ಕೇರಳ |ವಿದ್ಯಾರ್ಥಿ ಸಂಘದ ಚುನಾವಣೆ – ಭರ್ಜರಿ ಜಯ ಸಾಧಿಸಿದ ಎಸ್‌ಎಫ್‌ಐ

ಕೇರಳ: ಕೇರಳದ ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿಎಸ್‌ಎಫ್‌ಐ ಗೆ ಭರ್ಜರಿ ಜಯ ಸಾಧಿಸಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಣ್ಣೂರು ವಿಶ್ವವಿದ್ಯಾನಿಲಯದ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗಮನಾರ್ಹ ಗೆಲುವು ಸಾಧಿಸಿದ್ದು, ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ 65 ಕಾಲೇಜುಗಳಲ್ಲಿ 45 ಯೂನಿಯನ್‌ಗಳನ್ನು ಎಸ್‌ಎಫ್‌ಐ ಗೆದ್ದಿದೆ ಎಂದು ಕೇರಳ ಎಸ್‌ಎಫ್‌ಐ ರಾಜ್ಯ ಸಮಿತಿ ತಿಳಿಸಿದೆ.

ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ನಡೆದ ಎಲ್ಲಾ ಐದು ವಿಭಾಗೀಯ ಕೇಂದ್ರಗಳಲ್ಲಿ ಎಸ್‌ಎಫ್‌ಐ ಸಂಪೂರ್ಣ ಗೆಲುವು ಸಾಧಿಸಿದೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ಕಾಲೇಜು ಯೂನಿಯನ್ ಚುನಾವಣೆಯಲ್ಲಿಯೂ ಎಸ್‌ಎಫ್‌ಐ ಭರ್ಜರಿ ಜಯ ಸಾಧಿಸಿದೆ.

ಇದನ್ನು ಓದಿ : ‘ನೀಟ್’ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಟ್ರೈನರ್

ಕೇರಳದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ: ಭರ್ಜರಿ ಜಯ ಸಾಧಿಸಿದ ಎಸ್‌ಎಫ್‌ಐ

171 ಕಾಲೇಜುಗಳಲ್ಲಿ ಸಂಘಟನಾತ್ಮಕವಾಗಿ ನಡೆದ ಚುನಾವಣೆಗಳಲ್ಲಿ 102 ಕಾಲೇಜುರಲ್ಲಿ ಎಸ್‌ಎಫ್‌ಐ ಗೆಲುವು ಸಾಧಿಸಿದೆ. ಇದರಲ್ಲಿ ಎಸ್‌ಎಫ್‌ಐ ಅವಿರೋಧವಾಗಿ ಗೆದ್ದಿರುವ 29 ಕಾಲೇಜು ಒಕ್ಕೂಟಗಳು ಸೇರಿವೆ. ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ 129 ಕಾಲೇಜುಗಳಲ್ಲಿ 104 ಕಾಲೇಜುಗಳಲ್ಲಿ ಎಸ್‌ಎಫ್‌ಐ ಜಯಭೇರಿ ಬಾರಿಸಿದೆ. 62 ಕಾಲೇಜುಗಳಲ್ಲಿ ಎಸ್‌ಎಫ್‌ಐ ಅವಿರೋಧವಾಗಿ ಗೆಲುವು ಸಾಧಿಸಿದೆ.

ಕೇರಳ ವಿಶ್ವವಿದ್ಯಾನಿಲಯ ವ್ಯಾಪ್ತಿಯ 77 ಕ್ಯಾಂಪಸ್‌ಗಳಲ್ಲಿ ಚುನಾವಣೆ ನಡೆದಿದ್ದು 64ರಲ್ಲಿ ಎಸ್‌ಎಫ್‌ಐ ಗೆಲುವು ಸಾಧಿಸಿದೆ. ಈ ಹಿಂದೆ, ಎಸ್‌ಎಫ್‌ಐ ಪಾಲಿಟೆಕ್ನಿಕ್ ಕಾಲೇಜು ಯೂನಿಯನ್ ಚುನಾವಣೆಗಳು ಮತ್ತು ಶಾಲಾ ಸಂಸತ್ತಿನ ಚುನಾವಣೆಗಳಲ್ಲಿಯೂ ಭಾರಿ ಗೆಲುವು ದಾಖಲಿಸಿತ್ತು.

ಎಸ್‌ಎಫ್‌ಐ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಾಜ್ಯಪಾಲರು ಮತ್ತು ಮಾಧ್ಯಮಗಳಿಗೆ ಈ ಗೆಲುವು ತಕ್ಕ ಉತ್ತರವಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ನಾಯಕತ್ವ ಹೇಳಿದೆ. ಎಸ್‌ಎಫ್‌ಐ ಈ ಬಾರಿಯ ಚುನಾವಣೆಯನ್ನು “Rise in Rage against the Blatant Lies.” ಎಂಬ ಘೋಷಣೆಯೊಂದಿಗೆ ಸ್ಪರ್ಧಿಸಿದೆ.

ಇದನ್ನು ನೋಡಿ : ಪಿಎಂಎಲ್‌ಎ ಮತ್ತು ಯುಎಪಿಎ – ಎರಡು ಕರಾಳು ಶಾಸನಗಳ ಆಳ ಅಗಲ Janashakthi Media

Donate Janashakthi Media

Leave a Reply

Your email address will not be published. Required fields are marked *