ನವದೆಹಲಿ: ”ಶಿಕ್ಷಣವನ್ನು ಉಳಿಸಿ, NEP ತಿರಸ್ಕರಿಸಿ; ಭಾರತ ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ” ಎಂಬ ಘೋಷವಾಕ್ಯದೊಂದಿಗೆ ದೇಶದ ಪ್ರಮುಖ 16 ಪ್ರಗತಿಪರ ಪ್ರಜಾಸತ್ತಾತ್ಮಕ ಜಾತ್ಯತೀತ ವಿದ್ಯಾರ್ಥಿ ಸಂಘಟನೆಗಳು ಒಕ್ಕೂಟವೊಂದನ್ನು ರಚಿಸಲು ತೀರ್ಮಾನಿಸಿದ್ದು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರವನ್ನು ರಕ್ಷಿಸುವ ಹೋರಾಟವನ್ನು ಬಲಪಡಿಸಲು ನಿರ್ಧರಿಸಿವೆ. ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಸಂಘಟನೆಗಳು, ತಮ್ಮ ಒಕ್ಕೂಟ ಸೇರಲು ಸಮಾನ ಮನಸ್ಕ ಎಲ್ಲಾ ವಿದ್ಯಾರ್ಥಿ ಸಂಘಟನೆಗಳನ್ನು ಆಹ್ವಾನಿಸಿದೆ.
16 ವಿದ್ಯಾರ್ಥಿ ಸಂಘಟನೆಗಳು ನವೆಂಬರ್ 1 ರಂದು ಆನ್‌ಲೈನ್‌ನಲ್ಲಿ ಸಭೆ ನಡೆಸಿ ಯುನೈಟೆಡ್ ಸ್ಟೂಡೆಂಟ್ ಫ್ರಂಟ್ ರಚಿಸಲು ತೀರ್ಮಾನಿಸಿದ್ದವು. ಈ ಬಗ್ಗೆ ನೀಡುರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ, “ಶಿಕ್ಷಣದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಧೋರಣೆ ಹಿಂದೆಂದಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿದೆ. ಅವರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಲು ಮತ್ತು ಕೆಡವಲು ಮಾತ್ರವಲ್ಲದೆ ಶಿಕ್ಷಣದ ಸಾಂವಿಧಾನಿಕ ದೃಷ್ಟಿಕೋನಕ್ಕೆ ಮೂಲಭೂತವಾಗಿ ವಿರುದ್ಧವಾದ ಕೋಮು ವಿಧ್ವಂಸಕ ಯೋಜನೆಯೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರಕಾರ ಪಠ್ಯ ಪುಸ್ತಕಗಳಿಂದ ಭಾರತದ ಹೆಸರನ್ನು ತೆಗೆದುಹಾಕುವ ತಮ್ಮ ಪ್ರಯತ್ನವನ್ನು ಸಹ ಪ್ರಾರಂಭಿಸಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇರಳ ಸ್ಫೋಟ | ‘ರೀಚ್‌ಸ್ಟ್ಯಾಗ್ ಬೆಂಕಿ’ಯನ್ನಾಗಿ ಮಾಡಲು ಆರೆಸ್ಸೆಸ್ ಪಟ್ಟ ಶ್ರಮ
“2024 ರಲ್ಲಿ ಸಂಸತ್ತಿನ ಚುನಾವಣೆಗಳು ಸಮೀಪಿಸುತ್ತಿವೆ ಮತ್ತು 2025 ರಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನು ನಿಯಂತ್ರಿಸುವ ವಿಶ್ವದ ಅತಿದೊಡ್ಡ ಫ್ಯಾಸಿಸ್ಟ್ ಸಂಘಟನೆಯ 100 ನೇ ವಾರ್ಷಿಕೋತ್ಸವವಿದೆ. ಈ ಸಂದರ್ಭದಲ್ಲಿ ಸಂಘಪರಿವಾರ ಶಕ್ತಿಗಳು ನಮ್ಮ ದೇಶದ ಶಿಕ್ಷಣ ಕ್ಷೇತ್ರ, ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸಬಹುದು ಎಂಬ ಶಂಕೆಯಿದೆ” ಎಂದು ವಿದ್ಯಾರ್ಥಿ ಸಂಘಟನೆಗಳ ಜಂಟಿ ಹೇಳಿಕೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಈ ಸವಾಲಿನ ಹಿನ್ನೆಲೆಯಯಲ್ಲಿ ವಿದ್ಯಾರ್ಥಿ ಚಳುವಳಿಗಳ ವೇಗವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿರುವ ಸಂಘಟನೆಗಳು, ನವೆಂಬರ್ 1ರಂದು ನಡೆದ ಜಂಟಿ ಸಭೆಯು “ಶಿಕ್ಷಣ ಉಳಿಸಿ, ಎನ್ಇಪಿ ತಿರಸ್ಕರಿಸಿ; ಭಾರತ ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ” ಎಂಬ ಘೋಷಣೆಯನ್ನು ಒಗ್ಗಟ್ಟಿನಿಂದ ಅಂಗೀಕರಿಸಿದೆ ಎಂದು ಹೇಳಿದೆ.
ವಿದ್ಯಾರ್ಥಿ ಸಂಘಟನೆಗಳು ಈ ಬಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಪ್ರಚಾರಗಳನ್ನು ನಡೆಸಲು ಮತ್ತು ಜಂಟಿ ರ‍್ಯಾಲಿ ನಡೆಸಲು ನಿರ್ಧರಿಸಿದ್ದು, ಅದಕ್ಕಾಗಿ ಸಂಘಟನೆಗಳ ಮುಂದಿನ ಸಭೆಯನ್ನು ದೆಹಲಿಯಲ್ಲಿ ನಡೆಸಲು ಮತ್ತು ನಮ್ಮ ಜಂಟಿ ಚಳುವಳಿಯ ವಿವರವಾದ ಕ್ರಿಯಾ ಯೋಜನೆಯನ್ನು ಘೋಷಿಸಲು 21 ನೇ ನವೆಂಬರ್ 2023 ರಂದು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲು ತೀರ್ಮಾನಿಸಿವೆ.
ಇದನ್ನೂ ಓದಿ: ತಿಂದು ತೇಗಿದ್ದು ನೀವು, ರಾಜೀನಾಮೆ ನಾನು ಕೊಡ್ಬೇಕಾ?: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
ಈ ಸಭೆಯಲ್ಲಿ ಸೇರುವಂತೆ ಸಮಾನ ಮನಸ್ಕ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಜಂಟಿ ಹೇಳಿಕೆ ಕೇಳಿಕೊಂಡಿದ್ದು, “ಭಾರತದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗವನ್ನು ರಕ್ಷಿಸಲು ಯುನೈಟೆಡ್ ಸ್ಟೂಡೆಂಟ್ ಫ್ರಂಟ್ ಅಗತ್ಯವಾಗಿದೆ” ಎಂದು ತಿಳಿಸಿದೆ.
ಜಂಟಿ ಹೇಳಿಕೆಗೆ ಸಹಿ ಹಾಕಿರುವವರು,
- • AISA – ನಿಲಾಸಿಸ್ ಬೋಸ್ (ಅಧ್ಯಕ್ಷರು, AISA)
- • AISB – ಸೌಮ್ಯದೀಪ್ ಸರ್ಕಾರ್ (ಸಂಚಾಲಕ, AISB)
- • AISF – ವಿಕ್ಕಿ ಮಹೇಶ್ವರಿ (ಪ್ರಧಾನ ಕಾರ್ಯದರ್ಶಿ, AISF)
- • CRJD – ಪ್ರಿಯಾಂಕಾ ಭಾರತಿ
- • CYSS – ಅನುರಾಗ್ ನಿಗಮ್ (ರಾಷ್ಟ್ರೀಯ ಸಂಯೋಜಕರು, CYSS)
- • ಡಿಎಂಕೆ ವಿದ್ಯಾರ್ಥಿ ವಿಭಾಗ – ಸಿವಿಎಂಪಿ ಎಜಿಯರಸನ್ ಎಂ.ಎಲ್.ಎ
- • DSF – ಅನಘಾ ಪ್ರದೀಪ್
- • ದ್ರಾವಿಡ ವಿದ್ಯಾರ್ಥಿಗಳ ಒಕ್ಕೂಟ – ಎಸ್.ಪ್ರಿನ್ಸ್ ಎನ್ನಾರೆಸ್ ಪೆರಿಯಾರ್
- • NSUI – ನಿತೀಶ್ ಗೌರ್ (ರಾಷ್ಟ್ರೀಯ ಕಾರ್ಯದರ್ಶಿ, NSUI)
- • PSF – ರಾಮದಾಸ್ ಪ್ರಿನಿ ಶಿವಾನಂದನ್ (ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ)
- • PSU – Nowfal Md ಸಫಿಯುಲ್ಲಾ (ಜನರಲ್ ಸೆಕ್ರೆಟರಿ, PSU)
- • RLD ಛತ್ರ ಸಭೆ – ಅಮನ್ ಪಾಂಡೆ (ರಾಜ್ಯ ಅಧ್ಯಕ್ಷರು, ಉತ್ತರ ಪ್ರದೇಶ, RLD ಛತ್ರ ಸಭೆ)
- • ಸಮಾಜವಾದಿ ಛತ್ರ ಸಭಾ – ಡಾ. ಇಮ್ರಾನ್ (ಅಧ್ಯಕ್ಷರು, ಸಮಾಜವಾದಿ ಛತ್ರ ಸಭಾ)
- • ಸತ್ರೋ ಮುಕ್ತಿ ಸಂಗ್ರಾಮ್ ಸಮಿತಿ – ದೇವಬ್ರತ ಸೈಕಿಯಾ (ಕೇಂದ್ರ ಅಧ್ಯಕ್ಷರು, ಸತ್ರೋ ಮುಕ್ತಿ ಸಂಗ್ರಾಮ್ ಸಮಿತಿ,ಅಸ್ಸಾಂ)
- • SFI – ಮಯೂಖ್ ಬಿಸ್ವಾಸ್ (ಪ್ರಧಾನ ಕಾರ್ಯದರ್ಶಿ, SFI)
- • TSU – ಸುಜಿತ್ ತ್ರಿಪುರ (ಪ್ರಧಾನ ಕಾರ್ಯದರ್ಶಿ, ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ)
ವಿಡಿಯೊ ನೋಡಿ: ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ. Janashakthi Media