ಅಂಬೇಡ್ಕರ್ ಜಯಂತಿ: ಬದುಕು–ಬರಹ ಕುರಿತ ರಾಜ್ಯ ಮಟ್ಟದ ಸ್ಪರ್ಧೆ

ಬೆಂಗಳೂರು: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯು ಏಪ್ರೀಲ್ 12 ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ನಡೆಯಲಿದೆ. ಜಯಂತಿ

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ,ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ,ಎಲ್ಲ ಆಸಕ್ತರಿಗೂ ಮುಕ್ತ ಅವಕಾಶವಿರುತ್ತದೆ.ರಾಜ್ಯದ ಯಾವುದೇ ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ಭಾಗವಹಿಸಬಹುದು.ಮೊದಲ ಸುತ್ತಿನಲ್ಲಿ 50 ಅಂಕಗಳ ಬಹುಆಯ್ಕೆ ಮಾದರಿಯ ಸುತ್ತು , ಈ ಸುತ್ತಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮೊದಲ 12 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗುತ್ತಾರೆ.

ಇದನ್ನೂ ಓದಿ: ತಾನು ಮಾಲೀಕತ್ವ ವಹಿಸದ ಕಂಪನಿಗೆ 14.66 ಕೋಟಿ ರೂ. ತೆರಿಗೆ ನೋಟಿಸ್; ರೈತನಿಗೆ ಶಾಕ್‌!

ಈ 12 ಅಭ್ಯರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಎರಡನೇ ಹಂತದ ಮೌಖಿಕ ಸುತ್ತು ನಡೆಸಲಾಗುವುದು.ವಿಜೇತ ತಂಡಗಳಿಗೆ 50 ಸಾವಿರ ರೂ. ಪ್ರಥಮ ಬಹುಮಾನ, 30 ಸಾವಿರ ರೂ.ದ್ವಿತೀಯ ಬಹುಮಾನ ಹಾಗೂ 20 ಸಾವಿರ ರೂ.ಗಳ ತೃತೀಯ ಬಹುಮಾನ ನೀಡಲಾಗುವುದು.ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ರಸಪ್ರಶ್ನೆ ಸ್ಪರ್ಧೆಯ ಪಠ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಶಿಕ್ಷಣ, ರಾಷ್ಟ್ರೀಯ ಹೋರಾಟ,ಭಾರತ ಸಂವಿಧಾನ ರಚನೆ,ಶಿಕ್ಷಣ, ಸಂಘಟನೆ,ಹೋರಾಟ ತತ್ವಗಳು,ಚಿಂತನೆಗಳು,ಮೀಸಲಾತಿ,ಮಹಿಳಾ ಹಕ್ಕುಗಳು,ಜಾಗತಿಕ ಮಹಾನಾಯಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಸ್ತುತ ದಿನಮಾನದ ಸುತ್ತ ಮುತ್ತ ನಡೆಯಲಿದೆ. ಆಸಕ್ತರು ಏ.11ರೊಳಗೆ ಎಸ್.ಎಸ್.ತೆಮಿನಾಳ ಮೊ.9740421421, ಶ್ರೀನಿವಾಸ ದೇಸಾಯಿ ಮೊ.9845808941, ಸುರೇಶ್ ಅಂಕೋಲಿ ಮೊ. 9901797951, ಅಮರೇಗೌಡ ಮೊ. 9902180043 ಹಾಗೂ ಭರಮಪ್ಪ ಮೊ.9731799080ಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದಿದ್ದಾರೆ

ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media

Donate Janashakthi Media

Leave a Reply

Your email address will not be published. Required fields are marked *