ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಆಟೋದಲ್ಲಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು

ಬಾಲಕೋಟೆ: ನಗರದದ ಕೆರೂರ ಪಟ್ಟಣದ ಪರೀಕ್ಷಾ ಕೇಂದ್ರಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಇಲ್ಲದೆ ಗಂಟೆಗಟ್ಟಲೆ ಕಾದು ಸುಸ್ತಾಗಿ ಆಟೋದಲ್ಲಿ ಪರೀಕ್ಷಾ ಕೇಂದ್ರ ತಲುಪಿದ ಘಟನೆ ನಡೆಯಿತು.
ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗ್ರಾಮದ ಬಸ್ ನಿಲ್ದಾಣಕ್ಕೆ ನಿತ್ಯ ನೂರಾರು ಬಸ್ ಗಳು ಬರುತ್ತವೆ. ಆದರೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೆಲವೆಡೆ ಸ್ಟಾಪ್ ಇದ್ದರೂ ಬಸ್ ನಿಲ್ಲಿಸದೆ ಹೋಗುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರಿಯಾದ ಸಮಯಕ್ಕೆ ಬಸ್ ಬಾರದೆ ಇದೇ ರೀತಿ ತಮ್ಮ‌ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ನಾಲ್ಕು ವಿಷಯಗಳ ಪರೀಕ್ಷೆ ಎದುರಿಸಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡರು.

ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೊಂದು 4.2 ತೀವ್ರತೆಯ ಭೂಕಂಪ

ಇಂದು (ಮಾ.29, ಶನಿವಾರ) ನಡೆದ ಎಸ್.ಎಸ್.ಎಲ್.ಸಿ 4ನೇ ದಿನ ನಡೆದ ಸಮಾಜ ವಿಜ್ಞಾನ ವಿಷಯ ಪರೀಕ್ಷೆಗೆ ತಡವಾಗಿದ್ದರಿಂದ ಓಡೋಡಿ ಬಂದು ಪರೀಕ್ಷೆಗೆ ಹಾಜರಾದ ಘಟನೆ ನಡೆಯಿತು.

ಒಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಆಟೋ, ಬೈಕ್ ಸೇರಿದಂತೆ ಖಾಸಗಿ ವಾಹನಗಳ ಸಹಾಯದಿಂದ ಪರೀಕ್ಷಾ ಕೇಂದ್ರಕ್ಕೆ ಬರುವ ಸಾಹಸ ಮಾಡಬೇಕಾಯಿತು.

ಮಾರ್ಚ್ 2 ಮತ್ತು 4 ರಂದು ಇನ್ನೂ ಎರಡು ವಿಷಯಗಳ ಪರೀಕ್ಷೆ ಉಳಿದಿದ್ದು, ಸಂಬಂಧಿಸಿದ ಬಾದಾಮಿ ಸಾರಿಗೆ ಘಟಕದ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಲು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ತರಬೇತಿ! ತರಬೇತಿ! ಕಲಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಶಿಕ್ಷಕ! – ಸಿ.ಆರ್.‌ಬಾಬುಖಾನ್‌ ಮತ್ತು ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *