ಶಿಕ್ಷಣದ ವ್ಯಾಪಾರಿಕರಣ ನಿಲ್ಲಲಿ; ಇಸ್ಮೈಲ್ ಎಲಿಗಾರ್

ಹರಪನಹಳ್ಳಿ : ಶಿಕ್ಷಣದ ವ್ಯಾಪಾರಿಕರಣ ನಿಲ್ಲಬೇಕು, ಅದಕ್ಕಾಗಿ ವಿದ್ಯಾರ್ಥಿಗಳು ಪ್ರಭಲವಾದ ಹೋರಾಟ ಸಂಘಟಿಸಬೇಕು ಎಂದು ಚಿಂತಕ ಇಸ್ಮೈಲ್ ಎಲಿಗಾರ್ ಸಮ್ಮೇಳದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರರ ಭವನ ದಲ್ಲಿ ನಡೆದ ಎಸ್‌ಎಫ್‌ಐ 18ನೇ ತಾಲೂಕು ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಓದುವ ಪ್ರವೃತ್ತಿ ಜಾಸ್ತಿಯಾಗಬೇಕು ಪುಸ್ತಕಗಳನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸಮಾನತೆಗಾಗಿ ಹೋರಾಟ ಮಾಡಿದವರು. ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕಗಳನ್ನ ಅಧ್ಯಯನ ಮಾಡುವುದರ ಜೊತೆಗೆ ಎಸ್ಎಫ್ಐ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಶ್ರಮಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ರಾಜ್ಯಾಧ್ಯಕ್ಷರಾದ ಅಮರೇಶ್ ಕಡಗದ ಮಾತನಾಡಿ ಸಂವಿಧಾನ ಉಳಿವಿಗಾಗಿ ಈ ಭಾಗದ 371 ಜೆ ಉಳಿವಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಕೆಲವು ನಾಗರಿಕರ ಸಂಘಟನೆಗಳು 371 ಜೆ ವಿಶೇಷ ಮೀಸಲಾತಿಯನ್ನು ರದ್ದು ಮಾಡಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲು ಹೋರಾಟ ಮಾಡುತ್ತಿದ್ದಾರೆ. ಇದು ಸರಿಯಲ್ಲ, ಈ ಭಾಗ ಸಮಾನತೆಗಾಗಿ ದಶಕಗಳ ಕಾಲ ಅನೇಕ ಜನರು ಹೋರಾಟ ಮಾಡಿ 371 ಜೆ ಅನ್ನು ಪಡೆದುಕೊಂಡಿದ್ದಾರೆ. ಅದು ಸಮರ್ಪಕವಾಗಿ ಜಾರಿಯಾಗಬೇಕು ಜಾರಿಗಾಗಿ ಸಂಘಟನೆಯು ಶ್ರಮಿಸುತ್ತಿದೆ ಎಂದರು.

ಇದನ್ನು ಓದಿ : ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಅಕ್ರಮ: ಬಿಜೆಪಿ ನಾಯಕ ಎಸ್‌ ವೀರಯ್ಯ ಬಂಧನ

ಶಿಕ್ಷಣದ ವ್ಯಾಪಾರಿಕರಣ ನಿಲ್ಲಲಿ; ಇಸ್ಮೈಲ್ ಎಲಿಗಾರ್

ಸುಮಾರು ಒಂದು ತಿಂಗಳಿಂದ ನೀಟ್ ಪರೀಕ್ಷೆಗಾಗಿ ದೇಶದ ಎಲ್ಲಾ ಕಡೆ ವಿದ್ಯಾರ್ಥಿ ಸಮುದಾಯ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಶಿಕ್ಷಣದ ವ್ಯಾಪಾರಿಕರಣದಿಂದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ನೀಟ್ ಹೆಸರಿನಲ್ಲಿ ದೇಶದ ವಿವಿಧ ಕಡೆ ಕೋಚಿಂಗ್ ಸೆಂಟರ್ ಗಳ ಹಾವಳಿ ಜಾಸ್ತಿಯಾಗಿದೆ. ಅತಿ ಹೆಚ್ಚಿನ ರೀತಿಯಲ್ಲಿ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಸರಕಾರ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ತಾಲೂಕು ಉಪಾಧ್ಯಕ್ಷರಾದ ಸಂಜುನಾಯ್ಕ ಎಲ್ ಜಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸಂಘಟನೆ ಬಲಿಷ್ಠವಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಾ ಬಂದಿದ್ದು, ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದ ಕಾಗಿ ಕ್ರಿಯಾಶೀಲವಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಅಭ್ಯಾಸ ಹೋರಾಟ ತ್ಯಾಗದಿಂದ ಸಂಘಟನೆಯನ್ನು ಕಟ್ಟುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ರವಿ ಅಧಿಕಾರ, ಡಿ ರಾಮನಮಲಿ, ಎಸ್ ಎಫ್ ಐ ರಾಜ್ಯ ಸಮಿತಿ ಸದಸ್ಯ ಶಿವಾರೆಡ್ಡಿ ಪವನ್ ಕುಮಾರ್, ವೆಂಕಟೇಶ್, ಮಲ್ಲಿಕಾರ್ಜುನ, ಲೋಕೇಶ್, ಅಶ್ವಿನಿ, ಚೌಡಮ್ಮ, ತೇಜಸ್ವಿನಿ, ಭೂಮಿಕ, ಅಮೂಲ್ಯ ಉಪಸ್ಥಿತರಿದ್ದರು.

ಇದನ್ನು ನೋಡಿ : ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತ – ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರಗಾಯ Janashakthi Media

Donate Janashakthi Media

Leave a Reply

Your email address will not be published. Required fields are marked *