ಕಳ್ಳತನ ಆರೋಪ : ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕರು – ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಕದಂಪುರದಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದ್ದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಶಿಕ್ಷಕಿಯೊಬ್ಬರು ಕಳ್ಳತನದ ಆರೋಪ ಮಾಡಿ ಬಟ್ಟೆ ಬಿಚ್ಚಿ ಪರಿಶೀಲಿಸಿದ್ದಕ್ಕೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ನಿರ್ಭಯ ಬಾರಕೇರ (14, ಹೆಸರು ಬದಲಿಸಿದೆ) ಎಂದು ಗುರುತಿಸಲಾಗಿದ್ದು ಕದಾಂಪುರ ಗ್ರಾಮದ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.  ಮಾರ್ಚ್ 16ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು ಶಾಲಾ ಶಿಕ್ಷಕಿ ಮಿಶ್ರಿಕೋಟಿ ಹಾಗೂ ಮುಖ್ಯ ಶಿಕ್ಷಕ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಮೋದಿ ಅವರಿಗೆ ಭಯ: ಡಿಸಿಎಂ ಡಿ.ಕೆ. ಶಿವಕುಮಾರ್

ಘಟನೆಯ ಹಿನ್ನೆಲೆ : ಏನಿದು ಪ್ರಕರಣ? ಮಾರ್ಚ್ 14ರಂದು ಕದಾಂಪುರ ಪ್ರೌಢಶಾಲೆಯ ಶಿಕ್ಷಕಿಯಾದ ಮಿಶ್ರಿಕೋಟಿ ಅವರ 2 ಸಾವಿರ ರೂ. ಕಳೆದು ಹೋಗಿದ್ದು, ವಿದ್ಯಾರ್ಥಿಗಳ ಬಳಿ ಯಾರು ತೆಗೆದುಕೊಂಡಿದ್ದೀರಿ ಎಂದು ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದರು. ಮಾರ್ಚ್ 15ರಂದು ಸಂಶಯದ ಮೇರೆಗೆ ಹತ್ತನೇ ತರಗತಿಯ ನಾಲ್ಕು ಹಾಗೂ ಎಂಟನೇ ತರಗತಿಯ ಓರ್ವ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ.

ಇದರಿಂದ ಮನನೊಂದ ಎಂಟನೇ ತರಗತಿ ವಿದ್ಯಾರ್ಥಿನಿ ಅವಮಾನ ತಾಳಲಾರದೆ ಶನಿವಾರ (ಮಾರ್ಚ್ 16) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆಯಲ್ಲಿದ್ದರೆ, ಅವರಿಗೆ ದಯವಿಟ್ಟು ಸಹಾಯವನ್ನು ಒದಗಿಸಿ. ಇಂತಹ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುವ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ – 104

 

ವಿಡಿಯೋ ನೋಡಿ : ಲೋಕಸಭಾ ಚುನಾವಣೆ 2024 : ಏ 19 ರಿಂದ 7 ಹಂತಗಳಲ್ಲಿ ಮತದಾನ| ಜೂನ್‌ 04ಕ್ಕೆ ಫಲಿತಾಂಶ Janashakthi Media

 

Donate Janashakthi Media

Leave a Reply

Your email address will not be published. Required fields are marked *