಯಾನೇಜರ್ ಅವರು ಬಂದ ಕೂಡಲೇ ಈ ಸಮಸ್ಯೆ ಅವರ ಮುಂದೆ ತಿಳಿಸಿ ಬಗೆಹರಿಸಲು ಪ್ರಯತ್ನಿಸುತ್ತೆವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ತಾಲ್ಲೂಕು ಕಾರ್ಯದರ್ಶಿ ಶರಣು ಎಂ, ಮುಖಂಡರಾದ ಬಸವರಾಜ, ದ್ಯಾಮಾಣ್ಣ ಪೂಜಾರ್, ಪರಶುರಾಮ ಕೊನಸಾಗರ, ಬಸು ಪಾಟೀಲ್, ಸುಭಾಷ್ ಬಡಿಗೇರ, ವಿಜಯ ಮಡಿವಾಳ, ಬಸು ಹಗೇದಾಳ, ನೀಲಕಂಠ ಕರಡಿ, ಬಸವರಾಜ ನಾಗರಾಳ, ಮಾಹಾಂತೇಶ ಜೋಗಿ, ಅರುಣಕುಮಾರ ಕೊಟ್ಟುರು, ಅನಿಲ್ ಜಡದೇರ್,ಪ್ರತೀಕ ಪಲ್ಲೇದ ಮತ್ತು ಇತರರು ಉಪಸ್ಥಿತಿ ಇದ್ದರು.

ಇದನ್ನು ನೋಡಿ : ಕಟ್ಟಡ ಕಾರ್ಮಿಕರ ಹಣಕ್ಕೆ ಕನ್ನ?! ಏನಾಗ್ತಿದೆ ಕಲ್ಯಾಣ ಮಂಡಳಿಯಲ್ಲಿ?!!Janashakthi Media

Donate Janashakthi Media

Leave a Reply

Your email address will not be published. Required fields are marked *