ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿ 15 ಮಂದಿ ಸಾವು

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್ ಸಮೀಪದ ಸೊವೆಟೋ ಪಟ್ಟಣದಲ್ಲಿನ ಬಾರ್ ಒಂದರಲ್ಲಿ ಭಾರಿ ಶೂಟೌಟ್‌ ನಡೆದಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಮಿನಿಬಸ್ ನಲ್ಲಿ ಬಂದ ಕೆಲ ವ್ಯಕ್ತಿಗಳು ಬಾರ್‌ನಲ್ಲಿದ್ದ ಕೆಲವು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಹಲವಾರು ಜನ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಲ್ಲಿನ ಪೊಲೀಸರು ʻನಮಗೆ ಭಾನುವಾರ ಮುಂಜಾನೆ 12.30ರ ವೇಳೆಗೆ ಕರೆ ಬಂದಿತ್ತು. ಸ್ಥಳಕ್ಕೆ ಬಂದಾಗ ಅದಾಗಲೇ 12 ಮಂದಿ ಮೃತಪಟ್ಟಿದ್ರುʼ ಅಂತ ಹೇಳಿದ್ದಾರೆ.

ಶನಿವಾರ ತಡರಾತ್ರಿ ಮಿನಿಬಸ್ ಟ್ಯಾಕ್ಸಿಯಲ್ಲಿ ಬಂದ ದುಷ್ಕರ್ಮಿಗಳ ಗುಂಪು, ಬಾರ್‌ನಲ್ಲಿ ಕೆಲವು ಪೋಷಕರ ಮೇಲೆ ಗುಂಡು ಹಾರಿಸಿದ್ದಾರೆ. ಹೊಟೇಲ್ ನಲ್ಲಿ ಆನಂದದಿಂದಿರುವಾಗ ಇದ್ದಕ್ಕಿದ್ದಂತೆ ಕೆಲವು ಗುಂಡಿನ ಶಬ್ದ ಕೇಳಿದ್ದಾರೆ. ತಕ್ಷಣ ಅಲ್ಲಿದ್ದ ಜನರು ಹೋಟೆಲಿನಿಂದ ಹೊರಬರಲು ಪ್ರಯತ್ನಿಸಿದರು. ಗುಂಡಿನ ದಾಳಿ ನಡೆಸಿದವರ ಉದ್ದೇಶವೇನು ಮತ್ತು ಅವರು ಇದೆ ಜನರನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂಬ ಸಂಪೂರ್ಣ ವಿವರಗಳು ನಮ್ಮ ಬಳಿ ಇಲ್ಲ ಎಂದು ಅವರು ಹೇಳಿದರು.

ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಗೌಟೆಂಗ್ ಪ್ರಾಂತ್ಯದ ಪೊಲೀಸ್ ಕಮಿಷನರ್ ಲೆಫ್ಟಿನೆಂಟ್ ಜನರಲ್ ಎಲಿಯಾಸ್ ಮಾವೆಲಾ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *