ರಾಯಚೂರು: ಚಿಕ್ಕಸುಗೂರು ನಲ್ಲಿ ನಡೆಯುತ್ತಿರುವ ಸ್ಥಳೀಯ ಕ್ರಿಕೆಟ್ ಚಿಕ್ಕಸೂಗೂರು ಪ್ರೀಮಿಯರ್ ಲೀಗ್ ಸೀಸನ್-3 ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದೇವಸೂಗೂರು ಬ್ಲಾಕ್ ಕಾಂಗ್ರೆಸ್ (ಅ.ವಿ) ಕಾರ್ಯದರ್ಶಿಯಾದ ಮುಜಾಹಿದ್ ಮರ್ಚೆಡ್ ಇವರು ಇಂದು ನಡೆದ ಎಲಿಮೆನೇಟರ್ ಪಂದ್ಯಾ ದಿನವಾದ ಇಂದು ಹಿಟ್ಮ್ಯಾನ್ ಎಲೆವೇನ್ ವಿರುದ್ಧ ವಿಜೇತವಾದ ಅಫಿನ್ ಎಲೆವೆನ್ ತಂಡದ ರಫಿಶೇಖ್ ಅವರಿಗೆ ಪಂದ್ಯ ಪುರುಷೋತ್ತಮ ಪದಕದ ಜೊತೆಗೆ ನಗದು ಬಹುಮಾನವನ್ನು ವಿತರಿಸಿ ಮಾತನಾಡಿದ ಅವರು ಇಂತಹ ದೊಡ್ಡ ಅಂದರೆ ಸುಮಾರು 1 ತಿಂಗಳು ನಡೆಯುತ್ತಿರುವ ಒಟ್ಟು 8 ತಂಡಗಳು ಆಡುತ್ತಿರುವ ಈ ಲೀಗ್ ಆತೀಥಿ ಆಗಲು ಪ್ರಶಸ್ತಿ ಪ್ರಧಾನ ಮಾಡುವ ಅವಕಾಶ ಲಭಿಸಿತು. ಈ ಅವಕಾಶವನ್ನು ನನಗೆ ನೀಡಿದ ಆಯೋಜಕರಿಗೆ ನಾನು ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಕ್ರೀಡೆ
ಕ್ರಿಕೆಟ್ ಕೇವಲ ಒಂದು ಆಟವಲ್ಲ, ಇದು ಶಿಸ್ತು, ತಂಡಸ್ಫೂರ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಸಾಧನವಾಗಿದೆ. ಈ ಕ್ರೀಡೆಯ ಮೂಲಕ ಆಟಗಾರರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಕ್ರಿಕೆಟ್ ಆಟದಲ್ಲಿ ಶ್ರದ್ಧೆ, ಪರಿಶ್ರಮ ಮತ್ತು ಸಮರ್ಪಣಾ ಭಾವನೆ ಅಗತ್ಯವಾಗಿದ್ದು, ಈ ಗುಣಗಳು ಜೀವನದ ಇತರ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ತರುವಲ್ಲಿ ಸಹಾಯಕವಾಗುತ್ತವೆ.
ಸ್ಥಳೀಯ ಮಟ್ಟದಲ್ಲಿ ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗುತ್ತದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಐಪಿಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್
ಇಂತಹ ಟೂರ್ನಮೆಂಟ್‌ಗಳು ಕ್ರೀಡೆಗಳು ಯುವಕರಲ್ಲಿ ಕ್ರೀಡಾ ಮನೋಭಾವನೆ ಮತ್ತು ಆರೋಗ್ಯಕರ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುತ್ತವೆ. ಕ್ರೀಡೆಗಳು ದೈಹಿಕ ಸದೃಢತೆ, ಶಿಸ್ತು ಮತ್ತು ಒಗ್ಗಟ್ಟಿನ ಮಹತ್ವವನ್ನು ಕಲಿಸುವ ಮೂಲಕ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರು ತಮ್ಮ ಸಮಯವನ್ನು ಸಕಾರಾತ್ಮಕವಾಗಿ ಬಳಸುತ್ತಾರೆ, ಇದು ಅವರನ್ನು ದುಶ್ಚಟಗಳಿಂದ ದೂರವಿರಿಸಲು ಸಹಾಯಕವಾಗುತ್ತದೆ. ನಾನು ಎಲ್ಲಾ ಯುವಕರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತೇನೆ, ಏಕೆಂದರೆ ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಸುತ್ತದೆ.
ಈ ಪಂದ್ಯಾವಳಿ ಆಯೋಜಕರಾದ ರಾಘವೇಂದ್ರ ನಮಾಲಿ ಹಾಗೂ ತಂಡಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಮತ್ತು ಭವಿಷ್ಯದಲ್ಲಿಯೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರೀಕ್ಷಸುತ್ತೇನೆ ಎಂದು ಮುಜಾಹಿದ್ ಮರ್ಚೆಡ್ ಇವರು ಹೇಳಿದರು ಈ ಸಂಧರ್ಭದಲ್ಲಿ ಬಾಷಾ ನಾಯಕ್, ಬಂದೇನವಾಜ್, ಬಾಬಾ ನಲಪಾಡ್, ರುಕುಮೊನುದ್ದಿನ್, ಎಮ್.ಡಿ.ಬಾಬು, ರಜಾಕ್, ಶಾಲಂ ಮತ್ತು ತಂಡಗಳ ಆಟಗಾರರು, ಅಭಿಮಾನಿ ಪ್ರೇಕ್ಷಕರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ವಚನಾನುಭವ – 26 |ಅಂಬಿಗರ ಚೌಡಯ್ಯನ ವಚನ ; ಹರಿ ಹರಿಯೆಂದು ಹೊಡವಡುವಿರಿ. ನಿಮ್ಮ ನಡೆಯಲ್ಲಾ ಅನಾಚಾರ Janashakthi Media