ಶೈಕ್ಷಣಿಕ ಧನ ಸಹಾಯ ಬಿಡುಗಡೆಗೆ ಆಗ್ರಹ | ಕಟ್ಟಡ ಕಾರ್ಮಿಕರ ಮಕ್ಕಳಿಂದ ರಾಜ್ಯವ್ಯಾಪಿ ಪೊಸ್ಟ್ ಕಾರ್ಡ್‌ ಚಳವಳಿ

ಬೆಂಗಳೂರು: 2021-22ರ ಹಾಗೂ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆದೇಶಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಸಾವಿರಾರು ಮಕ್ಕಳು ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಮತ್ತು ಹೈಕೋರ್ಟ್ ನ್ಯಾಯಾಧೀಶರಿಗೆ ಪೊಸ್ಟ್ ಕಾರ್ಡ್‌ ಚಳವಳಿ ಆರಂಭಿಸಿದ್ದಾರೆ. ಒಂದು ವೇಳೆ ಧನಸಹಾಯ ಪಾವತಿಸಲು ಸರ್ಕಾರ ವಿಫಲವಾದರೆ ನವೆಂಬರ್‌ ತಿಂಗಳಲ್ಲಿ ತೀವ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ರಾಜ್ಯ ಸಮಿತಿ, “ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸುಮಾರು11 ಲಕ್ಷ ಶೈಕ್ಷಣಿಕ ಧನಸಹಾಯ ಅರ್ಜಿಗಳನ್ನು 2022-23 ನೇ ಸಾಲಿನಲ್ಲಿ ಸ್ವೀಕರಿಸಿದೆ. ಆದರೆ ಈ ಅರ್ಜಿಗಳಿಗೆ ಧನ ಸಹಾಯವನ್ನು ಕಳೆದ ಒಂದು ವರ್ಷ ಕಳೆದರೂ ಜಮೆ ಮಾಡಿಲ್ಲ. ಜೊತೆಗೆ ಅಲ್ಲದೆ 2021 ಸಾಲಿನ ಸಾವಿರಾರು ವಿದ್ಯಾರ್ಥಿಗಳಿಗೂ ಬಾಕಿ ಧನ ಸಹಾಯ ಬಿಡುಗಡೆಯಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪೊಸ್ಟ್ ಕಾರ್ಡ್‌ ಚಳವಳಿ

ಇದನ್ನೂ ಓದಿ: ಅಂಚೆ ಕಛೇರಿಗೆ ದಿಢೀರ್ ಭೇಟಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ | ಡಿವೈಎಫ್‌ಐ ನಿಯೋಗ ಮನವಿ

“ಈ ಬಗ್ಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವಾರು ಬಾರಿ ತಾಲೂಕು ಜಿಲ್ಲಾ ಹಾಗೂ ಮಂಡಳಿ ಮುಂದೆ ಹೋರಾಟಗಳನ್ನು ನಡೆಸಿದ್ದಾರೆ. ಸಚಿವರು ಹಾಗೂ‌ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ಕೂಡಾ ನಡೆಸಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಅರ್ಧ ಭಾಗ‌ವನ್ನು ಈಗಾಗಲೇ ಕಳೆದಿದ್ದರೂ ವಿದ್ಯಾರ್ಥಿ ವೇತನ ಜಮೆ ಮಾಡಲಾಗಿಲ್ಲ. ಇದರಿಂದ ಲಕ್ಷಾಂತರ ನೈಜ ಕಾರ್ಮಿಕರ ಮಕ್ಕಳು ತಮ್ಮ ವಿದ್ಯಾಭ್ಯಾಸದಿಂದ ವಂಚಿತಾಗುವ ಅಪಾಯ ಎದುರಾಗಿದೆ. ಇದಕ್ಕೆ ನೇರ ಹೊಣೆಯನ್ನು ಮಂಡಳಿ ಅಧಿಕಾರಿಗಳೇ ಹೊತ್ತುಕೊಳ್ಳಬೇಕಿದೆ” ಎಂದು ಕಾರ್ಮಿಕ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದ್ದಾರೆ.

ಪೊಸ್ಟ್ ಕಾರ್ಡ್‌ ಚಳವಳಿ

ಧನಸಹಾಯ ನೀಡದಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಕ್ಟೋಬರ್15 ರಿಂದ 30 ರವರೆಗೆ ಶೈಕ್ಷಣಿಕ ಧನ ಸಹಾಯಕ್ಕಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಂದ ರಾಜ್ಯ ಮುಖ್ಯಮಂತ್ರಿ, ಕಾರ್ಮಿಕ ಮಂತ್ರಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ, ಸರ್ಕಾರದ ಮುಖ್ಯಕಾರ್ಯದರ್ಶಿ, ಕಾರ್ಮಿಕ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಳಿಯ ಸಿಇಓ ಅವರಿಗೆ ಪೊಸ್ಟ್ ಕಾರ್ಡಗಳನ್ನು ಬರೆದು ಗಮನ ಸೆಳೆಯುವಂತೆ ಕರೆ ನೀಡಿದೆ. ಪೊಸ್ಟ್ ಕಾರ್ಡ್‌ ಚಳವಳಿ

ಇದನ್ನೂ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ-2023 | ರಾಜ್ಯದ ರಾಜಕೀಯ ಸ್ಥಿತಿಗತಿ ಹೀಗಿದೆ!

