ಕಾರ್ತಿಕ್‌ ಗೌಡ ವಿದೇಶಕ್ಕೆ ಹೋಗಿದ್ದಾನೆ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌‍ ಪ್ರತ್ಯುತ್ತರ

Please follow and like us:
ಬೆಂಗಳೂರು : ಮಾಜಿಮುಖ್ಯಮಂತ್ರಿ ಹಾಗೂ ಜೆಡಿಎಸ್‌‍ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾರ್ತಿಕ್‌ ಗೌಡ ವಿದೇಶಕ್ಕೆ ಹೋಗಿದ್ದಾನೆ ಎಂದು  ಬಿಂಬಿಸಿದ್ದರು. ಆದರೆ ಆತ ರಾಜ್ಯದಲ್ಲೇ ಇದ್ದು ಮಾಧ್ಯಮಗಳ ಮುಂದೆ ಹಾಜರಾಗಿದ್ದಾನೆ ಎಂದು ಕಾಂಗ್ರೆಸ್‌‍ ತಿಳಿಸಿದೆ.

ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬ್ರದರ್‌ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಲಾಗಿದೆ.

ಇದನ್ನು ಓದಿ : ವೆಸ್ಟ್ ನೈಲ್ ಜ್ವರ: ಗಡಿಭಾಗಗಳಲ್ಲಿ ಹೆಚ್ಚಿದ ಆತಂಕ

ಡ್ರೈವರ್‌ ಕಾರ್ತಿಕ್‌ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ, ಯಾರೋ ಕಳಿಸಿದ್ದಾರೆ ಎಂದು ಕುಮಾರಸ್ವಾಮಿ ಬಾಯಿ ಬಡಿದುಕೊಂಡಿದ್ದರು. ಆದರೆ ಅವರ ಬಳಿ ಪಾಸ್‌‍ರ್ಪೋರ್ಟ್‌ ಇಲ್ಲವಂತೆ ಹಾಗೂ ಅವರು ರಾಜ್ಯದಲ್ಲೇ ಇದ್ದು ಚಾನಲ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌‍ ಸ್ಪಷ್ಟ ಪಡಿಸಿದೆ.

ಬ್ರದರ್‌ ಸ್ವಾಮಿಯ ಸುಳ್ಳಿನ ಫ್ಯಾಕ್ಟರಿ ಜೊತೆಗೆ ಬಿಜೆಪಿಯ ಫೇಕ್‌ ಫ್ಯಾಕರಿಯೂ ಸೇರಿ ಸುಳ್ಳಿನ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌‍ ವಾಗ್ದಾಳಿ ನಡೆಸಿದೆ.

ಇದನ್ನು ನೋಡಿ : ದ್ವೇಷದ ಜಾಹೀರಾತಿನ ಮೂಲಕ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಬಿಜೆಪಿಯವರ ಮೇಲೆ ಕ್ರಮಕ್ಕೆ ಆಗ್ರಹJanashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *