ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯು ನಾಳೆ (ಮೇ 8, 2024) 8 ಲಕ್ಷಕ್ಕೂ ಅಧಿಕ 10ನೇ ತರಗತಿ ಪರೀಕ್ಷೆ ಬರೆದ ಸ್ಟೂಡೆಂಟ್‌ಗಳ ರಿಸಲ್ಟ್ ಪ್ರಕಟಿಸುವುದಾಗಿ ಈ ಹಿಂದೆ ತಿಳಿಸಿದ್ದು. ಆದರೆ ಇದೀಗ ರಿಸಲ್ಟ್ ಪ್ರಕಟಿಸಲು ಇನ್ನು ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಈಗ ಫಲಿತಾಂಶ ಬಿಡುಗಡೆ ದಿನವನ್ನು ಇನ್ನೆರಡು ದಿನಕ್ಕೆ ಮುಂದೂಡಲಾಗಿದೆ ಎಂದು ಮಂಡಲಿಯ ಮೂಲಗಳು ತಿಳಿಸಿವೆ. ಫಲಿತಾಂಶ
ಇದನ್ನು ಓದಿ : ಮತದಾನ ಮಾಡುವಾಗ ರೀಲ್ಸ್ ಮಾಡಿ ಹಂಚಿಕೊಂಡ ಆರೋಪ; ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಎಂದು ನಡೆಸಲಾಗುತ್ತಿದೆ. ಈಗ ಪರೀಕ್ಷೆ-1 ಅಷ್ಟೆ ನಡೆಸಲಾಗಿದೆ. ಈ ರಿಸಲ್ಟ್ ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ಮೇ 7 ರಂದೇ ಬಿಡುಗಡೆ ಮಾಡಲು ಅವಕಾಶಗಳಿದ್ದವು. ಆದರೆ ಇಂದು ಕರ್ನಾಟಕವು ಸೇರಿ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಸಲಾಗುತ್ತಿದೆ. ಅದಲ್ಲದೇ ಈಗ ತಾಂತ್ರಿಕ ಕೆಲಸಗಳು ವಿಳಂಬವಾದ ಕಾರಣ ಇನ್ನೆರಡು ದಿನ ರಿಸಲ್ಟ್ ಮುಂದಕ್ಕೆ ಹೋಗಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶವು ಮುಂದಿನ ಉನ್ನತ ಶಿಕ್ಷಣಗಳಿಗೆ ಬಹಳ ಮಹತ್ವವಾಗಿದೆ. ಹಲವು ಉನ್ನತ ಶಿಕ್ಷಣಗಳಿಗೆ ಅಡಿಪಾಯದ ವಿಷಯವನ್ನು ಎಸ್‌ಎಸ್‌ಎಲ್‌ಸಿ ನಂತರವೇ ಆಯ್ಕೆ ಮಾಡಿಕೊಳ್ಳಬೇಕಿದ್ದು, ಈ ರಿಸಲ್ಟ್‌ನಲ್ಲಿನ ಅಂಕಗಳು ಸೀಟು ಗಿಟ್ಟಿಸಲು ಸಹ ಅತ್ಯಮೂಲ್ಯವಾಗಿವೆ. ಅದರಲ್ಲೂ ವಿಜ್ಞಾನ ವಿಷಯಗಳಲ್ಲಿ, ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಲ್ಲಿ ಆಸಕ್ತಿ ಇರುವವರು ಸರ್ಕಾರಿ ಕಾಲೇಜುಗಳ ಸೀಟುಗಳನ್ನು ಹಾಗೂ ಪ್ರಖ್ಯಾತ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಬೇಕು ಎಂದರೆ ಅತಿಹೆಚ್ಚು ಅಂಕಗಳನ್ನು (ಶೇಕಡ.90 ಕ್ಕಿಂತ ಹೆಚ್ಚು) ಪಡೆಯಬೇಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಿಸಲ್ಟ್ ದಿನಾಂಕ, ಸಮಯವನ್ನು ಈ ಕೆಳಗಿನಂತೆ ತಿಳಿಸಲಾಗಿದೆ ನೋಡಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಿಸಲ್ಟ್ ಪ್ರಕಟಣೆಯ ಪರಿಷ್ಕೃತ ದಿನಾಂಕ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ದಿನಾಂಕ : 09-05-2024 ಅಥವಾ 10-05-2024
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಸಮಯ : ಬೆಳಿಗ್ಗೆ 11-00 ಗಂಟೆಗೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ವೆಬ್‌ಸೈಟ್‌ಗಳು
https://kseab.karnataka.gov.in
https://karresults.nic.in
https://sslc.karnataka.gov.in
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ – ಮಹಿಳೆಯರ ಘನತೆಗೆ ಕುಂದುಂಟು ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಆಗ್ರಹ Janashakthi Media