ಸಂಘಟನೆಯ ಕರೆಗೆ ಸ್ಪಂಧಿಸಿರುವ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ಕಟ್ಟಡ ಕಾರ್ಮಿಕರ ಮಕ್ಕಳು ಸ್ವತಃ ಕೈಯಿಂದ ಪತ್ರಗಳನ್ನು ಬರೆದು ಈಗಾಗಲೇ ಆಯಾ ಪ್ರದೇಶದ ಅಂಚೆಕಚೇರಿಗಳ ಮೂಲಕ ಸಾಮೂಹಿವಾಗಿ ಅಂಚೆ ಕಾರ್ಡುಗಳನ್ನು ಪೊಸ್ಟ್ ಮಾಡಿ ಧನಸಹಾಯ ಬಿಡುಗಡೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಜೊತೆಗೆ ವಿಡಿಯೋಗಳ ಮೂಲಕ ಕೂಡಾ ಧನ ಸಹಾಯ ಬಿಡುಗಡೆಗೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 

“ಈಗಾಗಲೇ ಬಾಕಿ ಇರುವ ಪಿಂಚಣಿ, ಮದುವೆ, ವೈದ್ಯಕೀಯ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡುವುದು. ಅಲ್ಲದೆ, ಬಾಕಿ ಇರುವ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ. ಆದರೆ ಕಲ್ಯಾಣ ಮಂಡಳಿಯ ಅಧಿಕಾರಿಗಳು ನಕಲಿ ಫಲಾನುಭವಿಗಳು ಹಾಗೂ ಪರಿಶೀಲನೆ ನೆಪದಲ್ಲಿ ನಿರ್ಮಾಣ ವಲಯದ ಕಾರ್ಮಿಕರಿಗೆ ನ್ಯಾಯ ಬದ್ದವಾಗಿ ದೊರಕಬೇಕಾದ ಸೌಲಭ್ಯಗಳನ್ನು ತಡೆಹಿಡಿದಿರುವುದು 1996 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನಿನ ಮೂಲ ಆಶಯಗಳ ಉಲ್ಲಂಘನೆಯಾಗಿದೆ” ಎಂದು ಸಿಐಟಿಯು ಅಸಮಾಧಾನ ವ್ಯಕ್ತಪಡಿಸಿದೆ. ಪೊಸ್ಟ್ ಕಾರ್ಡ್‌ ಚಳವಳಿ

ಪೊಸ್ಟ್ ಕಾರ್ಡ್‌ ಚಳವಳಿ

ಇದನ್ನೂ ಓದಿ: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ತೆಲಂಗಾಣದ 85% ಹಾಲಿ ಶಾಸಕರು!

“ನಕಲಿ ಕಾರ್ಡಗಳನ್ನು ತಡೆಗಟ್ಟಲು ಮಂಡಳಿ ಕೈಗೊಳ್ಳುವ ಕ್ರಮಕ್ಕೆ ಕಾರ್ಮಿಕರು ಬೆಂಬಲಿಸಿದ್ದಾರೆ. ಆದರೆ ನಕಲಿ ಕಾರ್ಡುಗಳನ್ನು ಗ್ರಾಮ ಓನ್, ಸೇವಾಸಿಂಧು ಕೇಂದ್ರಗಳು ಅವ್ಯಾಹತವಾಗಿ ನಡೆಸುವಲ್ಲಿ ನೊಂದಣಿ ಹಾಗೂ ನವೀಕರಣ ನಿಲ್ಲಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಕೆಲ ಭ್ರಷ್ಟ ನೌಕರರು ಇದರ ಜತೆ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮವಹಿಸಬೇಕು. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂಧಿಸಿಲ್ಲ. ಬದಲಾಗಿ ನೈಜ ಕಾರ್ಮಿಕರು ಅವರ ಕುಟುಂಬಕ್ಕೆ ಸಿಗಬೇಕಾದ ನ್ಯಾಯ ಬದ್ದ ಸೌಲಭ್ಯಗಳನ್ನು ತಡೆಹಿಡಿದಿದ್ದಾರೆ” ಎಂದು ಸರ್ಕಾರದ ನಡೆಯನ್ನು ಸಂಘಟನೆಯು ಖಂಡಿಸಿದೆ. ಪೊಸ್ಟ್ ಕಾರ್ಡ್‌ ಚಳವಳಿ

ಸರ್ಕಾರ ಮತ್ತು ಕಾರ್ಮಿಕರ ಸಚಿವರು ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಒತ್ತಾಯಿಸಿದ್ದು, ಒಂದು ವೇಳೆ ಮನವಿಗೆ ಸ್ಪಂದಿಸದೆ ಇದ್ದಲ್ಲಿ, ನವೆಂಬರ್ 28 ರಿಂದ ಬೆಂಗಳೂರಿನಲ್ಲಿರುವ ಕಲ್ಯಾಣ ಮಂಡಳಿ ಮುಂಭಾಗದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು, ಮಕ್ಕಳು ಹಾಗೂ ಅವರ ಕುಟುಂಬದವರು ಅನಿರ್ದಿಷ್ಟ ಹೋರಾಟ‌ ನಡೆಸಲು ನಿರ್ಧರಿಸಿದ್ದಾರೆ ಎಂದು ಸಂಘಟನೆಯು ಎಚ್ಚರಿಸಿದೆ. ಪೊಸ್ಟ್ ಕಾರ್ಡ್‌ ಚಳವಳಿ

ವಿಡಿಯೊ ನೋಡಿ: ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *