ಬೆಂಗಳೂರು| ಬಿಜೆಪಿ ಪಕ್ಷ ತೊರೆಯುವುದಾಗಿ ಹೇಳಿದ ಶ್ರೀರಾಮುಲು

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದ ರಾಧಾ ಮೋಹನ್ ದಾಸ್ ಸರಣಿ ಸಭೆ ನಡೆಸಿದ್ದಾರೆ. ನಿನ್ನೆ(ಜನವರಿ 21) ಕೋರ್ ಕಮಿಟಿ ಸಭೆಗೂ ಮುನ್ನ ಶಾಸಕರು, ಸಂಸದರು, ಪರಿಷತ್ ಸದಸ್ಯರು, ವೀಕ್ಷಕರು ಜೊತೆ ಸಭೆ ನಡೆಸಿದರು. ಬಳಿಕ ಸಂಜೆ ಕೋರ್‌ ಕಮಿಟಿ ಸಭೆಯೂ ನಡೆದಿದ್ದು, ಈ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಉಸ್ತುವಾರಿ ರಾಧಾ ಮೋಹನ್ ದಾಸ್ ವಿರುದ್ಧ ಕೆಂಡಾಮಂಡಲರಾಗಿದ್ದು, ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ದೂರವಾಣಿ ಮೂಲಕ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ.

ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು ಈ ವೇಳೆ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಬಿ.ಶ್ರೀರಾಮುಲು ಮೇಲೆಯೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಗಂಭೀರ ಆರೋಪ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಸಭೆಯಲ್ಲೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನವದೆಹಲಿ| ಉನ್ನಾವೊ ಅತ್ಯಾಚಾರ ಪ್ರಕರಣ: ಜಾಮೀನು ವಿಸ್ತರಣೆ ನಿರಾಕರಿಸಿದ ಹೈಕೋರ್ಟ್‌

ಶ್ರಿರಾಮುಲು ಪಕ್ಷ ತೊರೆಯುವ ಮಾತು

ರಾಧಾಮೋಹನ್ ದಾಸ್​ ಅಗರ್ವಾಲ್​ ಏನೋ ಉತ್ತರ ಪ್ರದೇಶದವರು. ರಾಜ್ಯಾಧ್ಯಕ್ಷರಾಗಿ ನೀವಾದರೂ ಹೇಳಿ ನಮ್ಮ ರಕ್ಷಣೆಗೆ ಬರಬೇಕಲ್ಲವೇ? ಎಂದು ವಿಜಯೇಂದ್ರ ಅವರನ್ನು ಹೇಳಿದ್ದಾರೆ. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಇಲ್ಲ, ನನ್ನ ಬಗ್ಗೆಯೂ ಹೀಗೆ ಹೇಳಿದ್ದಾರೆ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಮುಲು, ನಿಮಗೆ ಇಷ್ಟ ಇಲ್ಲ ಅಂತಾದರೆ ಬೇಕಾದರೆ ನಾನು‌ ಪಕ್ಷ ಬಿಡುತ್ತೇನೆ. ಆದರೆ ಪಕ್ಷ ಬಿಡುವ ಮುನ್ನ ಏನು ಆಗಿದೆ ಎಂದು ಹೇಳಿ ಬಿಡುತ್ತೇನೆ. ಮೋದಿ, ಶಾ, ಹೈಕಮಾಂಡ್ ಎಲ್ಲರಿಗೂ ಏನು ಆಗಿದೆ ಎಂದು ಹೇಳುತ್ತೇನೆ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಇಲ್ಲಿ ಸುಮ್ಮನಿದ್ದರೆ ಬೆಲೆಯೇ ಇಲ್ಲ . ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ನೋಡಿ: APS ಹೈಸ್ಕೂಲ್ ನೆನಪುಗಳನ್ನು ಕನ್ನಡದಲ್ಲಿ ಹಂಚಿಕೊಂಡ ರಜನೀಕಾಂತ್ Janashakthi Media

Donate Janashakthi Media

Leave a Reply

Your email address will not be published. Required fields are marked *