ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಇಂದು ಉಮೇದುವಾರಿಕೆ ಸಲ್ಲಿಸಿದರು.
ಸೌಮ್ಯಾರೆಡ್ಡಿ, ಜಯನಗರ ಎರಡನೇ ಹಂತದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಶಾಸಕ ಕೃಷ್ಣಪ್ಪ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ನಾಮಪತ್ರ ಸಲ್ಲಿಕೆ ವೇಳೆ ಇದ್ದರು.
ಇದನ್ನುಓದಿ : ಬಿಜೆಪಿಯಿಂದ ಮಹಿಳೆಯರ ಅವಮಾನಗೊಳಿಸುವ ಜಾಹೀರಾತು: ಮಹಿಳಾ ಸಂಘಟನೆಗಳ ಆಕ್ರೋಶ
ಬಳಿಕ ಮಾತನಾಡಿದ ಸೌಮ್ಯ ರಾಮಲಿಂಗಾ ರೆಡ್ಡಿ, ಎಲ್ಲಾ ಕಡೆ ಮೂರ್ನಾಲ್ಕು ವಾರದಿಂದ ಕ್ಷೇತ್ರದಲ್ಲಿ ಸುತ್ತಾಡಿದ್ದೇವೆ.
ಡಿಸಿಎಂ ಡಿ.ಕೆ ಶಿವಕುಮಾರ್, ಸೇರಿದಂತೆ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೆ ಬಂದಿದ್ದಾರೆ.ಹತ್ತು ವರ್ಷದಿಂದ ಅಚ್ಚೇ ದಿನ ಬರುವುದಾಗಿ ಬಿಜೆಪಿ ಹೇಳುತ್ತಲೇ ಇದೆ. ಆದರೆ ಬಿಜೆಪಿ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕೇಂದ್ರದ ಬಿಜೆಪಿ ಆಡಳಿತದಿಂದ ಜನರಿಗೆ ತುಂಬಾ ಬೇಸರವಾಗಿದೆ. ಕಾಂಗ್ರೆಸ್ ನ ಗ್ಯಾರಂಟಿಗಳ ಬಗ್ಗೆ ಮಹಿಳೆಯರು ಮಾತನ್ನಾಡ್ತಿದಾರೆ.ಆದರೆ ಅದೆಲ್ಲಾ ಸುಳ್ಳಾಗಿದೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಬರಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಹೇಳಿದರು.
ಇದನ್ನು ನೋಡಿ : fact check units ಎನ್ನುವ ‘ಮೋದಿ-ಶಾ ಹದ್ದಿನ ಕಣ್ಣು Janashakthi Media