ಕಲಬುರಗಿ: ಮಂಗಳೂರು, ಬೀದರ್ ಬ್ಯಾಂಕಿನ ಹಣ ದರೋಡೆ ಬೆನ್ನಲ್ಲೇ ಇದೀಗ ಖದೀಮರು ಕಲಬುರಗಿಯಲ್ಲಿ ಎಸ್‌ಬಿಐ ಎಂಟಿಎಂಗೆ ಕನ್ನ ಹಾಕಿದ್ದಾರೆ. ಗ್ಯಾಸ್ ಕಟರ್ ಬಳಸಿ ಕಳ್ಳರು ಎಟಿಎಂನಿಂದ (ATM) 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ ಪೂಜಾರಿ ಚೌಕ್‌ನಲ್ಲಿ ನಡೆದಿದೆ.
ಕಿರಾತಕರು ತಮ್ಮ ಗುರುತು ಸಿಗಬಾರದು ಎಂದು ಮೊದಲಿಗೆ ಸಿಸಿಕ್ಯಾಮರಾಗೆ ಬ್ಲ್ಯಾಕ್ ಸ್ಪ್ರೇ ಮಾಡಿ ಬಳಿಕ ಎಟಿಎಂ ಲಾಕರ್ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಲಬುರಗಿಯಲ್ಲಿ ಏಪ್ರಿಲ್ 9ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ಮೊದಲಿಗೆ ಸಿಸಿಕ್ಯಾಮರಾಗೆ ಸ್ಪ್ರೇ ಮಾಡಿದ್ದಾರೆ. ಬಳಿಕ ಲಾಕರ್ ಅನ್ನ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂಪಾಯಿ ದೋಚಿದ್ದಾರೆ.
ಇದನ್ನೂ ಓದಿ: ರಾಯಚೂರು| ಐವರ ಕೊಲೆ ಪ್ರಕರಣ: ಮೂವರಿಗೆ ಮರಣದಂಡನೆ
ಮೊದಲಿಗೆ ತಡರಾತ್ರಿ 2.18ಕ್ಕೆ ಕಾರೊಂದು ಪಾಸ್ ಆಗಿದೆ. ಅದಾಗಿ 48 ನಿಮಿಷದಲ್ಲೇ ಎಂಟಿಎಂ ಕಳ್ಳತನವಾಗಿದೆ. ಹೀಗಾಗಿ ಇದೇ ಕಾರಿನಲ್ಲಿ ಖದೀಮರು ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನ ಗಮನಿಸಿ ಎಟಿಎಂಗೆ ನುಗ್ಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಕಾರಿನ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.
ಬೀದರ್‌ನಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಎಂಟಿಎಂ ಕಳ್ಳತನವಾಗಿದೆ. ಇದಲ್ಲದೇ ಮಂಗಳೂರಿನ ಬ್ಯಾಂಕ್ ಅನ್ನು ಸಹ ದರೋಡೆ ಮಾಡಲಾಗಿತ್ತು.
ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆದ್ರೆ, ಬೀದರ್ ಎಂಟಿಎಂ ಹಣ ದರೋಡೆಕೋರರು ಇದುವರೆಗೂ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಕಲಬುರಗಿಯಲ್ಲೂ ಸಹ ಎಟಿಎಂ ಕಳ್ಳತನವಾಗಿದೆ.
ಎಟಿಎಂ ಹಾಗೂ ಬ್ಯಾಂಕ್ಗಳನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗುತ್ತಿರುವುದು ನೋಡಿದ್ರೆ ಒಂದೇ ಗ್ಯಾಂಗ್ ಇರಬಹುದು ಎನ್ನಿಸುತ್ತಿದೆ. ಅದು ಉತ್ತರ ಭಾರತ ಗ್ಯಾಂಗ್ ಮೇಲೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ.
ಇದನ್ನೂ ನೋಡಿ: ಆರ್‌ಎಸ್‌ಎಸ್ ಕುರಿತ ಪ್ರಶ್ನೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕಿಗೆ ಜೀವನಪರ್ಯಂತ ನಿಷೇಧ! Janashakthi Media