ಭೂಪಾಲ್ | ಸರ್ಕಾರಿ ಶಾಲೆಯಲ್ಲಿ ತಟ್ಟೆ ಬದಲಿಗೆ ಪೇಪರ್ ಹಾಳೆಯಲ್ಲಿ ಊಟ ಸವಿಯುತ್ತಿರುವ ವಿಧ್ಯಾರ್ಥಿಗಳು

ಭೋಪಾಲ್ : ಸರ್ಕಾರಿ ಶಾಲಾ ಮಕ್ಕಳು ತಟ್ಟೆಗಳ ಬದಲಿಗೆ, ಪೇಪರ್ ಹಾಳೆಯಲ್ಲಿ ಮಧ್ಯಾಹ್ನದ ಊಟ ಮಾಡುತ್ತಿರುವ ವಿಡಿಯೋವೊಂದು ಶುಕ್ರವಾರ (ನ.07) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  ಭೂಪಾಲ್

ಇದನ್ನೂ ಓದಿ : ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ

ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಸಾಮಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ವಿಜಯಪುರ ಬ್ಲಾಕ್‌ನ ಹುಲ್ಪುರ್ ಗ್ರಾಮದ ಮಧ್ಯಮ ಶಾಲೆಯ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ತೋರಿಸಲಾಗಿದೆ. ಅವರು ಪೇಪರ್ ಹಾಳೆಯಲ್ಲಿ ಬಡಿಸಿದ ಆಹಾರವನ್ನು ತಿನ್ನುತ್ತಿದ್ದಾರೆ. ಮಕ್ಕಳು ಊಟ ಮಾಡಲು ಉತ್ತಮ ವ್ಯವಸ್ಥೆಯೂ ಕೂಡ ಇಲ್ಲದೆ, ಶಾಲೆ ಕಟ್ಟಡದ ಹೊರಗಡೆ ನೆಲದ ಮೇಲೆ ಕುಳಿತು ತಟ್ಟೆಗಳ ಬದಲಿಗೆ ಹರಿದ ಪೇಪರ್ ಹಾಳೆಯಲ್ಲಿ ಊಟ ಮಾಡುವುದನ್ನು ಕಾಣಬಹುದು. ವಿಷಯ ಬೆಳಕಿಗೆ ಬಂದ ನಂತರ, ಶಿಯೋಪುರ್ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ನೋಡಿ: ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು – ಎನ್‌ ಎಲ್‌. ಭರತ್‌ರಾಜ್‌ Janashakthi Media

Donate Janashakthi Media

Leave a Reply

Your email address will not be published. Required fields are marked *